More

    ಮೋದಿ ಮಾತಿನಿಂದ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ ಎಂದು ಟೀಕಿಸಿದ ಮಾಜಿ ಮಂತ್ರಿ ಬಸವರಾಜ ರಾಯರಡ್ಡಿ

    ಯಲಬುರ್ಗಾ: ಪ್ರಧಾನಿ ನರೇಂದ್ರ ಮೋದಿ, ನೀರಾವರಿ ಬಗ್ಗೆ ಮಾತನಾಡುವುದರಿಂದ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಸಚಿವ ಹಾಲಪ್ಪ ಆಚಾರ್‌ಗೆ ಪರೋಕ್ಷವಾಗಿ ಟೀಕಿಸಿದರು.

    ತಾಲೂಕಿನ ಕಲ್ಲೂರು, ಸಂಗನಾಳ, ತೊಂಡಿಹಾಳ ಹಾಗೂ ಸಂಕನೂರಿನಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ ಅಭಿಯಾನದಡಿ ಗುರುವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

    ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ಚರಂಡಿ, ಸಿಸಿ ಹಾಗೂ ಡಾಂಬರ್ ರಸ್ತೆ ನಿರ್ಮಾಣಕ್ಕೆ ಮುಂದಾದಾಗ ರಾಯರಡ್ಡಿ ಕಮಿಷನ್‌ಗಾಗಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದರು. ಈಗ ತಾವು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.

    ಶಾಸಕರ 5 ವರ್ಷದ ಅವಧಿ ಮುಗಿಯುತ್ತಾ ಬಂದಿದ್ದರೂ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಮುಂದಿನ ಪೀಳಿಗೆಗೆ ಪ್ರಗತಿ ವಿಚಾರದಲ್ಲಿ ದೂರದೃಷ್ಟಿ ಮುಖ್ಯ. ರಾಜಕೀಯದಲ್ಲಿ ನನ್ನಿಂದ ಸಹಾಯ ಪಡೆದವರೇ ನನಗೆ ಮೋಸ ಮಾಡಿದ್ದಾರೆ. ಈ ಕೆಲಸ ಬೇರಾರೂ ಮಾಡಬಾರದು ಎಂದರು.

    ಅಗತ್ಯ ವಸ್ತುಗಳು ಹಾಗೂ ತೈಲ ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ. ಇದರಿಂದ ದೇಶದ ಪರಿಸ್ಥಿತಿ ಅಧೋಗತಿಗೆ ಸಾಗುತ್ತಿದೆ. ಚಿಲ್ಲರೆ ರಾಜಕಾರಣ ಮಾಡುತ್ತಿರುವ ಬಿಜೆಪಿ ಲೂಟಿ ಹೊಡೆಯುತ್ತಿದೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ರಾಜಕಾರಣ ಜನಸೇವೆಯಾಗಬೇಕೆ ಹೊರತು ಹಣ ಗಳಿಸುವ ವ್ಯವಹಾರ ಆಗಬಾರದು. ದುಡ್ಡಿನಿಂದ ಮುಂಬರುವ ಚುನಾವಣೆ ಗೆಲ್ಲುವ ಕಸನು ಕಾಣುತ್ತಿರುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಯರಡ್ಡಿ ಭವಿಷ್ಯ ನುಡಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಕರಿಬಸಪ್ಪ ನಿಡಗುಂದಿ, ರಾಜಶೇಖರ ನಿಂಗೋಜಿ, ರಾಮಣ್ಣ ಸಾಲಬಾವಿ, ಹನುಮಂತಗೌಡ ಚಂಡೂರ, ಕಲ್ಲಪ್ಪ ಕವಳಕೇರಿ, ಕಲ್ಲಿನಾಥಯ್ಯ ಜಾರಗಡ್ಡಿಮಠ, ಅಲ್ಲಾಸಾಬ್ ದಮ್ಮೂರ, ಮಂಜಣ್ಣ ಕಡೆಮನಿ, ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಬಸವರಾಜ ಕುಡಗುಂಟಿ, ಈಶ್ವರ ಅಟಮಾಳಗಿ, ರಾಮಪ್ಪ ಪೂಜಾರ, ಪಾರವ್ವ ರಾಂಪೂರ, ಕನಕವ್ವ ಬಂಗಾಳಿಗಿಡದ, ಮಲ್ಲು ಜಕ್ಕಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts