More

    ನನಗಿದ್ದ ಒಂದೇ ಶ್ವಾಸಕೋಶಕ್ಕೆ ಅಂಟಿದ್ದ ಸೋಂಕನ್ನು ಯೋಗದಿಂದ ಗೆದ್ದೆ ಎಂದ ಕರೊನಾ ವಾರಿಯರ್‌!

    ಭೋಪಾಲ್‌: ಕರೊನಾ ಸೋಂಕಿತರಲ್ಲಿ ಬಹುಪಾಲು ಮಂದಿಗೆ ಕಾಡುವುದು ಉಸಿರಾಟದ ಸಮಸ್ಯೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲಿ ಪ್ರಾಣ ಕಳೆದುಕೊಂಡವರೇ ಅಧಿಕ ಮಂದಿ. ಇದಕ್ಕಾಗಿ ಉಸಿರಾಟದ ಸಮಸ್ಯೆ ನಿವಾರಣೆಗೆ ಯೋಗ, ಪ್ರಾಣಾಯಾಮವನ್ನು ಮಾಡಿ ಎಂದು ಮೊದಲ ದಿನದಿಂದಲೂ ಪ್ರಧಾನಿಯಾದಿಯಾಗಿ ಅನೇಕ ಮಂದಿ ಹೇಳುತ್ತಲೇ ಬಂದಿದ್ದಾರೆ.

    ಇದಕ್ಕೆ ಸಾಕ್ಷಿಯಾಗಿ ಕರೊನಾ ವಾರಿಯರ್‌ ಆಗಿರುವ ನರ್ಸ್‌ ಒಬ್ಬರು 14ನೇ ದಿನಗಳಲ್ಲಿ ಕರೊನಾ ಗೆದ್ದಿದ್ದಾರೆ. ಅದೂ ತಮ್ಮಲ್ಲಿ ಉಳಿದುಕೊಂಡಿರುವ ಒಂದೇ ಒಂದು ಶ್ವಾಸಕೋಶಕ್ಕೆ ತಗುಲಿದ್ದ ಸೋಂಕಿನಿಂದ ಪಾರಾಗಿದ್ದಾರೆ.

    ಇವರ ಹೆಸರು ಪ್ರಫುಲ್ಲಿತಾ ಪೀಟರ್‌. ಮಧ್ಯಪ್ರದೇಶದಲ್ಲಿ ಸಿವಿಲ್‌ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಲ್ಲಿ ನಡೆದ ಅಪಘಾತ ಒಂದರಲ್ಲಿ ಇವರು ಒಂದು ಶ್ವಾಸಕೋಶ ಕಳೆದುಕೊಂಡಿದ್ದರು. ಉಳಿದದ್ದು ಇನ್ನೊಂದೇ ಶ್ವಾಸಕೋಶ. ಆದರೆ ಕರೊನಾ ಮಹಾಮಾರಿ ಅವರ ಈ ಶ್ವಾಸಕೋಶಕ್ಕೆ ತಗುಲಿಬಿಟ್ಟು ಅಕ್ಷರಶಃ ನಲುಗಿ ಹೋದರು.

    ಆಗ ಅವರಿಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮದಿಂದ ಕರೊನಾ ಗೆಲ್ಲಬಹುದು, ಶ್ವಾಸಕೋಶದ ಸೋಂಕನ್ನು ಹೊಡೆದೋಡಿಸಬಹುದು ಎಂದು ಬಲ್ಲವರು ಹೇಳಿದರು. ಯೋಗ, ಪ್ರಾಣಾಯಾಮದ ಮೇಲೆ ನಂಬಿಕೆ ಇಟ್ಟು ಅದನ್ನು ಪಾಲನೆ ಮಾಡಿದ ಈ ನರ್ಸ್‌ 14 ದಿನಗಳಲ್ಲಿ ಕರೊನಾ ಗೆದ್ದಿದ್ದಾರೆ.

    ಎರಡು ಶ್ವಾಸಕೋಶಗಳಲ್ಲಿ ಒಂದನ್ನು ಶಸ್ತ್ರಚಿಕಿತ್ಸೆ ಮೂಲಕ ಬಾಲ್ಯದಲ್ಲಿಯೇ ತೆಗೆದುಹಾಕಿದ್ದರೂ ಚೆನ್ನಾಗಿದ್ದ ಪ್ರಫುಲ್ಲಿತಾ ಅವರು ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿದ್ದರು. ಆಗ ಅವರಿಗೂ ಸೋಂಕು ತಗುಲಿದೆ. ಇದು ತಿಳಿದ ಕೂಡಲೇ ಹೋಂ ಐಸೋಲೇಷನ್‌ಗೆ ಹೋದೆ. ಅಲ್ಲಿಯೇ ಉಸಿರಾಟದ ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡಿದೆ. ನನಗೇ ಅಚ್ಚರಿಯಾಯಿತು. 14 ದಿನಗಳಲ್ಲಿಯೇ ಕರೊನಾ ಗೆದ್ದೆ ಎನ್ನುತ್ತಾರೆ ಪ್ರಫುಲ್ಲಿತಾ.

    ನಾನು ಯಾವತ್ತೂ ಧೈರ್ಯ ಕಳೆದುಕೊಳ್ಳಲಿಲ್ಲ. ಕರೊನಾ ಗೆದ್ದೆ ಗೆಲ್ಲುತ್ತೇನೆ ಎಂಬ ವಿಶ್ವಾಸವಿತ್ತು. ಯೋಗ, ಪ್ರಾಣಾಯಾಮ ನನ್ನ ಕೈಹಿಡಿದಿದೆ ಎಂದಿದ್ದಾರೆ.

    ಅಕ್ಷಯ ತೃತೀಯಕ್ಕೆ ರೈತರಿಗೆ ಸಿಹಿ ಸುದ್ದಿ ಕೊಟ್ಟ ಪ್ರಧಾನಿ- 19 ಸಾವಿರ ಕೋಟಿ ರೂ ಖಾತೆಗೆ ವರ್ಗ

    ಮದ್ವೆಯಾದಾಗಿನಿಂದಲೂ ದೂರ ಮಲಗುತ್ತಿರೋ ಪತಿಯನ್ನು ಕಟ್ಕೊಂಡು ಏನ್‌ ಮಾಡ್ಲಿ ಮೇಡಂ?

    ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್‌ನೂ ಆಗ್ತಿತ್ತು ನೆಗೆಟಿವ್‌- ಸಿಕ್ಕಿಬಿದ್ದ ಕಿಂಗ್‌ಪಿನ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts