More

    ಅಂಬೇಡ್ಕರ್ ಆದರ್ಶ ನಮ್ಮೆಲ್ಲರಿಗೂ ಮಾದರಿ

    ಯಲಬುರ್ಗಾ: ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.

    ಪಟ್ಟಣದ ತಹಸಿಲ್ ಕಚೇರಿ ಮುಂಭಾಗ ಸಂವಿಧಾನ ಜಾಗೃತಿ ಜಾಥಾ ನಿಮಿತ್ತ ಅಂಬೇಡ್ಕರ್ ಸ್ತಬ್ಧ ಚಿತ್ರ ಸ್ವಾಗತಿಸಿ ಸೋಮವಾರ ಮಾತನಾಡಿದರು. ಸಂವಿಧಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಆದರ್ಶ ನಮ್ಮೆಲ್ಲರಿಗೂ ಮಾದರಿಯಾಗಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಿದೆ. ಅದರ ರಕ್ಷಣೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು.

    ಸಂಗನಾಳ ಮೂಲಕ ಪಟ್ಟಣಕ್ಕೆ ಆಗಮಿಸಿದ ಜಾಥಾ, ಕಿತ್ತೂರು ರಾಣಿ ಚನ್ನಮ್ನ, ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತದ ಮೂಲಕ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಶಾಲಾ ವಿದ್ಯಾರ್ಥಿಗಳು, ನೌಕರರು, ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.ಬಳಿಕ ಜಾಥಾ ಕಲ್ಲೂರು ಗ್ರಾಮಕ್ಕೆ ತೆರಳಿತು.

    ತಾಪಂ ಇಒ ಸಂತೋಷ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ, ಸಮಾಜ ಕಲ್ಯಾಣ ಅಧಿಕಾರಿ ವಿ.ಕೆ.ಬಡಿಗೇರ್, ಮುಖ್ಯಾಧಿಕಾರಿ ನಾಗೇಶ, ಅಧಿಕಾರಿಗಳಾದ ಕೆ.ಟಿ.ನಿಂಗಪ್ಪ, ಪ್ರಾಣೇಶ ಹಾದಿಮನಿ, ಮುಖಂಡರಾದ ಸಿದ್ದಪ್ಪ ಕಟ್ಟಿಮನಿ, ಶರಣಪ್ಪ ಗಾಂಜಿ, ವಸಂತ ಭಾವಿಮನಿ, ಈರಪ್ಪ ಬಣಕಾರ, ಅಂದಪ್ಪ ಹಾಳಕೇರಿ, ಶಂಕರ ಜಕ್ಕಲಿ, ವೀರಣ್ಣ ಹುಬ್ಬಳ್ಳಿ, ಶರಣಮ್ಮ ಪೂಜಾರ, ಅಮರೇಶ ಹುಬ್ಬಳ್ಳಿ, ರೇವಣಪ್ಪ ಹಿರೇಕುರುಬರ್, ನಾಗರಾಜ ತಲ್ಲೂರ, ಹನುಮಂತಪ್ಪ ಭಜಂತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts