More

    ಬಾಲುನ ಕೊನೇ ಬಾರಿ ನೋಡೋದಕ್ಕೂ ಸಾಧ್ಯವಾಗಲಿಲ್ಲ … ಯೇಸುದಾಸ್​ ಬೇಸರ

    ಭಾರತೀಯ ಚಲನಚಿತ್ರ ಸಂಗೀತದಲ್ಲಿ ಯೇಸುದಾಸ್​ ಮತ್ತು ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರು ಸಹೋದರರಂತೆ ಗುರುತಿಸಿಕೊಂಡವರು. ಬಾಲು ತಮ್ಮ ಸಹೋದರನಿದ್ದಂತೆ ಎಂದು ಯೇಸುದಾಸ್​ ಅವರು ಹಲವು ವೇದಿಕೆಗಳಲ್ಲೂ ಹೇಳಿಕೊಂಡಿದ್ದರು. ಈಗ ಬಾಲಸುಬ್ರಹ್ಮಣ್ಯಂ ಅವರು ನಿಧನಕ್ಕೆ ಯೇಸುದಾಸ್​ ಕಂಬನಿ ಮಿಡಿದಿದ್ದಾರೆ.

    ಇದನ್ನೂ ಓದಿ: ಐವರು ಅಧಿಕಾರಿಗಳಿಂದ ಐದು ತಾಸು ವಿಚಾರಣೆ; ಸತ್ಯ ಒಪ್ಪಿಕೊಂಡ ನಟಿ ದೀಪಿಕಾ ಪಡುಕೋಣೆ

    ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಯೇಸುದಾಸ್​ ಅವರು ಕಾಣಲಿಲ್ಲ. ಬರೀ ಅಂತ್ಯಕ್ರಿಯೆಯಷ್ಟೇ ಅಲ್ಲ, ಎಸ್​ಪಿಬಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಮತ್ತು ಅವರು ನಿಧನರಾದಾಗಲೂ ಯೇಸುದಾಸ್​ ಅವರು ಯಾವೊಂದು ಮಾತನಾಡಿರಲಿಲ್ಲ.

    ಅದ್ಯಾಕೆ ಎಂದು ಇದೀಗ ಯೇಸುದಾಸ್​ ಅವರು ಬಹಿರಂಗಪಡಿಸಿದ್ದಾರೆ. ಪ್ರಮುಖವಾಗಿ ಯೇಸುದಾಸ್​ ಅವರು ಸದ್ಯ ಅಮೇರಿಕಾದಲ್ಲಿದ್ದಾರೆ. ಕೋವಿಡ್​ ಕಾರಣದಿಂದ ಅವರಿಗೆ ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಪತ್ರ ಮುಖೇನ ಅವರು ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಬಾಲು ಅವರು ಕೊನೆಗೆ ಒಂದು ಬಾರಿ ನೋಡುವುದಕ್ಕೂ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ‘ನಾನು ಮತ್ತು ಬಾಲು ಕೊನೆಯದಾಗಿ ಹಾಡಿದ್ದು ಸಿಂಗಾಪೂರ್​ನ ಒಂದು ಕಾನ್ಸರ್ಟ್​ನಲ್ಲಿ. ಆ ನಂತರ ಅವರನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸದ್ಯ ನಾನು ಅಮೆರಿಕಾದಲ್ಲಿದ್ದು, ಬಾಲು ಹುಷಾರಾಗಬಹುದು ಎಂದು ಅಲ್ಲೇ ಕಾಯುತ್ತಿದ್ದೆ. ಆದರೆ, ಈ ಕೋವಿಡ್​ ನಮ್ಮೆಲ್ಲರಿಗೂ ದೊಡ್ಡ ನಷ್ಟ ಉಂಟು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಬರೆದು ಕೊಂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಜತೆ ಪಾರ್ಟಿ ಮಾಡಿದ್ದು ಹೌದು … ಒಪ್ಪಿಕೊಂಡ ಶ್ರದ್ಧಾ ಕಪೂರ್​

    ಕೊನೆಯ ಬಾರಿ ಅವರನ್ನು ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಎಂಬ ದುಃಖ ಮನಸ್ಸನ್ನು ಆವರಿಸಿದೆ ಎಂದಿರುವ ಅವರು, ‘ಒಂದು ಪಕ್ಷ ನಾನು ಅಲ್ಲಿ ಇದ್ದಿದ್ದರೂ, ಅವರನ್ನು ಆ ಸ್ಥಿತಿಯಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ, ನನ್ನ ಮನಸ್ಸಿನಲ್ಲಿ ಯಾವಾಗಲೂ ಅವರ ನಗುಮುಖ ಇದೆ’ ಎಂದು ಅವರು ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

    ಹೆಂಡತಿ ಆಸೆಯನ್ನು ಪೂರೈಸುವುದಕ್ಕೆ ಚಿರಂಜೀವಿ ಏನ್​ ಮಾಡಿದ್ರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts