More

    ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ

    ಕಡೂರು: ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಪ್ರಮುಖ ಪಾತ್ರವಹಿಸಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
    ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆಯುಷ್ ಇಲಾಖೆ ಏರ್ಪಡಿಸಿದ್ದ ದೈಹಿಕ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಯೋಗ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
    ಯೋಗದಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಇಂದಿನ ದಿನಗಳಲ್ಲಿ ಒತ್ತಡದ ಬದುಕಿಗೆ ಯೋಗದ ಕಲಿಕೆ ಮಕ್ಕಳಿಗೂ ಹೆಚ್ಚು ಉಪಯುಕ್ತವಾಗಲಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಯೋಗದ ಮಹತ್ವ ತಿಳಿಯಪಡಿಸುವ ಕಾರ್ಯ ದೈಹಿಕ ಶಿಕ್ಷಕರಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಕರಿಗಾಗಿ ಮೀಸಲಾಗಿರುವ ಯೋಗ ತರಬೇತಿ ಕಾರ್ಯಗಾರ ಪರಿಣಾಮಕಾರಿಯಾಗಿ ಶಾಲೆಗಳಲ್ಲಿ ಅನುಷ್ಟಾನಗೊಳ್ಳಬೇಕಿದೆ ಎಂದರು.
    ಇತ್ತೀಚಿನ ದಿನಗಳಲ್ಲಿ ಬಳಸುವ ಆಹಾರ ಪದ್ದತಿಯಿಂದಲೂ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಯೋಗ ಮುಖ್ಯವಾಗಲಿದೆ. ದೇಶ ವಿದೇಶಗಳಲ್ಲಿ ಯೋಗಕ್ಕೆ ಮಹತ್ವ ದೊರಕುತ್ತಿದೆ. ಜನರು ಸಹ ಆರ್ಯುವೇದ ವೈದ್ಯ ಪದ್ದತಿಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಆಲೋಪತಿಯಲ್ಲಿ ಗುಣಮುಖವಾಗದೆ ಅದೆಷ್ಟೋ ಕಾಯಿಲೆಗಳು ಆಯುರ್ವೇದ ಪದ್ದತಿಯಲ್ಲಿ ಗುಣಮುಖವಾಗುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಆರ್ಯುವೇದ ಪದ್ದತಿಗೆ ಜನ ಆಸಕ್ತಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆ. ಉತ್ತಮ ಆರೋಗ್ಯ ಪಡೆಯಲು ಬೆಳಗ್ಗಿನ ವಾಯುವಿಹಾರ ಹಾಗೂ ಯೋಗಭ್ಯಾಸಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
    ಆರೋಗ್ಯ ಇಲಾಖೆ ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಸಿ.ರವಿಕುಮಾರ್, ದೈಹಿಕ ಶಿಕ್ಷಣಾಧಿಕಾರಿ ನಾಗರಾಜ್, ಕ್ರೀಡಾಧಿಕಾರಿ ಮುರುಳಿಧರ್, ಯೋಗ ತರಬೇತಿದಾರರಾದ ಬಿ.ಎಂ.ಗಿರೀಶ್, ವಿಜಯಾ ಗಿರೀಶ್, ಆಯುಷ್ ವೈದ್ಯರಾದ ಡಾ. ಮಂಜುನಾಥ್, ಡಾ.ಸೋಮಶೇಖರ್, ಡಾ.ಹೇಮಂತ್, ಡಾ.ಪರಶುರಾಮ್, ಡಾ.ಬಸವರಾಜ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts