More

    ಧೋನಿಗೆ ಕೈಮುಗಿದು ಗಮನ ಸೆಳೆದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್

    ಶಾರ್ಜಾ: ಮಹೇಂದ್ರ ಸಿಂಗ್ ಧೋನಿ ದೇಶದ ಅತ್ಯಂತ ಜನಪ್ರಿಯ ಕ್ರಿಕೆಟಿಗ ಎಂದು ಸುನೀಲ್ ಗಾವಸ್ಕರ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಯಾಕೆಂದರೆ ಧೋನಿ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದು ಅವರ ವಾದ. ಅದೇ ರೀತಿ ಯುವ ಕ್ರಿಕೆಟಿಗರಿಗೆ ಧೋನಿ ಅವರೊಂದು ಮಾದರಿ. ಯಾಕೆಂದರೆ ಕ್ರಿಕೆಟ್ ಕ್ಷೇತ್ರದಲ್ಲಿ ಕೇಳರಿಯದಿದ್ದ ರಾಂಚಿಯಿಂದ ಬಂದು ಇಡೀ ವಿಶ್ವದಲ್ಲೇ ಗಮನ ಸೆಳೆದ ಕ್ರಿಕೆಟಿಗ ಎಂಎಸ್ ಧೋನಿ. ಅಂಥ ದಿಗ್ಗಜ ಆಟಗಾರನನ್ನು ಕಂಡಾಗ ಯುವ ಕ್ರಿಕೆಟಿಗರಿಗೆ ಭಕ್ತಿ ಭಾವ ಮೂಡುವುದಕ್ಕೆ ಐಪಿಎಲ್ 13ನೇ ಆವೃತ್ತಿ ಸಾಕ್ಷಿಯಾಗಿದೆ.

    ಮಂಗಳವಾರ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮೊದಲ ಬಾರಿ ಧೋನಿ ಅವರನ್ನು ಕಂಡಾಗ ಕೈಮುಗಿದು ನಿಂತರು. ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧೋನಿ ಮಹಿಮೆಯನ್ನು ಸಾರುವಂತಿದೆ.

    ಉತ್ತರ ಪ್ರದೇಶ ಮೂಲದ ಯಶಸ್ವಿ ಜೈಸ್ವಾಲ್ ಅವರೂ ಬಾಲ್ಯದಲ್ಲೇ ಕ್ರಿಕೆಟ್ ಕನಸು ಹೊತ್ತು ಮುಂಬೈಗೆ ಆಗಮಿಸಿದ್ದರು. ಮೊದಲಿಗೆ ಮುಂಬೈ ಕ್ರಿಕೆಟ್ ಮೈದಾನಗಳ ಬಳಿ ಪಾನಿಪುರಿ ಮಾರುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಜೈಸ್ವಾಲ್, ಅದರ ಜತೆಜತೆಯಲ್ಲೇ ಕ್ರಿಕೆಟ್ ತರಬೇತಿಯನ್ನೂ ಪಡೆದು ಭಾರತದ 19 ವಯೋಮಿತಿ ತಂಡದ ಪರ ಕಿರಿಯರ ವಿಶ್ವಕಪ್‌ನಲ್ಲಿ ಆಡಿ ಗಮನ ಸೆಳೆದವರು. ಹೀಗಾಗಿ ಕಷ್ಟದಿಂದಲೇ ಮೇಲೆದ್ದು ಬಂದ ಜೈಸ್ವಾಲ್, 39 ವರ್ಷದ ಧೋನಿಯನ್ನು ಕಂಡಾಗ ಗೌರವದಿಂದ ನಮಸ್ಕರಿಸಿ ನಿಂತಿದ್ದರು. ಇದಕ್ಕೆ ಪ್ರತಿಯಾಗಿ ಧೋನಿ ಕೂಡ ಜೈಸ್ವಾಲ್‌ರತ್ತ ಪ್ರೀತಿಯ ನೋಟ ಬೀರಿದ್ದಾರೆ.

    ಇದನ್ನೂ ಓದಿ: ಗಂಗೂಲಿಗೆ ಸಂಕಷ್ಟ ತಂದಿಟ್ಟ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹೇಳಿಕೆ!

    20 ವರ್ಷದ ಜೈಸ್ವಾಲ್ ಪಂದ್ಯದಲ್ಲಿ 6 ಎಸೆತಗಳಲ್ಲಿ 1 ಬೌಂಡರಿ ಒಳಗೊಂಡ 6 ರನ್ ಬಾರಿಸಿ ನಿರಾಸೆ ಮೂಡಿಸಿದರು. ರಾಜಸ್ಥಾನ-ಚೆನ್ನೈ ಪಂದ್ಯದ ವೇಳೆ ಅವರ ‘ಧೋನಿ ನಮನ’ದ ವಿಡಿಯೋ ಮತ್ತು ಚಿತ್ರಗಳು ವೈರಲ್ ಆಗಿದ್ದು, ಟ್ವಿಟರ್‌ನಲ್ಲಿ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts