More

    ಯಶವಂತಪುರ, ಆರ್​ಆರ್ ನಗರ ನನ್ನ ಎರಡು ಕಣ್ಣುಗಳಂತೆ: ಡಿಕೆಶಿ ಹೇಳಿದ ಮಾತಿನ ಮರ್ಮವೇನು?

    ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಉಳಿದಿದ್ದು ರಾಜಕೀಯ ಚಟುವಟಿಕೆಗೆ ಎಲ್ಲಾ ರಾಜಕೀಯ ಪಾರ್ಟಿಗಳು ವೇಗ ನೀಡಿವೆ. ಕರ್ನಾಟಕ ರಾಜಕೀಯದಲ್ಲೀಗ ‘ಆಪರೇಷನ್ ಹಸ್ತ’ದ ವದಂತಿ. ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಕೆಲವು ಪ್ರಮುಖ ನಾಯಕರು ಮತ್ತೆ ‘ಕೈ’ ಹಿಡಿಯಲಿದ್ದಾರೆ ಎಂಬ ವರದಿಗಳಿಗೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಪುಷ್ಟಿ ನೀಡಿವೆ.

    ಇದನ್ನೂ ಓದಿ:“ನನಗೆ ಕಿಂಚಿತ್ತು ಆಸಕ್ತಿಯಿಲ್ಲ….” ಟ್ರೋಲ್​ಗಳಿಗೆ ನಟಿ ಆಯೇಶಾ ತಿರುಗೇಟು

    ಬಿಜೆಪಿಯಲ್ಲಿ ಇದ್ದೂ ಇಲ್ಲದಂತಿರುವ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನ್ನು ಹಾಡಿ ಹೊಗಳಿದ್ದರು. ಈ ಬಜೆಟ್ 7 ಕೋಟಿ ಜನರ ಬಜೆಟ್ ಆಗಿದೆ. ನಾನು ಸಿಎಂ ಮತ್ತು ಡಿಸಿಎಂ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದಿದ್ದರು. ಎಸ್​ಟಿಎಸ್ ನಡೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.

    ಯಶವಂತಪುರ, ಆರ್​ಆರ್ ನಗರ ಕ್ಷೇತ್ರಗಳು ನನ್ನ ಎರಡು ಕಣ್ಣುಗಳಂತೆ: ಈ ಎರಡು ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಡಿಕೆಶಿ ಅವರು ಹೇಳಿದ್ದರು. ಡಿಕೆಶಿ ಅವರ ಮಾತು ಈಗ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಮೂರು ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಸಿದ್ಧತೆ ರೂಪರೇಷ ಸಿದ್ಧಪಡಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಜ್ಞಾನಭಾರತಿ ಆವರಣದ ಬಿಪಿಎಡ್ ಕ್ರೀಡಾಂಗಾಣದಲ್ಲಿ ಭಾನುವಾರ ಆಯೋಜಿಸಿದ್ದರು. ಯಶವಂತಪುರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಸರ್ಕಾರಿ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

    ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಶಾಸಕರಾದ ಸೋಮಶೇಖರ್ ಅವರು ಬಿಡಿಎ ಸಮಸ್ಯೆ, 110 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಈ ಎರಡು ಕ್ಷೇತ್ರ ನಮಗೆ ಎರಡು ಕಣ್ಣುಗಳಂತೆ. ಶಾಸಕ ಮುನಿರತ್ನ ಅವರು ಹೇಳಿರುವಂತೆ ಕೊಳವೆ ಬಾವಿಯನ್ನು ಇನ್ನೂ 500 ಅಡಿ ಕೊರೆಸುವ ಬಗ್ಗೆ ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಕಾಂಗ್ರೆಸ್ ಸೇರ್ಪಡೆಯಾಗ್ತಾ ಸೋಮಶೇಖರ್​?: ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ಅವರ ಕೆಲವು ಮಂದಿ ಬೆಂಬಲಿಗರು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಅವರ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಭರ್ಜರಿ ಅನುದಾನ ಮಂಜೂರು ಮಾಡಿದೆ. ಇದು ಸೋಮಶೇಖರ್ ಸಹ ಕಾಂಗ್ರೆಸ್ ಹಾದಿ ಹಿಡಿಯುವ ಎಲ್ಲ ಸುಳಿವನ್ನೂ ನೀಡಿದೆ ಎಂದೇ ವಿಶ್ಲೇಷಿಸಲಾಗಿದೆ. ಆದಾಗ್ಯೂ, ಎಸ್​ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅವರಿನ್ನೂ ದೃಢವಾದ ಹೇಳಿಕೆ ನೀಡಿಲ್ಲ.

    ಈ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಇನ್ನೊಬ್ಬರು ಬಿಜೆಪಿಯಲ್ಲಿ ಇದ್ದೂ ಇಲ್ಲದಂತಿರುವ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಭಾಗವಹಿಸಿದ್ದರು. ಅಲ್ಲಲ್ಲಿ ರಾಜಕೀಯವಾಗಿ ವ್ಯಂಗ್ಯವಾಗಿ ಕಾಲೆಳೆಯುವ ವಿದ್ಯಮಾನಕ್ಕೂ ಕಾರ್ಯಕ್ರಮ ಸಾಕ್ಷಿಯಾಯಿತು. ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ನಾಯಕಿ ಕುಸುಮಾ ಎಚ್ ಸೇರಿದಂತೆ ಇಬ್ಬರು ಬಿಜೆಪಿ ಶಾಸಕರು ವೇದಿಕೆಯಲ್ಲಿ ಹಾಜರಿದ್ದರು.

    ದ್ವಿಶತಕ ಸಿಡಿಸಿ ಜೈಸ್ವಾಲ್ ಬರೆದ ದಾಖಲೆಗಳಿವು: 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಮೊದಲು! ಸಚಿನ್ ಸೇರಿ ಪ್ರಮುಖರಿಂದ ಪ್ರಶಂಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts