More

    ರಂಗೋಲಿಯಲ್ಲಿ ಅರಳಿದ ಕನ್ನಡ ವ್ಯಾಕರಣ

    ಯಲಬುರ್ಗಾ: ತಾಳಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಭಾನುವಾರ ಸಂಕ್ರಾಂತಿ ಹಬ್ಬವನ್ನು ರಂಗೋಲಿಯಲ್ಲಿ ಕನ್ನಡ ವ್ಯಾಕರಣಾಂಶಗಳನ್ನು ಮೂಡಿಸುವ ಮೂಲಕ ಆಚರಿಸಿದರು.

    ಕನ್ನಡ ವಿಷಯ ಶಿಕ್ಷಕ ತಿಮ್ಮಣ್ಣ ಜಗ್ಗಲ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳ ಮಾನಸಿಕ-ಬೌದ್ಧಿಕ ವಿಕಸನ ಸುಧಾರಣೆಗೆ ಸಂಕ್ರಾಂತಿ ಜತೆಗೆ ಕನ್ನಡ ವ್ಯಾಕರಣ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಕ್ರಾಂತಿ ಹಬ್ಬದೊಂದಿಗೆ ವಿದ್ಯಾರ್ಥಿಗಳು ತಮ್ಮ ಮನೆಯ ಮುಂದೆ ವ್ಯಾಕರಣದ ರಂಗೋಲಿ ಹಾಕಿಸುವ ಮೂಲಕ ಕಲಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿನ ಕೌಶಲ ಹೊರತಂದು ಉತ್ತಮ ಫಲಿತಾಂಶ ಪಡೆಯುವುದು ಮುಖ್ಯ ಉದ್ದೇಶವಾಗಿದೆ. ರಂಗೋಲಿ ಮೂಲಕ ವ್ಯಾಕರಣಾಂಶಗಳನ್ನು ಬಿಡಿಸಿದರೆ ಪರೀಕ್ಷೆಯಲ್ಲಿ ಅನಾಯಾಸವಾಗಿ ಪ್ರಶ್ನೆಗಳಿಗೆ ಉತ್ತರಿಸಬಹುದು. ಮಕ್ಕಳು ತಾವೇ ವ್ಯಾಕರಣಾಂಶಕ್ಕೆ ಸಂಬಂಧಿಸಿದ ಅಂಶಗಳನ್ನು ರಂಗೋಲಿ ಬಿಡಿಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಶಿಕ್ಷಕ ತಿಮ್ಮಣ್ಣ, ಇರಂಗೋಲಿಯಲ್ಲಿ ಅರಳಿದ ವ್ಯಾಕರಣಾಂಶವನ್ನು ಪರಿಶೀಲಿಸಿದರು. ಬೋಧಕೇತರ ನೌಕರ ಚಂದ್ರಶೇಖರ ಹಾಗೂ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts