More

    ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮಾತೃಭಾಷೆಗೆ ಧಕ್ಕೆ

    ಯಲಬುರ್ಗಾ: ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದು ಹಾಗೂ ಈ ಮೂಲಕ ಪದವಿಯಲ್ಲಿ ಮಾತೃಭಾಷೆ ಅಧ್ಯಯನವನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುತ್ತಿರುವುದನ್ನು ಖಂಡಿಸಿ ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಮುಖಾಂತರ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

    ಹೊಸ ಶಿಕ್ಷಣ ನೀತಿ ಅನುಷ್ಠಾನದಿಂದ ಪದವಿ ಶಿಕ್ಷಣವನ್ನು ಮೂರರಿಂದ ನಾಲ್ಕು ವರ್ಷಕ್ಕೆ ಏರಿಕೆ ಮಾಡಲಾಗುತ್ತಿದೆ. ಆದರೆ, ಮಾತೃಭಾಷೆ ಅಧ್ಯಯನವನ್ನು ಕೇವಲ ಒಂದು ವರ್ಷಕ್ಕೆ ಸೀಮಿತಗೊಳಿಸಿ, ಮಾತೃಭಾಷೆಗೆ ಧಕ್ಕೆ ತರುತ್ತಿದೆ. ದೇಶದಲ್ಲಿ ಕರ್ನಾಟಕ ಮೊದಲನೇಯದಾಗಿ ಈ ಯೋಜನೆ ಜಾರಿಗೆ ತರಲು ಮುಂದಾಗಿದೆ. ರಾಜ್ಯ ಸರ್ಕಾರ ಆತುರದ ನಿರ್ಧಾರ ಕೈಬಿಟ್ಟು ಮಾತೃಭಾಷೆಗೆ ಪ್ರಾಶಸ್ತ್ಯ ನೀಡಬೇಕು.

    ಸರ್ಕಾರದ ಏಕಪಕ್ಷೀಯ ನಿರ್ಧಾರ ಉನ್ನತ ಶಿಕ್ಷಣದ ಅಭಿವೃದ್ಧಿಗೂ ಮಾರಕವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿಧಾನಮಂಡಲದಲ್ಲಿ ಸಮಗ್ರ ಚರ್ಚೆಯಾಗಲಿ. ಕನ್ನಡ ಕಲಿಕೆ ಎಲ್ಲ ಹಂತದಲ್ಲಿ ಇರಬೇಕು. ಕನ್ನಡ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ನೀತಿ ರೂಪಿಸಬೇಕು ಎಂದು ಒತ್ತಾಯಿಸಲಾಯಿತು. ಒಕ್ಕೂಟದ ಪದಾಧಿಕಾರಿಗಳಾದ ಎಂ.ಸಿದ್ದಪ್ಪ, ಅಬ್ದುಲ್ ರಜಾಕ್ ಇಲಕಲ್, ಶರಣಪ್ಪ, ಬಸವರಾಜ ದೊಡ್ಡಮನಿ, ಹನುಮಂತ ಹೊಸಮನಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts