More

    ಮಾದರಿ ಗ್ರಾಪಂಗೆ ಕೈಜೋಡಿಸಿ


    ಯಲಬುರ್ಗಾ: ಬರಗಾಲವಿರುವುದರಿಂದ ಗ್ರಾಮಗಳಲ್ಲಿ ಜನಪ್ರತಿನಿಧಿಗಳು ಕುಡಿವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.

    ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ತಾಲೂಕಿನ 22 ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗುರುವಾರ ಹಮ್ಮಿಕೊಂಡಿದ್ದ 3 ದಿನಗಳ ಉಪಗ್ರಹ ಆಧಾರಿತ ತರಬೇತಿಯಲ್ಲಿ ಮಾತನಾಡಿದರು.

    ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಗ್ರಾಪಂ ಪಿಡಿಒಗಳ ಜತೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಬೇಕು. ಮೂಲಸೌಕರ್ಯ ಕಲ್ಪಿಸಬೇಕು. ಜನಪ್ರತಿನಿಧಿಗಳು ತರಬೇತಿಗೆ ತಪ್ಪದೇ ಭಾಗವಹಿಸಿ ಮಾಹಿತಿ ಪಡೆದು ಉತ್ತಮ ಆಡಳಿತ ನಿರ್ವಹಿಸುವ ಮೂಲಕ ಮಾದರಿ ಗ್ರಾಪಂಗೆ ಕೈಜೋಡಿಸಬೇಕು ಎಂದರು.

    ಸಂಪನ್ಮೂಲ ವ್ಯಕ್ತಿ ಭೀಮಪ್ಪ ಹವಳಿ, ತರಬೇತಿ ವಿಷಯ ನಿರ್ವಾಹಕ ಬಸವರಾಜ ಮಾಲಿಪಾಟೀಲ್ ಮತ್ತು 22 ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts