More

    ಮಮತಾ ದೀದಿಗೆ ‘ನೀವು ನನ್ನ ತಂಗಿ, ದಯವಿಟ್ಟು ಬಂಗಾಳದಲ್ಲಿ ಶಾಂತಿ ಕಾಪಾಡಿ’ ಎಂದ ರಾಜ್ಯಪಾಲ ಜಗದೀಪ ಧನಕರ್…

    ಕಲ್ಕತ್ತ: ಪಶ್ಚಿಮ ಬಂಗಾಳದ ಸತತ ಮೂರನೇ ಮುಖ್ಯಮಂತ್ರಿಯಾಗಿ ಟಿಎಂಸಿಯ ಅಧಿನಾಯಕಿ ಮಮತಾ ಬ್ಯಾನರ್ಜಿ ಬುಧವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಜಗದೀಪ್ ಧನಕರ್ ಅವರು ಪ್ರಮಾಣವಚನ ಬೋಧಿಸಿದರು.

    ಈ ವೇಳೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಮತಾಗೆ ರಾಜ್ಯಪಾಲರು ಬುದ್ಧಿಮಾತು ಹೇಳಿದರು. ಬಂಗಾಳದಲ್ಲಿ ಎದ್ದಿರುವ ಹಿಂಸಾಚಾರದ ಬಗ್ಗೆ ಮುಖ್ಯಮಂತ್ರಿಯವರು ಖಂಡಿತ ನಿಗಾ ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಹಿಂಸೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದು ಅವರ ಮೊದಲ ಆದ್ಯತೆಯಾಗಿರಬೇಕಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮಗಳನ್ನು ನನ್ನ ತಂಗಿ ಮಮತಾ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಜಗದೀಪ್ ಹೇಳಿದ್ದಾರೆ.

    ಇದೇ ವೇಳೆ ಪ್ರಮಾಣವಚನದ ನಂತರ ಮಮತಾ ಅವರು ರಾಜ್ಯದಲ್ಲಿ ಎಲ್ಲರಿಗೂ ಉಚಿತವಾಗಿ ಕೋವಿಡ್​19 ಲಸಿಕೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೇ ಹಿಂಸಾಚಾರ ನಡೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ನಿನ್ನೆಯವರೆಗೂ ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವುದು ಚುನಾವಣಾ ಆಯೋಗದ ಹೊಣೆಯಾಗಿತ್ತು. ಇನ್ಮುಂದೆ ಅದರ ಹೊಣೆ ನಮ್ಮದು ಎಂದು ಹೇಳಿದ್ದಾರೆ.

    ಇನ್ನೊಂದೆಡೆ ಬಂಗಾಳದಲ್ಲಿ ಬುಧವಾರ ಕೂಡ ಅಲ್ಲಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹಿಂಸಾಚಾರಗಳು ನಡೆದಿರುವುದು ವರದಿಯಾಗಿದೆ.

    ‘ಕೂ’ ವೇದಿಕೆಗೆ ಕಂಗನಾಳನ್ನು ಕೂಗಿ ಕರೆದರು: ಇನ್ಮುಂದೆ ಇದೇ ನನ್ನ ಸ್ವಂತ ಮನೆ ಎಂದು ಟ್ವಿಟ್ಟರ್​ಗೆ ಟಾಂಗ್ ಕೊಟ್ಟ ಬಾಲಿವುಡ್ ಬೆಡಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts