More

    ಮನುಷ್ಯನಿಗೆ ಸಂಪತ್ತಿಗಿಂತ ಜ್ಞಾನ ಮುಖ್ಯ: ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಆಶೀರ್ವಚನ

    ಯಲಬುರ್ಗಾ: ಮನುಷ್ಯನಿಗೆ ಐಸಿರಿ, ಸಂಪತ್ತಿಗಿಂತ ಜ್ಞಾನ ಇದ್ದರೆ ಇಡೀ ಜಗತ್ತನ್ನು ಆಳುವ ಶಕ್ತಿ ಪಡೆಯಬಹುದು ಎಂದು ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶ್ರೀಗಳ 21ನೇ ವಾರ್ಷಿಕ ಪೀಠಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜ್ಞಾನ ಕೈಹಿಡಿದು ನಡೆಸುತ್ತದೆ. ಎಪಿಜೆ ಅಬ್ದುಲ್ ಕಲಾಂ, ಶಿವಕುಮಾರ ಸ್ವಾಮೀಜಿ, ಸಿದ್ಧೇಶ್ವರ ಶ್ರೀಗಳು ಆದಿಯಾಗಿ ಹೀಗೆ ಅನೇಕ ಮಹನೀಯರು ಜ್ಞಾನ ಸಂಪಾದಿಸಿ ಮಾದರಿಯಾಗಿದ್ದಾರೆ. ಬಸವಲಿಂಗೇಶ್ವರ ಶ್ರೀಗಳು ಕಾಯಕ ಯೋಗಿಗಳಾಗಿ ಸಮಾಜಮುಖಿ ಕಾರ್ಯಕ್ರಮ ಮಾಡುವ ಮೂಲಕ ಭಕ್ತರ ಪಾಲಿಗೆ ಆಶಾಕಿರಣವಾಗಿದ್ದಾರೆ ಎಂದರು.

    ಖೇಳಗಿ ವಿರಕ್ತಮಠದ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಮಠ-ಮಾನ್ಯಗಳು ತಮ್ಮದೇ ಸಾಮಾಜಿಕ ಕೊಡುಗೆ ನೀಡಿವೆ. ಶ್ರೀಗಳು ಶಿಕ್ಷಣ ಸಂಸ್ಥೆ, ಗೋಶಾಲೆ, ಯೋಗಕೇಂದ್ರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಬಸಲಿಂಗಪ್ಪ ಲಾಡಿ ಕುಟುಂಬ ಸದಸ್ಯರು, ಬಸವಲಿಂಗೇಶ್ವರ ಶ್ರೀಗಳಿಗೆ ತುಲಾಭಾರ ಸೇವೆಗೈದರು.

    ನವಲಗುಂದದ ಬಸವಲಿಂಗ ಸ್ವಾಮೀಜಿ, ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಗುಡ್ಡದ ಅನವೇರಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಇಟಗಿಯ ಭೂಕೈಲಾಸ ಮೇಲುಗದ್ದುಗೆಯ ಶ್ರೀ ಗುರುಶಾಂತವೀರ ಸ್ವಾಮೀಜಿ, ಗಣ್ಯರಾದ ಸಿದ್ದಲಿಂಗಪ್ಪ ಶ್ಯಾಗೋಟಿ, ಅಮರೇಗೌಡ ಪಾಟೀಲ್, ಶೇಖರಗೌಡ ಮಡಿವಾಳಗೌಡ್ರ, ಕಲ್ಲನಗೌಡ ಪೊ.ಪಾಟೀಲ್, ಷಣ್ಮುಖಪ್ಪ ಪಾಟೀಲ್, ಬಸವರಾಜ ಪಾಟೀಲ್, ಮಾರುತೆಪ್ಪ ಗೊಡಿನಾಳ, ಅಜಯಕುಮಾರ ಜಡಿಯವರ, ಸಂಗಮೇಶ ಕೊಪ್ಪದ, ವೀರಪ್ಪ ಅರಳಿ, ಬಸಲಿಂಗಪ್ಪ ಕೊತ್ತಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts