More

    ಯುವಕರು ಕೃಷಿ ಕಡೆಗೆ ಒಲವು ತೋರಲಿ

    ಯಲಬುರ್ಗಾ: ಯುವ ಜನಾಂಗ ಕೃಷಿಯ ಕಡೆಗೆ ಗಮನ ಹರಿಸುವ ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಿ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಹೇಳಿದರು.
    ತಾಲೂಕಿನ ಬೇವೂರು ಗ್ರಾಮದಲ್ಲಿ ಸಂಗನಬಸವ ರೈತ ಉತ್ಪಾದಕರ ಕಂಪನಿ ಶನಿವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಯುವ ಜನಾಂಗ ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಮುಂದಾಗುತ್ತಾರೆ. ಆದರೆ ಕೃಷಿ ಕಡೆಗೆ ಒಲವು ತೋರುತ್ತಿಲ್ಲ. ಸರ್ಕಾರಿ, ಖಾಸಗಿ ಸಂಸ್ಥೆಯಲ್ಲಿ ನೌಕರಿಗಾಗಿ ಅಲೆಯುವ ಬದಲು ಒಕ್ಕಲುತನದ ಕಾಯಕಕ್ಕೆ ಬಂದರೆ, ದೇಶದಲ್ಲಿ ವಿದ್ಯಾವಂತ ಅನ್ನದಾತರ ಮೂಲಕ ಕೃಷಿ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ಗಾಳಿ ಬೀಸಲಿದೆ ಎಂದರು.

    ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ, ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಕೃಷಿ ಮಾಹಿತಿ ಮತ್ತು ರೈತರ ಕುರಿತು ಹೆಚ್ಚು ಹೆಚ್ಚು ಪಾಠಗಳು ಬರಬೇಕು. ಆಗ ವಿದ್ಯಾರ್ಥಿಗಳಲ್ಲಿ ಒಕ್ಕಲುತನದ ಮೇಲೆ ಆಸಕ್ತಿ ಹುಟ್ಟುತ್ತದೆ ಎಂದರು.

    ಗ್ರಾಪಂ ಉಪಾಧ್ಯಕ್ಷೆ ಅನ್ನಪೂರ್ಣ ಯಮನಪ್ಪ ಗಡ್ಡದ, ಇಲಾಖೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಅಲ್ಲಾಗಿರಿರಾಜ್ ಕನಕಗಿರಿ, ಎನ್.ಎಸ್.ತಾವರಗೇರಾ, ಸಂಗನಬಸವ ರೈತ ಉತ್ಪಾದಕರ ಕಂಪನಿಯ ಉಪಾಧ್ಯಕ್ಷೆ ಸುಮಿತ್ರಾ ಬಡಿಗೇರ, ಸಿಇಒ ಡಿ.ಕೆ.ಗೊಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts