More

    ಹಡಿಲು ಮುಕ್ತಿಗೆ ಸರ್ವ ಯತ್ನ

    ಹೆಬ್ರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ಉತ್ತೇಜನ ನೀಡಿ ಸಂಪೂರ್ಣ ಸಹಕಾರದೊಂದಿಗೆ ಹಡಿಲು ಬಿದ್ದ ಗದ್ದೆಗಳನ್ನು ಯಂತ್ರಶ್ರೀ ಮೂಲಕ ಕೃಷಿ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯನ್ನು ಹಡಿಲು ಮುಕ್ತವಾಗಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

    ಗುರುವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಉಡುಪಿ ಜಿಲ್ಲೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹೆಬ್ರಿ ವಲಯದ ನೇತೃತ್ವದಲ್ಲಿ ಕುಚ್ಚೂರು ಹಾಲಿಕೊಡ್ಲು ಹಾಲು ಒಕ್ಕೂಟ ಸಂಘದ ಬಳಿ ಹಡಿಲು ಭೂಮಿ ಪುನಶ್ಚೇತನ, ಯಂತ್ರಶ್ರೀ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಯಂತ್ರಶ್ರೀಯನ್ನು ಉದ್ಘಾಟಿಸಿದರು.

    ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಹೆಬ್ರಿ ತಹಸೀಲ್ದಾರ್ ಕೆ.ಮಹೇಶ್ಚಂದ್ರ, ಜಿ.ಪಂ.ಸದಸ್ಯೆ ಜ್ಯೋತಿ ಹರೀಶ್ ಮೊದಲಾದವರು ಉಪಸ್ಥಿತರಿದ್ದರು. ಯೋಜನೆಯ ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಗಣೇಶ್ ಬಿ.ಸ್ವಾಗತಿಸಿ, ಹೆಬ್ರಿ ವಲಯ ಮೇಲ್ವೀಚಾರಕ ಪ್ರವೀಣಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ತಾಲೂಕು ಯೋಜನಾಧಿಕಾರಿ ಭಾಸ್ಕರ್ ವಿ.ವಂದಿಸಿದರು.

    ರೈತರಿಗೆ ಪ್ರತಿ ಎಕ್ರೆಗೆ 20 ಸಾವಿರ ರೂ. ಸಾಲ ನೀಡಲಾಗುತ್ತಿದ್ದು, ಅದರಿಂದ ಯಾಂತ್ರೀಕೃತ ಕೃಷಿ ಮೂಲಕ ಭತ್ತ ಬೆಳೆದು ಲಾಭ ಬಂದರೆ ಮಾತ್ರ ಸಾಲ ಮರುಪಾವತಿ ಮಾಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ 6500ಎಕ್ರೆಯಲ್ಲಿ ಯಾಂತ್ರಿಕೃತ ಕೃಷಿ ಮಾಡಲು ಹೊರಟಿದ್ದು, ಈಗಾಗಲೇ 1250 ಎಕ್ರೆ ಪೂರೈಸಿದ್ದೇವೆ.
    ಡಾ.ಎಲ್.ಎಚ್.ಮಂಜುನಾಥ್
    ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಕ್ಷೇ.ಧ.ಗ್ರಾ.ಯೋ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts