More

    ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಪ್ರಾಣಾಯಾಮ

     ನನಗೆ ಬಲಗೈ ನಡುಗುತ್ತದೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಬರೆಯಲು ಅಸಾಧ್ಯವಾಗಿದೆ. ಯೋಗ ಹಾಗೂ ಮುದ್ರೆಗಳ ಪರಿಹಾರಗಳನ್ನು ತಿಳಿಸಿ.
    | ಶೇಷಾದ್ರಿ 74 ವರ್ಷ, ಮೈಸೂರು

    ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಪ್ರಾಣಾಯಾಮಅಲುಗಾಡುವ ಕೈಗಳನ್ನು ಸಾಮಾನ್ಯವಾಗಿ ಕೈನಡುಕ ಎಂದು ಕರೆಯಲಾಗುತ್ತದೆ. ಕೈನಡುಕವು ಜೀವಕ್ಕೆ ಅಪಾಯಕಾರಿಯಲ್ಲ. ಆದರೆ ಇದು ದೈನಂದಿನ ಕಾರ್ಯವನ್ನು ಮಾಡಲು ಕಷ್ಟಕರವಾಗಿಸುತ್ತದೆ. ಕೆಲವು ನರಗಳು ಕ್ಷೀಣಗೊಳ್ಳುವ ಮುಂಚೆಯೇ ಎಚ್ಚರಿಕೆ ನೀಡುವ ಸಂಕೇತವೂ ಇದಾಗಿರಬಹುದು.

    ನೀವು ಯೋಗ ಹಾಗೂ ವಿಶ್ರಾಂತಿ ತಂತ್ರಗಳನ್ನು ಮಾಡುವ ಮೂಲಕ ಕೈನಡುಕದ ಪರಿಣಾಮಗಳನ್ನು ತಗ್ಗಿಸಲು ಸಾಧ್ಯವಿದೆ. ನಡುಕಗಳ ತೀವ್ರತೆಯನ್ನು ಕಡಿಮೆ ಮಾಡಲು ಬೆಳಗ್ಗೆ ಮತ್ತು ಸಂಜೆ ಕೇಂದ್ರೀಕೃತ ಉಸಿರಾಟದ ವ್ಯಾಯಾಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ.

    ಕೈಗಳನ್ನು ವಿಸ್ತರಿಸುವ ವ್ಯಾಯಾಮ, ಕೈಗಳನ್ನು ಮೇಲಕ್ಕೂ, ಕೆಳಕ್ಕೆ ಅಭ್ಯಾಸ ಮಾಡುವ ವ್ಯಾಯಾಮ, ಆಸನಗಳಲ್ಲಿ ತಾಡಾಸನ, ಪಾರ್ಶ್ವತಾಡಾಸನ, ಪರ್ವತಾಸನ, ಬದ್ಧಕೋಣಾಸನ, ಬದ್ಧಪದ್ಮಾಸನ, ಅಧೋಮುಖ ಶ್ವಾನಾಸನ, ಶಶಾಂಕಾಸನ, ಶವಾಸನಗಳಿಂದ ಸಹಾಯವಾಗುತ್ತದೆ. ಅನುಲೋಮ, ವಿಲೋಮ, ಶೀತಲೀ, ಷಣ್ಮುಖಿ ಮುದ್ರೆಯಲ್ಲಿ ಭ್ರಾಮರಿ ಪ್ರಾಣಾಯಾಮ ಮಾಡಿ. ತಲಾ ಹತ್ತು ನಿಮಿಷ ಬಾಹ್ಯಮುಷ್ಟಿಮುದ್ರೆ, ಹಾಕಿನಿಮುದ್ರೆ, ಹೃದಯ ಮುದ್ರೆ, ಪ್ರಾಣಮುದ್ರೆ ಮಾಡಿ. ಯೋಗ, ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಿ. ಒಮ್ಮೆ ವೈದ್ಯರೊಂದಿಗೂ ಸಮಾಲೋಚಿಸಿ.

    ಅನುಲೋಮ ವಿಲೋಮ ಪ್ರಾಣಾಯಾಮದ ಪ್ರಯೋಜನಗಳ ಬಗೆಗೆ ಹೆಚ್ಚಿನ ಮಾಹಿತಿ ತಿಳಿಸಿ.

    | ವಿಜಯಕುಮಾರ್ ಎಚ್.ಕೆ. ರಾಯಚೂರು

    ಅನುಲೋಮ ವಿಲೋಮ ಅತ್ಯಂತ ಶಕ್ತಿಯುತ ಪ್ರಾಣಾಯಾಮ. ನಮ್ಮ ನರಮಂಡಲಕ್ಕೆ ವಿಶ್ರಾಂತಿ ಸಿಗಲು ಮತ್ತು ನಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶ್ವಾಸಕೋಶ ಮತ್ತು ಸಂಪೂರ್ಣ ಉಸಿರಾಟದ ವ್ಯವಸ್ಥೆಯನ್ನು ಶುದ್ಧೀಕರಿಸಿ ಬಲಪಡಿಸುತ್ತದೆ. ಇದು ಹಠಯೋಗಾಭ್ಯಾಸದ ಒಂದು ಅಂಶವಾಗಿದೆ. ಅನು ಎಂದರೆ ಜೊತೆ, ಲೋಮ ಎಂದರೆ ಕೂದಲು ಯಾ ನೈಸರ್ಗಿಕ. ವಿಲೋಮ ಎಂದರೆ ವಿರುದ್ಧ.

    ನಮ್ಮ ತ್ರಿದೋಷಗಳು (ವಾತ, ಪಿತ್ತ, ಕಪ) ಸಮತೋಲನದಲ್ಲಿರಲು ಈ ಪ್ರಾಣಾಯಾಮದಲ್ಲಿ ಹೆಚ್ಚಿನ ಆಮ್ಲಜನಕವು ಶ್ವಾಸಕೋಶದಿಂದ ರಕ್ತಕ್ಕೆ ಹೋಗುತ್ತದೆ ಮತ್ತು ಹೆಚ್ಚಿನ ಇಂಗಾಲದ ಡೈಆಕ್ಸೈಡ್ ರಕ್ತದಿಂದ ಶ್ವಾಸಕೋಶಕ್ಕೆ ಹಾದುಹೋಗುತ್ತದೆ ಮತ್ತು ಉಸಿರಾಡುವ ಸಮಯಲ್ಲಿ ಹೊರಹಾಕಲ್ಪಡುತ್ತದೆ. ಇದರಿಂದ ಅಸ್ತಮಾ ನಿಯಂತ್ರಣ, ಮಿದುಳಿನ ಜೀವಕೋಶಗಳ ಪುನಶ್ಚೇತನ,

    ಧ್ಯಾನಕ್ಕಾಗಿ ಮನಸ್ಸನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ. ದೇಹ ಹಗುರವಾಗುತ್ತದೆ ಮತ್ತು ಮನಸ್ಸು ಶಾಂತಗೊಳ್ಳುತ್ತದೆ ಹಾಗೂ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ. ಅಲರ್ಜಿ, ರಕ್ತದೊತ್ತಡ ಸಮಸ್ಯೆಗಳ ನಿಯಂತ್ರಣಕ್ಕೆ ಈ ಪ್ರಾಣಾಯಾಮ ಸಹಕಾರಿಯಾಗುತ್ತದೆ. ಪ್ರಾಣಾಯಾಮದ ಅಭ್ಯಾಸದ ವೇಳೆ ಮನಸ್ಸನ್ನು ಪೂರ್ತಿ ಉಸಿರಾಟದಲ್ಲೇ ಇರಿಸಿ. ಗುರುಗಳ ಮಾರ್ಗದರ್ಶನದಲ್ಲಿಯೇ ಅಭ್ಯಾಸ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts