More

    ಕಾಮಗಾರಿಗಳಿಗೆ ಜನರು ಭೂಮಿ ನೀಡಲಿ

    ಯಲಬುರ್ಗಾ: ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊರತೆ ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಜನ ಸಹಕಾರ ನೀಡುವುದರ ಜತೆಗೆ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ನೀಡಲು ಮುಂದಾಗಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಮನವಿ ಮಾಡಿದರು.
    ತಾಲೂಕಿನ ಬಂಡಿಹಾಳ, ಹಿರೇಮ್ಯಾಗೇರಿ, ಸಂಕನೂರು, ತುಮ್ಮರಗುದ್ದಿ, ಬಂಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಸೋಮವಾರ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದರು.

    ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊರತೆ ಇಲ್ಲ

    ಕ್ಷೇತ್ರಕ್ಕೆ ನೂತನವಾಗಿ 8 ಪ್ರೌಢಗಳ ನಿರ್ಮಾಣಕ್ಕೆ ತಲಾ 2.50 ಕೋಟಿ ರೂ. ಹಾಗೂ 15 ನೂತನ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ತಲಾ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಾರ್ಚ್ ತಿಂಗಳೊಳಗೆ ಟೆಂಡರ್ ಪ್ರಕ್ರಿಯ ಪೂರ್ಣಗೊಳ್ಳಲಿದೆ. ಒಟ್ಟು 31 ದೊಡ್ಡಮಟ್ಟದ ಕಾಮಗಾರಿಗಳು ಮಂಜೂರಾಗಿದ್ದು, ನಿರ್ಮಾಣಕ್ಕೆ ಭೂಮಿ ಅವಶ್ಯವಿದೆ ಎಂದರು.

    ಇದನ್ನೂ ಓದಿ: ಎಲ್ಲೆಂದರೆ ಹಸಿರು ಧ್ವಜ ಹಾರಾಡುತ್ತಿದೆ, ತೆರವು ಮಾಡುವ ಕ್ರಮ ಮಾಡ್ತೀರಾ?; ಸಿಎಂಗೆ ಪ್ರಶ್ನೆ

    ಮುಂದಿನ ವರ್ಷ ತಾಲೂಕಿಗೆ 5 ಹೊಸದಾಗಿ ಪ್ರೌಢಶಾಲೆ, 2 ಪದವಿ ಪೂರ್ವ ಕಾಲೇಜು ಮಂಜೂರಾಗಲಿವೆ. ಕ್ಷೇತ್ರದ ಎಲ್ಲ ಗ್ರಾಮೀಣ ಭಾಗದ ಒಳ ರಸ್ತೆಗಳ ನಿರ್ಮಿಸಲಾಗುವುದು. 70 ಕೋಟಿ ರೂ. ವೆಚ್ಚದಲ್ಲಿ ಅವಳಿ ತಾಲೂಕಿನ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. ಬಳಿಕ ಶಾಸಕರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕಾಮಗಾರಿ ಸ್ಥಳ ವೀಕ್ಷಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಪ್ರಮುಖರಾದ ವೀರನಗೌಡ ಬಳೂಟಗಿ, ಎಸ್.ಆರ್.ನವಲಿಹಿರೇಮಠ, ಕೆರಿಬಸಪ್ಪ ನಿಡಗುಂದಿ, ಎ.ಜಿ.ಭಾವಿಮನಿ, ಆನಂದ ಉಳ್ಳಾಗಡ್ಡಿ, ಈರಪ್ಪ ಕುಡಗುಂಟಿ, ಮಹಾಂತೇಶ ಗಾಣಗೇರ್, ಕಲ್ಲನಗೌಡ ಪಾಟೀಲ್, ಡಾ.ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಮಲ್ಲಿಕಾರ್ಜುನ ಜಕ್ಕಲಿ, ಸಿದ್ದು ಪಾಟೀಲ್, ಅಧಿಕಾರಿಗಳಾದ ಬಿ.ಮಲ್ಲಿಕಾರ್ಜುನ, ರಮೇಶ ಚಿಣಗಿ, ಹಸನ್‌ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts