More

    ನೀವು ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಇದನ್ನು ಓದಿ.. ಗಮನದಲ್ಲಿರಲಿ…

    ಬೆಂಗಳೂರು: ಸ್ಮಾರ್ಟ್​ಫೋನ್​ ಇದ್ದೂ ವಾಟ್ಸ್​ಆ್ಯಪ್​ ಇಲ್ಲದವರು ಇಲ್ಲವೇ ಇಲ್ಲ ಎಂದರೂ ಸರಿಯೇ ಎಂಬಷ್ಟರ ಮಟ್ಟಿಗೆ ವಾಟ್ಸ್​ಆ್ಯಪ್​ ಬಳಸುತ್ತಿರುವ ಗ್ರಾಹಕರು ಕೋಟಿಗಟ್ಟಲೆ ಸಂಖ್ಯೆಯಲ್ಲಿದ್ದಾರೆ. ತಕ್ಷಣಕ್ಕೆ ಏನೇ ಒಂದು ಮಾಹಿತಿ, ಫೋಟೋ-ವಿಡಿಯೋ ರವಾನೆ ಆಗಬೇಕೆಂದರೂ ಸಾಮಾನ್ಯವಾಗಿ ಮೊದಲು ಮೊರೆಹೋಗುವುದೇ ವಾಟ್ಸ್​ಆ್ಯಪ್​ಗೆ. ಹೀಗಿರುವಾಗ ಒಂದು ವೇಳೆ ವಾಟ್ಸ್​ಆ್ಯಪ್​ ಖಾತೆಯಲ್ಲಿ ಮುಂದುವರಿಯಲು ಆಗದಿದ್ದರೆ..?!

    ಹೌದು.. ಮುಂದಿನ ವರ್ಷ ಇದ್ದಕ್ಕಿದ್ದಂತೆ ನಿಮ್ಮ ವಾಟ್ಸ್​ಆ್ಯಪ್​ ಅಕೌಂಟ್ ಡಿಸ್​​ಕನೆಕ್ಟೆಡ್​ ಆದರೂ ಆಗಬಹುದು. ಏಕೆಂದರೆ ಅಂಥದ್ದೊಂದು ಅಪ್​ಡೇಟ್​ಗೆ ವಾಟ್ಸ್​ಆ್ಯಪ್​ ಸಜ್ಜಾಗಿದೆ. ವಾಟ್ಸ್​ಆ್ಯಪ್​ನ ಮುಂದಿನ ಷರತ್ತುಗಳನ್ನು ಒಪ್ಪಿಕೊಳ್ಳದಿದ್ದರೆ ನಿಮ್ಮ ಖಾತೆಯನ್ನು ಬಳಸಲು ಸಾಧ್ಯವಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ. 2021ರ ಫೆ. 8ರಂದು ವಾಟ್ಸ್​ಆ್ಯಪ್​ ಹೊಸ ಷರತ್ತುಗಳನ್ನು ಪ್ರಕಟಿಸಲಿದ್ದು, ಬಳಕೆದಾರರು ಮುಂದುವರಿಯಲು ಅದಕ್ಕೆ ಒಪ್ಪಿಗೆ ಸೂಚಿಸುವುದು ಅನಿವಾರ್ಯ ಎನ್ನಲಾಗಿದೆ.

    ವಾಟ್ಸ್​ಆ್ಯಪ್​ ತನ್ನ ಡೇಟಾಗಳನ್ನು ಹೇಗೆ ನಿಭಾಯಿಸಲಿದೆ ಎಂಬ ಬಗ್ಗೆ ಇದರಲ್ಲಿ ಮಾಹಿತಿಗಳು ಇರಲಿವೆ. ಫೇಸ್​ಬುಕ್​ ಮಾಲೀಕತ್ವದ ಈ ವಾಟ್ಸ್​ಆ್ಯಪ್​ ಮೂಲಕ ಹೇಗೆ​ ಚಾಟ್​ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯೂ ಇರಲಿದೆ. ಮುಂದಿನ ಅಪ್​ಡೇಟ್ಸ್​ ಮೂಲಕ ವಾಟ್ಸ್ಆ್ಯಪ್​ ಬಳಕೆದಾರರಿಗೆ ಜಾಹೀರಾತಿರದ ಕೆಲವು ಮಾಹಿತಿಗಳನ್ನು ನೀಡಲಾಗುತ್ತದೆ. ಇದನ್ನು ನೇರವಾಗಿ ಚಾಟ್​ ರೂಪದಲ್ಲಿ ಕಳುಹಿಸದಿದ್ದರೂ ಇನ್​ ಆ್ಯಪ್​ ಬ್ಯಾನರ್​ ಥರ ಕಳುಹಿಸಲಾಗುವುದು. ಇದನ್ನು ಕ್ಲಿಕ್​ ಮಾಡಿದರೆ ಹೊರಗಿನ ಸೈಟ್​ಗೆ ಕರೆದೊಯ್ಯಲಿದೆ ಎಂಬುದು ಕಂಪನಿ ಮೂಲಗಳಿಂದ ತಿಳಿದುಬಂದಿದೆ. ಈ ಕುರಿತ ಎಲ್ಲ ಮಾಹಿತಿಗಳು 2021ರ ಫೆ. 8ರ ಅಪ್​ಡೇಟ್ಸ್​ನಲ್ಲಿ ಬರುವ ಷರತ್ತಿನಲ್ಲಿ ಇರಲಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದರೆ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಮುಂದುವರಿಯಲು ಸಾಧ್ಯ ಎನ್ನಲಾಗಿದೆ. (ಏಜೆನ್ಸೀಸ್​)

    ‘ಒಬ್ಬನ ತಲೆ ಕಡಿದೆ, ಇನ್ನೊಬ್ಬನ ಇರಿದೆ, ಮತ್ತೊಬ್ಬನ ಕತ್ತರಿಸಿದೆ…ಅವರ್ಯಾರೋ ನಂಗೊತ್ತಿಲ್ಲ… ಆಹಾ! ಅದೆಂಥ ನೆಮ್ಮದಿ..’

    ತಂದೆಯವರು ನನ್ನ ತಮ್ಮ, ಅವನ ಪತ್ನಿಗೆ ಆಸ್ತಿ ಬರೆದಿದ್ದು ನನಗೇನೂ ಕೊಟ್ಟಿಲ್ಲ- ಕೇಸ್​ ಹಾಕಬಹುದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts