More

    ಕಾಂಗ್ರೆಸ್ ಡಬ್ಬ ಇಂಜಿನ್‌ಗೆ ಇಬ್ಬರು ಡ್ರೈವರ್

    ಯಲಬುರ್ಗಾ: ಪ್ರಧಾನಿ ನರೇಂದ್ರ ಮೋದಿ ಜನಪರ ಆಡಳಿತ ನಡೆಸುತ್ತಿದ್ದು, ದೇಶದ ಸುಭದ್ರತೆಗಾಗಿ ದಲಿತರು ಬಿಜೆಪಿ ಬೆಂಬಲಿಸಿ ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

    ಪಟ್ಟಣದ ಎಸ್.ಎ.ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಎಸ್ಸಿ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದೆ. ನಮ್ಮದು ಡಬಲ್ ಇಂಜಿನ್ ಸರ್ಕಾರ. ಕಾಂಗ್ರೆಸ್ ಡಬ್ಬ ಇಂಜಿನ್‌ಗೆ ಇಬ್ಬರು ಡ್ರೈವರಗಳು. ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ. ಇನ್ನೂ ಜೆಡಿಎಸ್ ವಿಕ್ಸ್ ಡಬ್ಬಿ ಪಕ್ಷವಾದರೆ, ಕಾಂಗ್ರೆಸ್ ಗ್ಯಾರಂಟಿ ಇಲ್ಲ ಪಕ್ಷವಾಗಿದೆ ಎಂದು ಟೀಕಿಸಿದರು.
    ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅಭಿಯಾನ ಜನರ ಕಿವಿಗೆ ಹೂ ಇಡುವುದಾಗಿದೆ. ಬಡತನ ನಿರ್ಮೂಲನೆಗೆ ಕಾಂಗ್ರೆಸ್ ಮುಂದಾಗಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯಗೆ ಚುನಾವಣೆಗೆ ನಿಲ್ಲಲು ಕ್ಷೇತ್ರ ಇಲ್ಲದಾಗಿದೆ. ಕಾಂಗ್ರೆಸ್ ನೋ ಗ್ಯಾರಂಟಿಯಾಗಿದೆ ಎಂದರು.

    ರಾಯರಡ್ಡಿ ವಿರುದ್ಧ ಹಾಲಪ್ಪ ವಾಗ್ದಾಳಿ: ಕೊಪ್ಪಳ ಏತ ನೀರಾವರಿ ಯೋಜನೆ ಬಗ್ಗೆ ಮಾಜಿ ಸಚಿವ ರಾಯರಡ್ಡಿ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಿದ್ದಾರೆ. ನನ್ನ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆ ಮಾಡಿದ್ದೇನೆಂದು ಸುಳ್ಳು ಹೇಳುವ ರಾಯರಡ್ಡಿ, ತಾವು ಆ ಕೆಲಸ ಮಾಡಿದ್ದರೆ ಜನರಿಗೆ ದಾಖಲೆ ತೋರಿಸಲಿ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣಕನಕಪ್ಪ ಮಾತನಾಡಿದರು.

    ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶಪ್ಪ ಹಿರೇಮನಿ, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಸಂಗಣ್ಣ ಜೋಗಣ್ಣನವರ, ಪ್ರಮುಖರಾದ ಸಿ.ಎಚ್.ಪಾಟೀಲ್, ಶಿವಶಂಕರ ದೇಸಾಯಿ, ಮಾರುತಿ ಗಾವರಾಳ, ಯಮನೂರಪ್ಪ ನಡುಲಮನಿ, ಶಂಕರ ಭಾವಿಮನಿ, ವೀರಣ್ಣ ಹುಬ್ಬಳ್ಳಿ, ಶರಣಪ್ಪ ಛಲವಾದಿ, ರತನ್ ದೇಸಾಯಿ, ಎಚ್.ಗಿರಿಗೌಡ, ಚಂದ್ರಶೇಖರ ಪಾಟೀಲ್, ಕನಕಮೂರ್ತಿ ಛಲವಾದಿ, ಶಿವಪ್ಪ ವಾದಿ ಇತರರಿದ್ದರು.

    ದಲಿತರ ಉದ್ಧಾರಕ್ಕಾಗಿ ಬಿಜೆಪಿ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದು ಅಭಿವೃದ್ಧಿಗೆ ಶ್ರಮಿಸಿದೆ. ಸಚಿವ ಹಾಲಪ್ಪ ಆಚಾರ್ ಕೆರೆ ತುಂಬಿಸುವ ಯೋಜನೆ ಹಾಗೂ ಕ್ಷೇತ್ರದಲ್ಲಿ ಪ್ರಗತಿಗೆ ಅನೇಕ ಕೆಲಸ ಮಾಡಿದ್ದಾರೆ.
    ಸಂಗಣ್ಣ ಕರಡಿ, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts