More

    ರುದ್ರ ಮುದ್ರೆ ಮಣಿಪುರ ಚಕ್ರಕ್ಕೆ ಚಾಲನೆ ನೀಡುವ ಚೈತನ್ಯವಾಹಕ

    ರುದ್ರ ಮುದ್ರೆ ಮಣಿಪುರ ಚಕ್ರಕ್ಕೆ ಚಾಲನೆ ನೀಡುವ ಚೈತನ್ಯವಾಹಕರುದ್ರ ಮುದ್ರೆ ಎಂದರೇನು? ರುದ್ರ ಮುದ್ರೆಯು ಹಸ್ತ ಅಥವಾ ಕೈ ಮುದ್ರಾ ವರ್ಗಕ್ಕೆ ಸೇರಿದೆ ಮತ್ತು ಶಕ್ತಿಯುತವಾದ ಗುಣಪಡಿಸುವ ಪರಿಣಾಮವನ್ನು ಹೊಂದಿದೆ ಎಂದು ನಂಬಲಾಗಿದೆ. ರುದ್ರ ಮುದ್ರೆ ಎಂಬ ಹೆಸರು ಸಂಸ್ಕೃತ ಪದ ರುದ್ರದಿಂದ ಬಂದಿದೆ. ರುದ್ರ ಎನ್ನುವುದು ಭಗವಾನ್ ಶಿವನ ಮತ್ತೊಂದು ಹೆಸರು ಮತ್ತು ಮುದ್ರೆ ಎಂದರೆ ಮುದ್ರೆಯ ಬೀಗ ಅಥವಾ ಕೈ ಸನ್ನೆ ಎಂದರ್ಥ. ಇದು ಶಿವನಿಗೆ ಸಮರ್ಪಿತವಾದ ಮುದ್ರೆಯಾಗಿದೆ ಮತ್ತು ದೇಹದ ಬೆಂಕಿ, ಗಾಳಿ ಮತ್ತು ಭೂಮಿಯ ಅಂಶಗಳನ್ನು ಸಂಕೇತಿಸುವ ಹೆಬ್ಬೆರಳು, ತೋರುಬೆರಳು ಮತ್ತು ಉಂಗುರ ಬೆರಳುಗಳನ್ನು ಒಳಗೊಂಡಿರುತ್ತದೆ. ರುದ್ರ ಮುದ್ರೆ (ಮಣಿಪೂರ ಚಕ್ರ) ಸಕ್ರಿಯಗೊಳಿಸಲು ದೇಹದ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿಯಾಗಿದೆ. ಸಹಾಯ ಮಾಡುತ್ತದೆ. ರುದ್ರ ದೇವರು ಅಗ್ನಿಗೆ ಸಂಬಂದಿಸಿದ್ದಾಗಿದೆ. ನಮ್ಮ ಶರೀರದಲ್ಲಿರುವ ಮಣಿಪುರ ಚಕ್ರಕ್ಕೆ ಈ ಮುದ್ರೆಯು ಚಾಲನೆ ನೀಡುತ್ತದೆ. ಇಲ್ಲಿ ಚಕ್ರಗಳು ಚೈತನ್ಯ ವಾಹಕಗಳಾಗಿವೆ.

    ವಿಧಾನ: ತೋರು ಬೆರಳು ಮತ್ತು ಉಂಗುರ ಬೆರಳ ತುದಿಯನ್ನು ಹೆಬ್ಬೆರಳಿನ ತುದಿಗೆ ರ್ಸ³ಸಬೇಕು. ಈ ಎರಡು ಬೆರಳುಗಳ ತುದಿಯನ್ನು ಹೆಬ್ಬೆರಳಿನ ತುದಿಗೆ ರ್ಸ³ಸಬೇಕು. ಉಳಿದ ಎರಡು ಬೆರಳು ನೇರವಾಗಿರಲಿ. ಸುಮಾರು 5 ನಿಮಿಷದಂತೆ 4 ಅಥವಾ 5 ಬಾರಿ ಅಭ್ಯಾಸ ಮಾಡಬಹುದು. ಎರಡೂ ಕೈಯಲ್ಲಿ ಅಭ್ಯಾಸ ಮಾಡಿ. ‘ಓಂ ನಮೋ ಭಗವತೇ ರುದ್ರಾಯ’ ಎಂಬ ಮಂತ್ರವನ್ನು 108 ಬಾರಿ 48 ದಿನಗಳ ಕಾಲ ಪಠಿಸಿ.

    ಪ್ರಯೋಜನಗಳು: ರುದ್ರ ಮುದ್ರೆಯು ಏಕಾಗ್ರತೆಯನ್ನು ಸುಧಾರಿಸುತ್ತದೆ. ಧ್ಯಾನಾ ಭ್ಯಾಸಗಳ ಬುದ್ಧಿಮತ್ತೆಯನ್ನು ಸುಧಾರಿಸುತ್ತದೆ. ಯಕೃತ್ತು, ಮೂತ್ರಪಿಂಡ, ಗುಲ್ಮ ಮತ್ತು ಹೃದಯದ ಆರೋಗ್ಯ ವರ್ಧನೆಗೆ ಈ ಮುದ್ರೆ ತುಂಬ ಸಹಕಾರಿಯಾಗಿದೆ. ಇದರ ನಿರಂತರ ಅಭ್ಯಾಸದಿಂದ ಮಣಿಪುರ ಚಕ್ರವು ಸಕ್ರಿಯಗೊಳ್ಳುರತ್ತದೆ. ದೇಹದಲ್ಲಿನ ಶಾಖವನ್ನು ಇದು ಸುಧಾರಿಸುತ್ತದೆ. ತಲೆ ತಿರುಗುವಿಕೆಯನ್ನು ನಿಯಂತ್ರಣಕ್ಕೆ ತರುತ್ತದೆ. ರುದ್ರ ಮುದ್ರೆಯು ಹೃದಯವನ್ನು ಸಮತೋಲನಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಸುಧಾರಿಸುತ್ತದೆ. ಏಕಾಗ್ರತೆಯಂತೂ ಗಣನೀಯ ಪ್ರಮಾಣದಲ್ಲಿ ಸುಧಾರಿಸುತ್ತದೆ. ದೃಷ್ಟಿ ಸುಧಾರಿಸಲು ಕೂಡ ಸಹಾಯವಾಗುತ್ತದೆ. ಈ ರುದ್ರ ಮುದ್ರೆಯಲ್ಲಿ ಮಣಿಪುರ ಚಕ್ರ ಜಾಗ್ರತಗೊಂಡು ಆತ್ಮ ವಿಶ್ವಾಸ, ಚೈತನ್ಯ ಮತ್ತು ಸಮತೋಲನ ಸ್ಥಿತಿ ಇತ್ಯಾದಿ ಬಲಗೊಳ್ಳುತ್ತದೆ. ದೇಹದಲ್ಲಿರುವ ಗ್ರಂಥಿ ಆರೋಗ್ಯ ವರ್ಧನೆಗೆ ಸಹಕಾರಿ. ದೇಹಕ್ಕೆ ಬೇಕಾದ ಶಾಖ, ಚೈತನ್ಯ ಶಕ್ತಿ ಒದಗಿ ಬರುತ್ತದೆ. ಉದರ ವ್ಯಾದಿ ನಿವಾರಣೆಗೆ ಸಹಕಾರಿಯಾಗುತ್ತದೆ. ಆಯಾಸ ಪರಿಹಾರಕ್ಕೆ ಸಹಕಾರಿ ಮತ್ತು ಒತ್ತಡ ನಿವಾರಣೆಗೆ ಕೂಡ ಸಹಕಾರಿ. ಆತ್ಮ ವಿಶ್ವಾಸ, ಚೈತನ್ಯ ಬಲಗೊಳ್ಳುತ್ತದೆ.

    ಮುದ್ರೆಗಳು ದೇಹದಲ್ಲಿ ಒಂದು ನಿರ್ದಿಷ್ಟ ಅಂಶ ಅಥವಾ ಶಕ್ತಿಯನ್ನು ಸಕ್ರಿಯಗೊಳಿಸುವ ಕೈ ಸನ್ನೆಗಳಾಗಿವೆ. ಐದು ಬೆರಳುಗಳು ಐದು ಅಂಶಗಳನ್ನು ಪ್ರತಿನಿಧಿಸುತ್ತವೆ. ಶಕ್ತಿ ಸಕ್ರಿಯಗೊಳಿಸುವ ಬಿಂದುವು ಬೆರಳ ತುದಿಯಲ್ಲಿದೆ. ಬೆರಳ ತುದಿಗಳನ್ನು ಸಂರ್ಪಸಿದಾಗ, ನಿಮ್ಮ ದೇಹದಲ್ಲಿನ ಸೂಕ್ಷ್ಮ ಶಕ್ತಿಯು ಸಕ್ರಿಯಗೊಳ್ಳುತ್ತದೆ. ಹೆಬ್ಬೆರಳು ಬೆಂಕಿಯ ಅಂಶವನ್ನು ಪ್ರತಿನಿಧಿಸುತದೆ. ಈ ಅಂಶವು ದೇಹದೊಳಗಿನ ಅಗ್ನಿಯನ್ನು ಪ್ರತಿನಿಧಿಸುತ್ತದೆ ಮತ್ತು ಇದು ಎಲ್ಲಾ ಇತರ ಅಂಶಗಳನ್ನು ಸಕ್ರಿಯಗೊಳಿಸಲು ಕಾರ್ಯನಿರ್ವಹಿಸುತ್ತದೆ. ತೋರು ಬೆರಳು ಗಾಳಿ, ಮಧ್ಯದ ಬೆರಳು ಈಥರ್, ಉಂಗುರ ಬೆರಳು ಭೂಮಿ ಮತ್ತು ಕಿರುಬೆರಳು ನೀರಿನ ಅಂಶವನ್ನು ಪ್ರತಿನಿಧಿಸುತ್ತದೆ.

    ನಮ್ಮ ಕೈಬೆರಳುಗಳನ್ನು ಹಾಗೂ ಹಸ್ತಗಳನ್ನು ಉಪಯೋಗಿಸಿಕೊಂಡು ವಾತ, ಪಿತ್ತ ಕಫವನ್ನು ನಿಗ್ರಹಿಸಬಹುದು ಎಂದು ಮುದ್ರಾ ಶಾಸ್ತ್ರದಲ್ಲಿ ಹೇಳಿದೆ. ಹಠಯೋಗದಲ್ಲಿ ಮುದ್ರಾ ಯೋಗ ಒಂದು ಭಾಗವಾಗಿದೆ. ಹಾಗೇ ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗಿದೆ. ನಾನಾ ಪ್ರಕಾರದ ಈ ಮುದ್ರೆಗಳನ್ನು ಗುರುವಿನ ಮಾರ್ಗದರ್ಶನ, ಸಲಹೆ ಪಡೆದು ಅಭ್ಯಾಸ ಮಾಡಿ.

    ಗ್ರೀನ್‌ ಆಪಲ್ ಸೇವನೆಯಿಂದ ಆಗಲಿದೆ ಹಲವಾರು ಲಾಭ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts