More

    ವರ್ಷ ಮೂರು, ಕಳ್ಳರ ಕೈಚಳಕ ಸಾವಿರಾರು

    ಬೆಳಗಾವಿ: ಜನರ ಉದಾಸೀನತೆ, ನಿಷ್ಕಾಳಜಿಯಿಂದಾಗಿ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ನಿರಾತಂಕವಾಗಿ ಸಾಗಿದೆ. ಜನರ ಅಲಕ್ಷೃದಿಂದ ಕಳ್ಳತನವೂ ಸಹ ಸಾಮಾಜಿಕ ಪಿಡುಗಾಗುತ್ತಿವೆ. ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 1,374 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಪೊಲೀಸರು 422 ಪ್ರಕರಣ ಬೇಧಿಸಿ, ವಾರಸುದಾರರಿಗೆ ವಸ್ತುಗಳನ್ನು ಮರಳಿಸಿದ್ದಾರೆ.

    2018ರಲ್ಲಿ 531 ಕಳ್ಳತನ ಪ್ರಕರಣ ದಾಖಲಾಗಿದ್ದವು. ಈ ಪೈಕಿ 216 ಪ್ರಕರಣ ಬೇಧಿಸಲಾಗಿದೆ. 2019ರ 454 ಪ್ರಕರಣಗಳಲ್ಲಿ 120 ಕಳ್ಳತನ ಪತ್ತೆಯಾಗಿವೆ. 2020ರಲ್ಲಿ 389 ಪ್ರಕರಣಗಳು ಘಟಿಸಿದ್ದು, 86 ಪ್ರಕರಣ ಬೇಧಿಸಲಾಗಿದೆ. ಜಿಲ್ಲೆಯ ಪೊಲೀಸರು ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಲೀಸರ ಕಾರ್ಯ ಕ್ಷಮತೆಯಿಂದ ವರ್ಷದಿಂದ ವರ್ಷಕ್ಕೆ ಕಳ್ಳತನ ಪ್ರಕರಣ ಇಳಿಮುಖವಾಗುತ್ತಿವೆ

    ಲಾಕ್‌ಡೌನ್ ಅವಧಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚು ನಡೆದಿಲ್ಲ. ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ತೆರೆದಿದ್ದರಿಂದ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಬಿದ್ದಿತ್ತು. ಮಳೆಗಾಲ, ಚಳಿಗಾಲದಲ್ಲಿ ಹೆಚ್ಚು: ಜಿಲ್ಲೆಯಲ್ಲಿ ಮಳೆಗಾಲ, ಚಳಿಗಾಲದ ವೇಳೆ ಹೆಚ್ಚು ಕಳ್ಳತನ ಪ್ರಕರಣ ಘಟಿಸಿದೆ. ಮಳೆ ಶಬ್ದ ಹಾಗೂ ಚಳಿಯಲ್ಲಿ ಜನರು ಬೆಚ್ಚಗೆ ಮಲಗಿದ ವೇಳೆಯಲ್ಲೇ ಕಳ್ಳರು ಕನ್ನ ಹಾಕುತ್ತಿದ್ದಾರೆ.

    ಕೃಷಿ ಚಟುವಟಿಕೆಗಳು ಆರಂಭವಾದಾಗ ಕಳ್ಳರು ಹೆಚ್ಚು ಸಕ್ರೀಯರಾಗುತ್ತಿದ್ದಾರೆ. ರೈಲ್ವೆ ಸ್ಟೇಷನ್, ಬಸ್ ನಿಲ್ದಾಣಗಳಲ್ಲಿ ಅಂತಾರಾಜ್ಯ ಕಳ್ಳರ ಹಾವಳಿ ಹೆಚ್ಚುತ್ತಿದೆ. ಹಳ್ಳಿಗಳ ಸುತ್ತಲಿನ ದಾಬಾಗಳ ಹತ್ತಿರ ಹೆಚ್ಚು ಕಳ್ಳತನ ಪ್ರಕರಣ ಕಂಡುಬರುತ್ತಿವೆ. ಇಂತಹ ಸ್ಥಳಗಳಲ್ಲಿ ಜನ ಎಚ್ಚರದಿಂದಿರುವುದು ಅವಶ್ಯವಾಗಿದೆ.

    ಸ್ವಯಂ ಜಾಗೃತಿ ಅಗತ್ಯ: ‘ಕಳ್ಳರು ಬರುವುದಿಲ್ಲ’ ಎಂಬ ಜನರ ಉದಾಸೀನತೆಯೇ ಕಳ್ಳತನಕ್ಕೆ ದಾರಿಯಾಗುತ್ತಿದೆ. ಮನೆಯಿಂದ ಹೊರಗಡೆ ಹೋಗುವಾಗ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಹೋಗಬಾರದು ಎಂದು ಪೊಲೀಸರು ಎಷ್ಟೇ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳಿವೆ ಎಂದರೆ ಒಂದು ಸಿಸಿ ಟಿವಿ ಅಳವಡಿಸಿಕೊಳ್ಳಿ ಎಂದು ಕಳ್ಳತನ ನಡೆದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ತಿಳಿ ಹೇಳುತ್ತಿದ್ದಾರೆ. ಎಲ್ಲಿಯವರೆಗೆ ಸಾರ್ವಜನಿಕರ ಸಹಕಾರ ಹಾಗೂ ಸ್ವಯಂ ಜಾಗೃತಿ ಇರುವುದಿಲ್ಲವೋ, ಅಲ್ಲಿಯವರೆಗೆ ಕಳ್ಳರು ಕ್ರಿಯರಾಗಿರುತ್ತಾರೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    5 ವರ್ಷದಲ್ಲಿ 160 ಜನರ ಗಡಿಪಾರು: ಕಾನೂನು ಬಾಹಿರ ಚಟುವಟಿಕೆ, ಸಮಾಜದಲ್ಲಿ ಶಾಂತಿ ಭಂಗ ಮಾಡಿದವರನ್ನು ಜಿಲ್ಲಾ ಪೊಲೀಸರು ಗಡಿಪಾರು ಮಾಡುತ್ತಿದ್ದಾರೆ. 2015ರಿಂದ 2020ರ ವರೆಗೆ 160 ಜನರನ್ನು ಗಡಿಪಾರು ಮಾಡಿದ್ದಾರೆ. ಬೆಳಗಾವಿ, ಚಿಕ್ಕೋಡಿ ಹಾಗೂ ಬೈಲಹೊಂಗಲ ಉಪವಿಭಾಗ ವ್ಯಾಪ್ತಿಯ ಜನರನ್ನು ಗಡಿಪಾರು ಮಾಡಲಾಗಿದೆ. ಅಲ್ಲದೆ, ಗೂಂಡಾ ಕಾಯ್ದೆಯಡಿ ಐದು ವರ್ಷದಲ್ಲಿ 20 ಜನರ ವಿರುದ್ಧ ಪ್ರಕರಣ ದಾಖಲಾಗಿವೆ.

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts