More

    ಆರೋಗ್ಯ ಮತ್ತು ವಿಶ್ರಾಂತಿಗೆ ಯೋಗ

    ಗಾಲ್ ಬ್ಲಾಡರ್ ಪೊಲಿಪ್ಸ್ ಸಮಸ್ಯೆ ಇದೆ. ಮಲವಿಸರ್ಜನೆ ಬಹಳ ತ್ರಾಸದಾಯಕವಾಗುತ್ತದೆ. ಕೊಲೈಟಿಸ್ ಸಮಸ್ಯೆಯೂ ಇದೆ. ಯಾವುದಾದರೂ ಯೋಗಾಸನವನ್ನು ಸೂಚಿಸಿ.

    | ಸಿ.ವಿ. ಲಕ್ಷ್ಮೀಶಂಕರ್, 50 ವರ್ಷ

    ಪಿತ್ತಕೋಶದ ಪಾಲಿಪ್ ಎನ್ನುವುದು ಅಂಗಾಂಶದ ಸಣ್ಣ ಅಸಹಜ ಬೆಳವಣಿಗೆ. ದೊಡ್ಡದಾದ ಪಿತ್ತಕೋಶದ ಪಾಲಿಪ್​ಗಳು ಮಾರಕವಾಗುವ ಹೆಚ್ಚಿನ ಸಂಭವನೀಯತೆಯನ್ನು ಹೊಂದಿದೆ. ಅನೇಕ ಸಂದರ್ಭದಲ್ಲಿ ಪಿತ್ತಕೋಶದ ಪಾಲಿಪ್ ಹೊಂದಿರುವ ಜನರು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಒಮ್ಮೆ ವೈದ್ಯರೊಂದಿಗೆ ಸಮಾಲೋಚಿಸಿ.

    ಆರೋಗ್ಯ ಮತ್ತು ವಿಶ್ರಾಂತಿಗೆ ಯೋಗಯೋಗದಲ್ಲಿ ತ್ರಿಕೋನಾಸನ, ಪಾಶ್ವೋತ್ಥಾನಾಸನ, ಬದ್ಧಕೋನಾಸನ, ಜಾನುಶೀರ್ಷಾಸನ, ಮಂಡೂಕಾಸನ, ಹಲಾಸನ, ಅಧೋಮುಖ ಶ್ವಾನಾಸನ, ಭುಜಂಗಾಸನ, ಶಲಭಾಸನ, ಶವಾಸನ, ಸಹಕಾರಿಯಾಗುತ್ತದೆ. ಇದು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ಅಗ್ನಿಸಾರ ಕ್ರಿಯೆ, ಕಪಾಲಭಾತಿ ಕ್ರಿಯೆಯು ಪಿತ್ತಕೋಶದ ಸುಸ್ಥಿತಿಗೆ ಸಹಕಾರಿಯಾಗುತ್ತದೆ. ಆರಂಭದಲ್ಲಿ ಸಾಧ್ಯವಾಗುವ ಯೋಗಾಸನಗಳನ್ನು ಅಭ್ಯಾಸ ಮಾಡಿ. ಇದರೊಂದಿಗೆ ಕೆಲವು ನೈಸರ್ಗಿಕ ಚಿಕಿತ್ಸೆಗಳು ಮನೆಮದ್ದು ಸಹಾಯವಾಗುತ್ತದೆ ಎಂದು ನಂಬಲಾಗಿದೆ. ಪಿಯರ್ ಜ್ಯೂಸ್, ಬೀಟ್​ರೂಟ್ ಜ್ಯೂಸ್, ಸಹಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ. ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

    ಕೊಲೈಟಸ್​ಗೆ ಆರೋಗ್ಯ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುವ ಉಸಿರಾಟದ ನಿಯಂತ್ರಣ ಮತ್ತು ಧ್ಯಾನ ಸಹಕಾರಿಯಾಗುತ್ತದೆ. ಕರುಳಿನ ಕಾಯಿಲೆ ನಿಯಂತ್ರಣವಾಗುತ್ತದೆ. ದೈಹಿಕ ಭಂಗಿಗಳು, ಆಸನಗಳಲ್ಲಿ ಉತ್ಥಿತ ಏಕಪಾದಾಸನ, ಶಶಾಂಕಾಸನ, ಭುಜಂಗಾಸನ, ಶಲಭಾಸನ, ಉತ್ಥಾನ ಪಾದಾಸನ, ಮರ್ಕಟಾಸನ, ಸಂಪೂರ್ಣ ಪವನಮುಕ್ತಾಸನ. ಮಸಾಲೆಯುಕ್ತ ಕೊಬ್ಬಿನ ಮತ್ತು ಆಮ್ಲೀಯ (ಹುಳಿ ಬಂದ ದೋಸೆ, ಇಡ್ಲಿ) ಆಹಾರವನ್ನು ಸೇವಿಸಬೇಡಿ.

    ಯೋಗ ಮತ್ತು ಪ್ರಾಣಾಯಾಮ ಆದ ನಂತರ ಯಾವುದಾದರೂ ದ್ರವಪದಾರ್ಥ ಸೇವಿಸಬಹುದೇ? ಇದರ ಸಾಧಕ-ಬಾಧಕಗಳ ಬಗ್ಗೆ ತಿಳಿಸಿ.

    | ಆರ್. ಎನ್. ಶ್ರೀನಿವಾಸ

    ಯೋಗ ಪ್ರಾಣಾಯಾಮ ಆದ 30 ನಿಮಿಷದ ನಂತರ ಆಹಾರ ಸೇವಿಸಬಹುದು. ಯೋಗವನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿಯೇ ಅಭ್ಯಾಸ ಮಾಡಬೇಕು. ಯೋಗ ಆಗಿ ದೇಹ ಸಹಜ ಸ್ಥಿತಿಗೆ ಬರಬೇಕು. ಯೋಗ ಆದಕೂಡಲೇ ಆಹಾರ ಸೇವಿಸಿದರೆ ಅಡ್ಡ ಪರಿಣಾಮ ಬೀರುವ ಸಂಭವ ಹೆಚ್ಚು. ಯೋಗಶಿಕ್ಷಕರು ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿಡಲು, ಆತಂರಿಕ ಶಾಂತಿ ಮತ್ತು ಸ್ಥಿರತೆಯನ್ನು ಕಂಡುಕೊಳ್ಳುವ ಬಗ್ಗೆ ಯೋಗ ತರಬೇತಿ ಸಂದರ್ಭದಲ್ಲಿ ಆಗಾಗ ತಿಳಿಸುತ್ತಿರುತ್ತಾರೆ. ಹಾಗೆಯೇ ಮನಃಪೂರ್ವಕವಾಗಿ ಮತ್ತು ಆರೋಗ್ಯಕರವಾಗಿ ತಿನ್ನುವುದು ನಿಜಕ್ಕೂ ಯೋಗದ ಒಂದು ದೊಡ್ಡ ಅಂಶವಾಗಿದೆ. ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಮತ್ತು ವಿಶ್ರಾಂತಿ ಹೇಗೆ ಪೋಷಣೆ ಬಗ್ಗೆ ಯೋಗವು ಸಹಾಯ ಮಾಡುತ್ತದೆ. ಯಾವಾಗ ಮತ್ತು ಏನನ್ನು ತಿನ್ನಬೇಕು ಎಂಬುದನ್ನು ನಿರ್ಧರಿಸಲು ಯೋಗ ತರಗತಿಯ ಮೊದಲು ಮತ್ತು ನಂತರ ನಿಮ್ಮ ದೇಹವನ್ನು ಕೇಳುವುದನ್ನೂ ಅಭ್ಯಾಸ ಮಾಡಿ. ನಿಮ್ಮ ದೇಹವು ನಿಮಗೆ ಸಹಾಯ ಮಾಡುವ ಎಲ್ಲಾ ಬುದ್ಧಿವಂತಿಕೆಯನ್ನೂ ಹೊಂದಿದೆ. ಸತ್ವಯುತವಾದ ಸಾತ್ವಿಕ ಆಹಾರ ಸೇವಿಸಿ. ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರವನ್ನು ಆರಿಸಿ, ಧಾನ್ಯದ ಕಾಬೋಹೈಡ್ರೇಟ್​ಗಳು ಪೋ›ಟೀನ್ ಮತ್ತು ಕೊಬ್ಬಿನ ಸಂಯೋಜನೆಯಂತಹ ಸಮತೋಲಿತ ಶಕ್ತಿಯನ್ನು ನೀಡುತ್ತದೆ. ಬೇಕಾದಷ್ಟು ಮಾತ್ರ ಸೇವಿಸಿ ಮತ್ತು ಪರಿಶುದ್ಧ ವಾತಾವರಣದಲ್ಲಿ ಶುದ್ಧ ಆಹಾರ ಸೇವಿಸಿ. ಆಹಾರ ಸೇವಿಸುವಾಗ ಅದರಲ್ಲೇ ಮನಸ್ಸಿಟ್ಟು ಚೆನ್ನಾಗಿ ಅಗಿದು, ಜಗಿದು ತಿನ್ನಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts