More

    ರಾಜಧಾನಿಯಲ್ಲಿ ಪ್ರವಾಹದ ಎಚ್ಚರಿಕೆ! ಅಪಾಯದ ಮಟ್ಟ ಮೀರಿದ ಯಮುನಾ

    ನವದೆಹಲಿ : ಪಶ್ಚಿಮೋತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರಿಯುತ್ತಿರುವಂತೆ, ರಾಜಧಾನಿಯಲ್ಲಿ ಯಮುನಾ ನದಿಯ ನೀರಿನ ಮಟ್ಟ ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ 205.34 ಮೀಟರ್​ಗೆ ಏರಿದೆ. 205.33 ಮೀಟರ್​ ಮಟ್ಟದಲ್ಲಿರುವ ಡೇಂಜರ್​ ಮಾರ್ಕ್​ಅನ್ನು ಮೀರಿದ ಹಿನ್ನೆಲೆಯಲ್ಲಿ ದೆಹಲಿ ಆಡಳಿತವು ಇಂದು ‘ಫ್ಲಡ್​​ಅಲರ್ಟ್’​ ಹೊರಡಿಸಿದೆ.

    ಹರಿಯಾಣವು ಹತ್ನಿಕುಂಡ್ ಬ್ಯಾರೇಜ್‌ನಿಂದ ನದಿಗೆ ಹೆಚ್ಚಿನ ನೀರನ್ನು ಬಿಟ್ಟಿರುವುದರಿಂದ, ದೆಹಲಿ ಪೊಲೀಸರು ಮತ್ತು ಪೂರ್ವ ದೆಹಲಿ ಜಿಲ್ಲಾಡಳಿತ ರಾಜಧಾನಿಯ ಯಮುನಾ ಪ್ರವಾಹ ಪ್ರದೇಶದಲ್ಲಿ ವಾಸಿಸುವ ಜನರನ್ನು ಯಮುನಾ ಪುಷ್ಟಾ ಪ್ರದೇಶದಲ್ಲಿನ ಸರ್ಕಾರಿ ಆಶ್ರಯ ಮನೆಗಳಿಗೆ ಸ್ಥಳಾಂತರಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಲಂಕಾ ಪ್ರವಾಸ: ಚಹಾಲ್ ಜೊತೆ ಕನ್ನಡಿಗನಿಗೂ ಒಕ್ಕರಿಸಿದ ಕರೊನಾ…

    ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯು 13 ದೋಣಿಗಳನ್ನು ವಿವಿಧ ಪ್ರದೇಶಗಳಲ್ಲಿ ನಿಯೋಜಿಸಿದ್ದು, ಇನ್ನೂ 21 ದೋಣಿಗಳನ್ನು ಸಿದ್ಧವಾಗಿರಿಸಿಕೊಂಡಿದೆ. ನೀರಿನ ಮಟ್ಟವನ್ನು ನಿಯಂತ್ರಿಸಲು ಯಮುನಾವನ್ನು ತಲುಪುವ ಹೊರಹರಿವಿನ ಚರಂಡಿಗಳ ಗೇಟ್‌ಗಳನ್ನು ಮುಚ್ಚಲಾಗಿದೆ.

    ನದಿಯ ನೀರಿನ ಮಟ್ಟವು ವೇಗವಾಗಿ ಏರಿಕೆಯಾಗುತ್ತಿದೆ. ನಗರದ ಓಲ್ಡ್​ ರೈಲ್ವೇ ಬ್ರಿಡ್ಜ್​ ಪ್ರದೇಶದಲ್ಲಿ ಇಂದು ಬೆಳಿಗ್ಗೆ 8.30 ಕ್ಕೆ ನೀರಿನ ಮಟ್ಟವು 205.22 ಮೀ.ನಷ್ಟು ದಾಖಲಾಗಿತ್ತು. ನಿನ್ನೆ ಇದೇ ಸಮಯಕ್ಕೆ 203.74 ಮೀ.ನಷ್ಟಿತ್ತು. ಇಂದು ಬೆಳಿಗ್ಗೆ 6 ಗಂಟೆಗೆ 205.10 ಮೀಟರ್ ಇದ್ದರೆ, 7 ಗಂಟೆಗೆ 205.17 ಆಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

    ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಪ್ರಕಟ: ಶೇ.99.37 ರಷ್ಟು ವಿದ್ಯಾರ್ಥಿಗಳು ಪಾಸ್

    ಭಾರತಕ್ಕೆ ಮತ್ತೊಂದು ಪದಕ ಗ್ಯಾರಂಟಿ! ಬಾಕ್ಸಿಂಗ್​ನಲ್ಲಿ ಸೆಮಿಫೈನಲ್ಸ್ ತಲುಪಿದ ಲವ್ಲೀನಾ ಬೊರ್ಗೊಹೈನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts