More

    ‘ಕಾಂತಾರ’ ಸಹ ನನ್ನ ಚಿತ್ರವೇ ಎಂದ ಯಶ್​

    ಬೆಂಗಳೂರು: ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರ ಬಿಡುಗಡೆಯಾದ ಮೇಲೆ ಯಶ್​, ಆ ಚಿತ್ರದ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಆ ಚಿತ್ರದ ಬಗ್ಗೆ ಮಾತನಾಡುವುದರ ಜತೆಗೆ, ಅದು ಸಹ ತಮ್ಮದೇ ಚಿತ್ರ ಎಂದು ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಕೆಜಿಎಫ್-3 ಯಾವಾಗ?; ಮುಂದಿನ ಚಿತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಯಶ್

    ಇತ್ತೀಚೆಗೆ ಮುಂಬೈನಲ್ಲಿ ನಡೆದ ಇಂಡಿಯಾ ಟುಡೇ ಕಂಕ್ಲೇವ್​ ಕಾರ್ಯಕ್ರಮದಲ್ಲಿ ಯಶ್​ ಭಾಗವಗಹಿಸಿದ್ದರು. ತಾವು ನಡೆದು ಬಂದ ಹಾದಿಯ ಜತೆಗೆ, ತಮ್ಮ ಚಿತ್ರಜೀವನದ ಹಲವು ವಿಷಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಕರಾಗಿದ್ದ ರಾಜದೀಪ್​ ಸರದೇಸಾಯಿ ಕನ್ನಡ ಚಿತ್ರರಂಗದ ಕುರಿತು ಮಾತನಾಡಿದರು. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಚಿತ್ರಗಳು ಸಾಕಷ್ಟು ಸುದ್ದಿ ಮಾಡುತ್ತಿವೆ ಮತ್ತು ಅದಕ್ಕೆ ಹೊಸ ಉದಾಹರಣೆ ಎಂದರೆ, ಅದು ನಿಮ್ಮ ‘ಕಾಂತಾರ’ ಎಂದರು. ತಕ್ಷಣವೇ, ಅಲ್ಲ ಅದು ನೀವು ಅಭಿನಯಿಸಿದ ಚಿತ್ರವಲ್ಲ’ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಯಶ್​, ‘ಕಾಂತಾರ’ ಸಹ ತಮ್ಮದೇ ಚಿತ್ರ ಎಂದು ಹೇಳಿಕೊಂಡರು. ‘ನೀವು ‘ಕಾಂತಾರ’ ನನ್ನ ಚಿತ್ರವಲ್ಲ ಎಂದು ಹೇಳಿದಿರಿ. ಆದರೆ, ಅದು ಸುಳ್ಳು. ಅದು ಸಹ ನನ್ನ ಚಿತ್ರವೇ. ನಮ್ಮ ಕನ್ನಡದ ಚಿತ್ರವೇ. ನಾನು ಆ ಚಿತ್ರದಲ್ಲಿ ನಟಿಸದಿರಬಹುದು. ಆದರೆ, ಅದು ನಮ್ಮ ಭಾಷೆಯ ಚಿತ್ರ. ಪ್ರಮುಖವಾಗಿ ಜನರ ದೃಷ್ಟಿಕೋನ ಬದಲಾಗಬೇಕಿದೆ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ಬಹಳಷ್ಟು ಜನ ನಮ್ಮ ಚಿತ್ರರಂಗವನ್ನು ಚಿಕ್ಕ ಚಿತ್ರರಂಗ ಎಂದು ಕರೆಯುತ್ತಿದ್ದರು. ಬೇರೆ ಭಾಷೆಗಳ ಎದುರು ನಾವು ಸ್ಪರ್ಧಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ನಮ್ಮ ಚಿತ್ರರಂಗ ಚಿಕ್ಕದೋ, ದೊಡ್ಡದೋ ಮುಖ್ಯವಲ್ಲ. ಅದರಲ್ಲಿ ನಾವು ಏನು ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ಚಿಕ್ಕ ಚಿತ್ರರಂಗವಾದರೂ ನಾವು ಬಹಳಷ್ಟು ಒಳ್ಳೆಯ ಚಿತ್ರಗಳನ್ನು ಮಾಡಬಹುದು. ಒಂದೊಮ್ಮೆ ಅದು ಯಶಸ್ವಿಯಾದರೆ, ದೃಷ್ಟಿಕೋನ ಬದಲಾಗುತ್ತದೆ’ ಎಂದಿದ್ದಾರೆ ಯಶ್​.

    ಇದನ್ನೂ ಓದಿ: ವಿಜಯಾನಂದ ಹಾಡಿಗೆ ಉತ್ತಮ ಪ್ರತಿಕ್ರಿಯೆ; ವೈರಲ್ ಆಗಿದೆ ‘ಹಾಗೆ ಆದ ಆಲಿಂಗನ…’ ಸಾಂಗ್

    ಸದ್ಯದ ಮಟ್ಟಿಗೆ ದೃಷ್ಟಿಕೋನ ಬದಲಾಗಿದೆ ಎನ್ನುವ ಅವರು, ‘ಕನ್ನಡ ಚಿತ್ರರಂಗ ಮಿಂಚುತ್ತಿದೆ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ. ಹೆಜ್ಜೆ ಇಡುವುದು ಬಹಳ ಮುಖ್ಯ ಮತ್ತು ಇಂದು ಬಹಳಷ್ಟು ಜನರು ಹೆಜ್ಜೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೆ ಮುಂದಾಗಿದ್ದಾರೆ. ನಾವು ‘ಕೆಜಿಎಫ್​’ ಚಿತ್ರವನ್ನು ಕರ್ನಾಟಕದ ಆಚೆಗೆ ಪ್ರಮೋಟ್​ ಮಾಡುವ ಪ್ರಯತ್ನ ಮಾಡಿದಾಗ, ನಮ್ಮ ತಂಡದಲ್ಲೇ ಬಹಳಷ್ಟು ಜನರಿಗೆ ನಮ್ಮ ಮೇಲೆ ನಂಬಿಕೆ ಇರಲಿಲ್ಲ. ಅವರೆಲ್ಲರಿಗೂ ಕನ್ನಡದಲ್ಲಿ ಇದನ್ನು ದೊಡ್ಡ ಮಟ್ಟಿಗೆ ಮಾಡುವ ಆಎ ಇತ್ತು. ಆದರೆ, ಪ್ಯಾನ್​ ಇಂಡಿಯಾ ಚಿತ್ರ ಮಾಡೋಣ ಎಂದಾಗ ಬಹಳಷ್ಟು ಜನರಿಗೆ ವಿಶ್ವಾಸ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಒಂದು ಪ್ರಯತ್ನ ಮಾಡಬಾರದು. ಪ್ರೇಕ್ಷಕರಿಗೆ ಯಾವುದೇ ಪಕ್ಷಪಾತ ಇರುವುದಿಲ್ಲ. ಅವರಿಗೆ ಒಂದು ಚಿತ್ರ ಹೇಗಿದೆ ಎಂಬುದಷ್ಟೇ ಮುಖ್ಯ. ಚಿತ್ರ ಇಷ್ಟವಾದರೆ, ಅದನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸುತ್ತಾರೆ’ ಎಂದರು.

    ನಾನಿನ್ನೂ ಸತ್ತಿಲ್ಲ; ತಮ್ಮ ಅನಾರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರ ಬಗ್ಗೆ ಸಮಂತಾ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts