More

    ಹಳ್ಳಿಗಳಲ್ಲಿ ರಂಗಕಲೆಗೆ ಸಿಗುತ್ತಿದೆ ಪ್ರೋತ್ಸಾಹ : ಶ್ರೀ ಉಳಿವೇಂದ್ರ ಸ್ವಾಮೀಜಿ ಅಭಿಮತ

    ಯಲಬುರ್ಗಾ: ರಂಗಭೂಮಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸವಾಗಬೇಕು ಎಂದು ಮೌನೇಶ್ವರಮಠದ ಶ್ರೀ ಉಳಿವೇಂದ್ರ ಸ್ವಾಮೀಜಿ ಹೇಳಿದರು.

    ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಇಟಗಿಯ ಶಿವಶರಣೆ ಶ್ರೀ ಭೀಮಾಂಬಿಕಾದೇವಿ ಮಹಾತ್ಮೆ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ರಂಗಭೂಮಿ ಕಲೆ ತನ್ನದೇ ಮಹತ್ವ ಹೊಂದಿದೆ. ನಗರ, ಪಟ್ಟಣಕ್ಕಿಂತ ಹಳ್ಳಿಗಳಲ್ಲಿ ರಂಗಕಲೆಗೆ ಪ್ರೋತ್ಸಾಹ ಸಿಗುತ್ತಿರುವುದರಿಂದ ನಾಟಕಗಳು ಇನ್ನೂ ಜೀವಂತವಾಗಿವೆ ಎಂದರು. ಭೂಮಿ ಮೇಲೆ ನಾವು ಬದುಕಲು ಅವಕಾಶ ಮಾಡಿಕೊಟ್ಟ ಪರಮಾತ್ಮನನ್ನು ಸ್ಮರಿಸಬೇಕು. ಹಿರಿಯರು ಹಾಕಿಕೊಟ್ಟ ಧರ್ಮದ ಹಾದಿಯಲ್ಲಿ ನಡೆಯಬೇಕು. ಧಾರ್ಮಿಕ ಕಾರ್ಯಗಳಿಂದ ಎಲ್ಲರಲ್ಲಿ ಸಾಮರಸ್ಯ ಮೂಡುತ್ತದೆ ಎಂದರು. ಶಿಕ್ಷಕ ಬಸವರಾಜ ಅಂಗಡಿ, ಮುಖಂಡ ಮಲ್ಲಿಕಾರ್ಜುನ ನಿಟ್ಟಾಲಿ ಮಾತನಾಡಿದರು. ಶ್ರೀ ಶಂಭುಲಿಂಗಯ್ಯ ಹಿರೇಮಠ, ಹನುಮಂತಪ್ಪಜ್ಜ ಧರ್ಮರಮಠ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಹನುಮಗೌಡ ಸಾಲಬಾವಿ ಕಾರ್ಯಕ್ರಮ ಉದ್ಘಾಟಿಸಿದರು.

    ಗ್ರಾಪಂ ಅಧ್ಯಕ್ಷ ದೇವೇಂದ್ರಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶರಣಪ್ಪ ತಲ್ಲೂರು, ಚನ್ನಮ್ಮ ತಲ್ಲೂರು, ಪರಪ್ಪ ಅಂಗಡಿ, ಬಸವರಾಜ ಜಂಬಾಳಿ, ಮಹಾದೇವಪ್ಪ ಹುಡೇದ, ಷಣ್ಮುಖಪ್ಪ ಮೇಲಸಕ್ರಿ, ರುದ್ರಗೌಡ ನಂದಿಹಾಳ, ಸಣ್ಣೆಪ್ಪ ದೊಡ್ಡಮನಿ, ಹನುಮಪ್ಪ ಗುರಿಕಾರ, ಮುಕ್ಕಣ್ಣ ನಿಟ್ಟಾಲಿ, ಮೌನೇಶ ನಂದಿಹಾಳ, ನಾಗರಾಜ ಹುಡೇದ, ಯಲ್ಲಪ್ಪ ಹುಡೇದ, ಮಳೇಗೌಡ ಸಾಲಬಾವಿ, ಹನುಮಂತಪ್ಪ ದೊಡ್ಡಮನಿ, ಮಲ್ಲು ಮಾಟರಂಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts