More

    ದರ್ಶನ್​-ಯಶ್​ ಅಭಿಮಾನಿಗಳ ನಡುವೆ ಜೋರಾಯ್ತು ಟ್ವೀಟ್​ ಸಮರ: ಫ್ಯಾನ್ಸ್​ ವಾರ್​ಗೆ ಕೊನೆ ಎಂದು?

    ಮಹಾಶಿವರಾತ್ರಿಯಂದು ದೇಶಾದ್ಯಂತ ಬಿಡುಗಡೆಯಾಗಿರುವ ರಾಬರ್ಟ್​ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಸ್ಯಾಂಡಲ್​ವುಡ್​ ಮಟ್ಟಿಗೆ ಹಣ ಗಳಿಕೆಯಲ್ಲಿ ರಾಬರ್ಟ್​ ಸಿನಿಮಾ ಹೊಸ ದಾಖಲೆ ಬರೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದೇ ವಿಚಾರ ರಾಕಿಂಗ್​ ಸ್ಟಾರ್​ ಯಶ್​ ಮತ್ತು ದರ್ಶನ್​ ಅಭಿಮಾನಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

    ಸ್ಯಾಂಡಲ್​ವುಡ್​ನ ಸ್ಟಾರ್​ ನಟರಾದ ಯಶ್​ ಮತ್ತು ದರ್ಶನ್​ಗೆ ಬಹುದೊಡ್ಡ ಅಭಿಮಾನಿಗಳ ಬಳಗವಿದೆ. ದರ್ಶನ್​ ಎರಡು ದಶಕಗಳಿಂದ ಚಂದನವನದಲ್ಲಿ ಡಿ ಬಾಸ್​ ಆಗಿ ಮಿಂಚುತ್ತಿದ್ದಾರೆ. ಯಶ್​ ಅವರು ಕೆಜಿಎಫ್​ ಚಿತ್ರದ ಮೂಲಕ ಗಡಿಯಿಂದಾಚೆಗೆ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಈ ನಟರಿಬ್ಬರ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತದೆ ಅಂದರೆ ಗಲ್ಲಾ ಪೆಟ್ಟಿಗೆ ಉಡೀಸ್​ ಆಗುವುದು ಗ್ಯಾರೆಂಟಿ.

    ಇದನ್ನೂ ಓದಿರಿ: ವೈರಲ್ ಆಗ್ತಿದೆ ಬುಮ್ರಾ ಕುರಿತು ಭಾವಿ ಪತ್ನಿ ಸಂಜನಾ ಗಣೇಶನ್​ ಮಾಡಿದ್ದ ಹಳೆಯ ಟ್ವೀಟ್​..!

    ಇದೀಗ ರಾಬರ್ಟ್​ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವುದರ ನಡುವೆಯೇ ನಟರಿಬ್ಬರ ಅಭಿಮಾನಿಗಳು ಜಾಲತಾಣದಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ. ಸದ್ಯ ರಾಬರ್ಟ್​ ಚಿತ್ರದ ಮೊದಲ ದಿನ ಕಲೆಕ್ಷನ್ ಎರಡು ಭಾಷೆಯಲ್ಲಿ ಸೇರಿ​ 20 ಕೋಟಿ ರೂ.ಗೂ ಹೆಚ್ಚು ಎಂದು ಹೇಳಲಾಗುತ್ತಿದೆ. ಕೆಜಿಎಫ್​ ಐದು ಭಾಷೆಯಲ್ಲಿ ಸೇರಿ ಮೊದಲ ದಿನ 18 ಕೋಟಿ ರೂ. ಗಳಿಸಿತ್ತು ಎಂದು ದರ್ಶನ್​ ಅಭಿಮಾನಿಗಳು ಜಾಲತಾಣದಲ್ಲಿ ಟ್ವೀಟ್​ ಮಾಡುತ್ತಿದ್ದಾರೆ.

    ನಟ ದರ್ಶನ್​ ಅವರು ಕೆಜಿಎಫ್​ ದಾಖಲೆಯನ್ನು ಮುರಿದಿದ್ದಾರೆ ಎಂದು ಅಭಿಮಾನಿಗಳು ಟ್ವೀಟ್​ ಮಾಡಿರುವುದು ಯಶ್​ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಶ್​ ಅಭಿಮಾನಿಗಳು ಕೆಜಿಎಫ್​ ದಾಖಲೆಯನ್ನು ಕೆಜಿಎಫ್​ 2ನಿಂದ ಮಾತ್ರ ಮುರಿಯಲು ಸಾಧ್ಯ ಎನ್ನುತ್ತಿದ್ದಾರೆ.

    ಆದರೆ, ಇದರಲ್ಲಿ ಯಾವುದು ಸತ್ಯ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಸದ್ಯ ಓಡಾಡುತ್ತಿರುವ ಅಂಕಿ-ಅಂಶಗಳು ಎಷ್ಟು ಸತ್ಯ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಈ ಎಲ್ಲ ಕುತೂಹಲಕ್ಕೆ ಚಿತ್ರ ನಿರ್ಮಾಪಕರ ಬಳಿ ಮಾತ್ರ ಉತ್ತರವಿದೆ. ಆದರೂ ಅಭಿಮಾನಿಗಳು ಮಾತ್ರ ತಮ್ಮ ನಟರೇ ಮೇಲೂ ಎಂದು ವಾದಿಸುವ ಮೂಲ ಫ್ಯಾನ್ಸ್​ ವಾರ್​ಗೆ ಸಾಕ್ಷಿಯಾಗಿದ್ದಾರೆ.

    ಇದನ್ನೂ ಓದಿರಿ: ಬಾಯ್​ಫ್ರೆಂಡ್​ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವತಿ..!

    ಫ್ಯಾನ್ಸ್​ಗಳ ಟ್ವೀಟ್​ ಸಮರವನ್ನು ಈ ಕೆಳಗಿನ ಟ್ವೀಟ್​ಗಳಲ್ಲಿ ನೀವು ನೋಡಬಹುದಾಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts