More

    ಯಲ್ಲಾಪುರ, ಮುಂಡಗೋಡ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟ

    ಯಲ್ಲಾಪುರ/ಮುಂಡಗೋಡ: ಯಲ್ಲಾಪುರ ಅಡಕೆ ಭವನದಲ್ಲಿ ತಾಲೂಕಿನ 15 ಗ್ರಾಪಂ ಹಾಗೂ ಮುಂಡಗೋಡ ಲೊಯೋಲ ಕೇಂದ್ರೀಯ ವಿದ್ಯಾಲಯದಲ್ಲಿ ತಾಲೂಕಿನ 16 ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕ್ರಿಯೆ ಬುಧವಾರ ನಡೆಯಿತು.

    ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ, ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

    ಯಲ್ಲಾಪುರದಲ್ಲಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್, ತಾಪಂ ಇಒ ಜಗದೀಶ ಕಮ್ಮಾರ ಇತರರಿದ್ದರು. ಮುಂಡಗೋಡಿನಲ್ಲಿ ತಹಸೀಲ್ದಾರ್ ಶ್ರೀಧರ ಮುಂದಲಮನಿ, ತಾಪಂ ಇಒ ಪ್ರವೀಣ ಕಟ್ಟಿ, ರಾಘವೇಂದ್ರ ಗಿರಡ್ಡಿ, ಗ್ರಾಪಂ ಸದಸ್ಯರು, ಅಧಿಕಾರಿಗಳು ಇದ್ದರು.

    ಯಲ್ಲಾಪುರ ತಾಲೂಕು– ಕಂಪ್ಲಿ: ಅಧ್ಯಕ್ಷ -ಅ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ (ಸಾ.ಮ.). ಹಾಸಣಗಿ: ಅ ವರ್ಗ, ಸಾ.ಮ. ಮಾವಿನಮನೆ: ಅ ವರ್ಗದ ಮಹಿಳೆ, ಸಾಮಾನ್ಯ. ಮದನೂರು: ಅ ವರ್ಗದ ಮಹಿಳೆ, ಸಾಮಾನ್ಯ. ಉಮ್ಮಚಗಿ: ಬ ವರ್ಗದ ಮಹಿಳೆ, ಸಾಮಾನ್ಯ. ಕಣ್ಣಿಗೇರಿ: ಸಾಮಾನ್ಯ, ಸಾ.ಮ. ಆನಗೋಡ-ಸಾಮಾನ್ಯ, ಅ ವರ್ಗದ ಮಹಿಳೆ. ದೇಹಳ್ಳಿ: ಸಾಮಾನ್ಯ, ಸಾಮಾನ್ಯ. ನಂದೊಳ್ಳಿ: ಸಾಮಾನ್ಯ, ಸಾ.ಮ. ಹಿತ್ಲಳ್ಳಿ: ಸಾಮಾನ್ಯ, ಅ ವರ್ಗದ ಮಹಿಳೆ. ವಜ್ರಳ್ಳಿ: ಸಾ.ಮ., ಸಾಮಾನ್ಯ. ಕಿರವತ್ತಿ: ಸಾ.ಮ., ಪರಿಶಿಷ್ಟ ವರ್ಗದ ಮಹಿಳೆ. ಚಂದಗುಳಿ: ಸಾ. ಮ., ಅ ವರ್ಗ. ಕುಂದರಗಿ: ಸಾ.ಮ. ಅ ವರ್ಗ. ಇಡಗುಂದಿ: ಪರಿಶಿಷ್ಟ ವರ್ಗದ ಮಹಿಳೆ, ಬ ವರ್ಗದ ಮಹಿಳೆ.

    ಹೊಂದುವವರು ಇಲ್ಲ: ಇಡಗುಂದಿ ಗ್ರಾಪಂನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ, ಉಮ್ಮಚಗಿ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಂದ ಮೀಸಲಾತಿಗೆ ಹೊಂದುವ ಜನಪ್ರತಿನಿಧಿಗಳೇ ಇಲ್ಲ.

    ಮುಂಡಗೋಡ ತಾಲೂಕು– ಬಾಚಣಕಿ: ಅಧ್ಯಕ್ಷ-ಹಿಂದುಳಿದ ಅ ವರ್ಗ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ (ಸಾ.ಮ.). ನಾಗನೂರ: ಹಿಂದುಳಿದ ಅ ವರ್ಗ, ಅನುಸೂಚಿತ ಜಾತಿ ಮಹಿಳೆ. ಸಾಲಗಾಂವ: ಹಿಂದುಳಿದ ಅ ವರ್ಗ ಮಹಿಳೆ, ಸಾಮಾನ್ಯ. ಮೈನಳ್ಳಿ-ಹಿಂದುಳಿದ ಅ ವರ್ಗ ಮಹಿಳೆ, ಅನುಸೂಚಿತ ಜಾತಿ. ಚಿಗಳ್ಳಿ: ಹಿಂದುಳಿದ ಬ ವರ್ಗ ಮಹಿಳೆ, ಪ.ಪಂ. ಮಹಿಳೆ, ಗುಂಜಾವತಿ: ಸಾಮಾನ್ಯ, ಸಾಮಾನ್ಯ. ಚವಡಳ್ಳಿ: ಸಾಮಾನ್ಯ, ಸಾ.ಮ. ಪಾಳಾ: ಸಾಮಾನ್ಯ, ಸಾಮಾನ್ಯ. ಕೋಡಂಬಿ: ಸಾಮಾನ್ಯ, ಸಾ.ಮ. ಮಳಗಿ: ಸಾಮಾನ್ಯ, ಹಿಂದುಳಿದ ಅ ವರ್ಗ ಮಹಿಳೆ. ಹುನಗುಂದ: ಸಾ.ಮ., ಸಾಮಾನ್ಯ. ಇಂದೂರ: ಸಾ.ಮ., ಹಿಂದುಳಿದ ಅ ವರ್ಗ. ಕಾತೂರ: ಸಾ.ಮ., ಹಿಂದುಳಿದ ಬ ವರ್ಗ ಮಹಿಳೆ. ಓರಲಗಿ (ಓಣಿಕೇರಿ): ಅನುಸೂಚಿತ ಜಾತಿ, ಹಿಂದುಳಿದ ಅ ವರ್ಗ ಮಹಿಳೆ. ಬೆಡಸಗಾಂವ: ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ಅ ವರ್ಗ. ನಂದಿಕಟ್ಟಾ: ಪ.ಪಂ. ಮಹಿಳೆ, ಸಾಮಾನ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts