More

    ಯಶಸ್ವಿನಿ ಕಾರ್ಡ್ ಮಾಡಿಸಲು ಮಾರ್ಚ್ ಅಂತ್ಯದವರೆಗೆ ಅವಕಾಶ: ಸಹಕಾರ ಸಂಘಗಳ ಉಪ ನಿಬಂಧಕ ಜೆ.ವಿಕ್ರಮರಾಜ ಅರಸ್ ಮಾಹಿತಿ

    ಮಂಡ್ಯ: ಪ್ರಸಕ್ತ ಸಾಲಿನ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಮಾ.31ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
    ಯೋಜನೆಯಡಿ ಸದಸ್ಯರಾಗಲು ಯಾವುದೇ ಸಹಕಾರ ಸಂಘ /ಸೌಹಾರ್ದ/ಸ್ವ-ಸಹಾಯ ಗುಂಪುಗಳಲ್ಲಿ ಸದಸ್ಯರಾಗಿ 3 ತಿಂಗಳು ಕಳೆದಿದೆ. ಯೋಜನೆಯ ವಂತಿಕೆದರ ಸಾಮಾನ್ಯ ವರ್ಗ ಗ್ರಾಮಾಂತರಕ್ಕೆ ಪ್ರಧಾನ ಅರ್ಜಿದಾರ ಸೇರಿ ಅವಲಂಬಿತ 4 ಜನಕ್ಕೆ 500 ರೂಗಳು, ನಾಲ್ಕಕ್ಕಿಂತ ಹೆಚ್ಚಾದಲ್ಲಿ ಒಬ್ಬ ಸದಸ್ಯರಿಗೆ 100 ರೂ ಹೆಚ್ಚಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ನಗರ ಸಹಕಾರ ಸಂಘಗಳಲ್ಲಿ ನೋಂದಣಿಯಾದ ಸದಸ್ಯರ ಕುಟುಂಬದ 4 ಜನರಿಗೆ 1 ಸಾವಿರ ರೂ, ನಾಲ್ಕಕ್ಕಿಂತ ಹೆಚ್ಚಾದಲ್ಲಿ ಒಬ್ಬ ಸದಸ್ಯರಿಗೆ 200 ರೂಗಳನ್ನು ಹೆಚ್ಚಿಗೆ ನೋಂದಣಿ ಶುಲ್ಕ ಪಾವತಿಸಬೇಕಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರ ನೋಂದಣಿ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ.
    ಅರ್ಹರು ಪ್ರಧಾನ ಸದಸ್ಯರ ಪಡಿತರ ಚೀಟಿ, ಪ್ರತಿ ಸದಸ್ಯರ ಆಧಾರ್‌ಕಾರ್ಡ್ ಪ್ರತಿ, ಪ್ರತಿ ಸದಸ್ಯರ ಎರಡು ಭಾವಚಿತ್ರ ಹಾಗೂ ಎಸ್‌ಸಿ/ಎಸ್‌ಟಿ ಪಂಗಡದ ಸದಸ್ಯರು ಕುಟುಂಬದ ಪ್ರತಿಯೊಬ್ಬರ ಆರ್‌ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆದ್ದರಿಂದ ಸಹಕಾರ ಸಂಘಗಳ ಎಲ್ಲ ಸದಸ್ಯರು ಶೀಘ್ರವಾಗಿ ಈ ಯೋಜನೆಯಡಿ ನೋಂದಾಯಿಸಿಕೊಂಡು ಪ್ರಯೋಜನ ಪಡೆಯಲು ಸಹಕಾರ ಸಂಘಗಳ ಉಪ ನಿಬಂಧಕ ಜೆ.ವಿಕ್ರಮರಾಜ ಅರಸ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts