More

    ಅಸ್ತಮಾ ನಿಯಂತ್ರಣಕ್ಕೆ ಯೋಗ ಪ್ರಾಣಾಯಾಮ

    ನಾನು 12 ವರ್ಷಗಳಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದೆ, ಪೂರ್ತಿ ವಾಸಿಯಾಗಿಲ್ಲ. ಯೋಗ-ಮುದ್ರೆಗಳ ಪರಿಹಾರ ತಿಳಿಸಿ. ಯಾವ ಯೋಗಾಸನಗಳ ಅಭ್ಯಾಸ ಮಾಡಬೇಕು?

    | ಮಂಜುನಾಥ 20 ವರ್ಷ, ಚಿತ್ರದುರ್ಗ

    ಅಸ್ತಮಾ ನಿಯಂತ್ರಣಕ್ಕೆ ಯೋಗ ಪ್ರಾಣಾಯಾಮಅಸ್ತಮಾ ದೀರ್ಘಕಾಲದ ಶ್ವಾಸಕೋಶ ಕಾಯಿಲೆಯಾಗಿದ್ದು, ಇದರಲ್ಲಿ ವಾಯುಮಾರ್ಗಗಳು ಉಬ್ಬಿಕೊಳ್ಳುತ್ತವೆ ಮತ್ತು ಸಂಕುಚಿತಗೊಳ್ಳುತ್ತದೆ, ಇದರಿಂದಾಗಿ ಉಸಿರಾಟ ಕಷ್ಟವಾಗುತ್ತದೆ. ಅಸ್ತಮಾ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಯೋಗವು ಪ್ರಾಚೀನ ವ್ಯಾಯಾಮದ ರೂಪವಾಗಿದ್ದು ಅದು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯನ್ನು ಹೆಚ್ಚಿಸಲು ಶಕ್ತಿ, ನಮ್ಯತೆ ಮತ್ತು ಉಸಿರಾಟದ ಮೇಲೆ ಕೇಂದ್ರೀಕರಿಸುತ್ತದೆ. ಯೋಗದ ಪರಿಣಾಮಗಳು ಉಸಿರಾಟದ ಸಮನ್ವಯಕ್ಕೆ ಸಹಾಯ ಮಾಡುತ್ತವೆ ಮತ್ತು ಭಂಗಿಯು ಉಸಿರಾಟದ ಸ್ನಾಯುಗಳ ಉತ್ತಮ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಶ್ವಾಸಕೋಶದಲ್ಲಿನ ಶ್ವಾಸನಾಳದ ಕೊಳವೆಗಳು ಮತ್ತು ಗಾಳಿಯ ಚೀಲಗಳ ಮೂಲಕ ಗಾಳಿಯ ಮುಕ್ತ ಹರಿವಿನಿಂದಾಗಿ ಯೋಗ, ಪ್ರಾಣಾಯಾಮಗಳು ಅಸ್ತಮಾ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ. ಯೋಗಾಭ್ಯಾಸದಿಂದ ಅಸ್ತಮಾ ದಾಳಿಯು ಕಡಿಮೆಯಾಗುತ್ತದೆ. ತಾಜಾ ಗಾಳಿಗಾಗಿ ಶ್ವಾಸಕೋಶವನ್ನು ತೆರೆಯಲು, ಉಸಿರಾಟದ ವ್ಯಾಯಾಮಗಳು (ಪ್ರಾಣಾಯಾಮ) ಬಹಳ ಉಪಯುಕ್ತವಾಗಿವೆ. ಹೃದಯ ಮತ್ತು ಶ್ವಾಸಕೋಶದ ಸ್ಥಿತಿಯನ್ನು ಸುಧಾರಿಸಲು ಎದೆಯನ್ನು ತೆರೆಯಲು ಹಿಂದಕ್ಕೆ ಬಾಗುವ ಭಂಗಿಗಳು ಅಸ್ತಮಾ ದಾಳಿಯ ಸಮಯದಲ್ಲಿ ಉಸಿರಾಡಲು ಸಹಾಯಮಾಡುತ್ತದೆ.

    ಇದನ್ನೂ ಓದಿ   ಗೋಲ್ಡನ್ ಮಿಲ್ಕ್: ಅದ್ಭುತ, ಆದರೆ ಎಚ್ಚರ ಅಗತ್ಯ

    ಸೂಚಿತ ಆಸನ, ಪ್ರಾಣಾಯಾಮ, ಮುದ್ರೆಗಳು: ಆರಂಭಲ್ಲಿ ಕಪಾಲಭಾತಿ ಕ್ರಿಯೆ, ಸರಳ ಪ್ರಾಣಾಯಾಮ, ಸೂರ್ಯನಮಸ್ಕಾರ, ಅರ್ಧಚಕ್ರಾಸನ, ವೀರಭದ್ರಾಸನ, ವಜ್ರಾಸನ, ಪರ್ವತಾಸನ, ಶಶಾಂಕಾಸನ ಅರ್ಧ ಉಷ್ಟ್ರಾಸನ ಯಾ ಉಷ್ಟ್ರಾಸನ, ಸೇತುಬಂಧ ಸರ್ವಾಂಗಾಸನ, ಭುಜಂಗಾಸನ ಧನುರಾಸನ, ಚಕ್ರಾಸನ, ಊರ್ಧ್ವಮುಖ ಶ್ವಾನಾಸನ, ಶವಾಸನ. ತಲಾ ಹತ್ತು ನಿಮಿಷ ಭ್ರಾಮರಿ, ಉಜ್ಜಾಯಿ, ನಾಡೀಶುದ್ಧಿ ಪ್ರಾಣಾಯಾಮ ಅಭ್ಯಾಸ ಮಾಡಿ. ಲೋಳೆಯ ದಟ್ಟಣೆಯನ್ನು ಕಡಿಮೆ ಮಾಡಲು ತುಂಬ ಒಳ್ಳೆಯದು. ಅಸ್ತಮಾ ಮುದ್ರೆ, ಬ್ರಾಂಕೈಲ್ ಮುದ್ರೆ, ಶಂಖಮುದ್ರೆ, ಪ್ರಾಣಮುದ್ರೆ. ಯೋಗಚಿಕಿತ್ಸಕರ ಸಮ್ಮುಖದಲ್ಲಿ ಕಲಿತು ಅಭ್ಯಾಸ ಮಾಡಿ.

    ಭುಜಂಗಾಸನದ ಬಗ್ಗೆ ಮಾಹಿತಿ ತಿಳಿಸಿ.

    | ವಿಖ್ಯಾತ್ 20 ವರ್ಷ, ಬೆಂಗಳೂರು

    ಭುಜಂಗಾಸನಕ್ಕೆ ಕೋಬ್ರಾ ಭಂಗಿ ಎಂಬ ಹೆಸರಿದೆ. ಭುಜಂಗವೆಂದರೆ ಹಾವು ಎಂದರ್ಥ. ಈ ಭಂಗಿಯು ಹೆಡೆಯೆತ್ತಿರುವ ಸರ್ಪವನ್ನು ಹೋಲುತ್ತದೆ. ಇದನ್ನು ಸೂರ್ಯನಮಸ್ಕಾರಗಳ ಭಾಗವಾಗಿ ಅಭ್ಯಾಸ ಮಾಡಲಾಗುತ್ತದೆ.

    ಪ್ರಯೋಜನ: ಶ್ವಾಸಕೋಶದ ಮಾರ್ಗದಲ್ಲಿ ಸಮರ್ಪಕವಾಗಿ, ಸರಾಗವಾಗಿ ವಾಯುಸಂಚಾರವಾಗುತ್ತದೆ. ಉಬ್ಬಸ ಕಾಯಿಲೆಯು ನಿಯಂತ್ರಣ. ದಮ್ಮುಕಟ್ಟವುದು, ಎದೆ ಬಿಗಿತ ಕಡಿಮೆಯಾಗುತ್ತದೆ. ಬೆನ್ನಿನ ಬಿಗಿತವನ್ನು ಕಡಿಮೆ ಮಾಡುತ್ತದೆ. ಬೆನ್ನು ನೋವು ನಿವಾರಣೆಗೆ ಈ ಆಸನ ತುಂಬ ಸಹಕಾರಿ. ಮುಟ್ಟಿನ ದೋಷ ನಿಯಂತ್ರಣ, ಒತ್ತಡ, ಆಯಾಸ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ. ಎದೆಯು ವಿಶಾಲಗೊಳ್ಳುತ್ತದೆ. ಹದಿಹರೆಯದವರು ಭುಜಂಗಾಸನ ಮಾಡುವುದರಿಂದ ಶಾರೀರಿಕ ಬೆಳವಣಿಗೆಗೆ ಚಾಲನೆ ಸಿಗುವುದು. ಥೈರಾಯ್್ಡ ಮೊದಲಾದ ಅನೇಕ ಗ್ರಂಥಿಗಳ ಆರೋಗ್ಯ ವರ್ಧಿಸುತ್ತದೆ.

    ಗಮನಿಸಿ, ತೀವ್ರ ಕುತ್ತಿಗೆ ನೋವು ಇದ್ದವರು ಅಭ್ಯಾಸ ನಡೆಸುವುದು ಬೇಡ. ಇದರೊಂದಿಗೆ ಅಸ್ತಮಾ ರೋಗಿಗಳು ಸಮರ್ಪಕವಾದ ಆಹಾರ ಸೇವಿಸಬೇಕು. ಆಹಾರದಲ್ಲಿ ಪಥ್ಯವಿರಬೇಕು.

    ಶಿವಮೊಗ್ಗಕ್ಕೆ ಭಯೋತ್ಪಾದನೆ ನಂಟು ಇದೇ ಮೊದಲೇನಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts