More

    ವಸತಿ ಯೋಜನೆಯಡಿ ಹಣ ವಸೂಲಿ ಮಾಡಿದ್ದಾಗಿ ಕೆಡಿಪಿ ಸಭೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್ ಆರೋಪ

    ಯಲಬುರ್ಗಾ: ವಸತಿ ಫಲಾನಾಭವಿಗಳಿಂದ ಹಣ ವಸೂಲಿ ಆರೋಪ, ಕುಡಿವ ನೀರಿನ ವ್ಯವಸ್ಥೆ ಹಾಗೂ ಕರೊನಾ ಕುರಿತಾಗಿ ಜಾಗೃತಿಗೆ ಸೂಚನೆ…

    ಇವು ಪಟ್ಟಣದ ತಾಪಂ ಕಚೇರಿ ಸಭಾ ಭವನದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೊಳಗಾದವು.

    ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವ ನೆಪದಲ್ಲಿ ಬೋದೂರು ಹಾಗೂ ಗುನ್ನಾಳ ಗ್ರಾಪಂ ಅಧಿಕಾರಿ ಮತ್ತು ಸದಸ್ಯರ ಸಮ್ಮುಖದಲ್ಲಿ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಎಲ್ಲರನ್ನೂ ತಬ್ಬಿಬ್ಬು ಮಾಡಿದರು.

    ಗುನ್ನಾಳ ಗ್ರಾಪಂ ವ್ಯಾಪ್ತಿಯಲ್ಲಿ 170 ಹಾಗೂ ಬೋದೂರು ಗ್ರಾಪಂ ವ್ಯಾಪ್ತಿಯ 90 ವಸತಿ ಯೋಜನೆಯಡಿ ಫಲಾನುಭವಿಗಳಿಂದ ಎರಡೂ ಗ್ರಾಪಂನಲ್ಲಿ ಹಣ ವಸೂಲಿ ಮಾಡಲಾಗಿದೆ. ಇಲ್ಲಿಯವರೆಗೂ ಫಲಾನುಭವಿಗಳಿಗೆ ಯಾವುದೇ ಮನೆ ಮಂಜೂರು ಆಗಿಲ್ಲ. ಇದರಿಂದ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ. ಅಕ್ರಮವಾಗಿ ಪಡೆದಿರುವ ಹಣವನ್ನು ವಾಪಸ್ಸು ನೀಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಡೆದಿರುವ ಪ್ರಕರಣ ಸುಳ್ಳಾದರೇ ನನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು

    ಆರೋಪಕ್ಕೆ ಪ್ರತಿಯಾಗಿ ಮಾತನಾಡಿದ ತಾಪಂ ಇಒ ಚವ್ಹಾಣ, ನಡೆದಿರುವ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ಧ ಉತ್ತರ ನೀಡಿದರು.

    ತಾಲೂಕಿನ ಯಾವ ಯಾವ ಹಳ್ಳಿಯಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ನೀರಿನ ಸಮಸ್ಯೆ ಇರುವ ಹಳ್ಳಿಗಳ ಹೆಸರು ಕೊಡಿ ಎಂದು ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಹಾಗೂ ಅಧ್ಯಕ್ಷೆ ಲಕ್ಷ್ಮೀ ಸಭೆಯಲ್ಲಿದ್ದ ಆರ್‌ಡಬ್ಲುಎಸ್ ಇಲಾಖೆಯ ಎಇಇ ಶಿವಕುಮಾರ್‌ಗೆ ಕೇಳಿದರು.

    ಹಳ್ಳಿಯಲ್ಲಿ ತಂಪು ಪಾನೀಯ ಮಾರಾಟ ಹೆಚ್ಚಾಗಿದೆ. ಅವುಗಳ ಉತ್ಪಾದನೆ ಹಾಗೂ ಕೊನೆಯ ದಿನಾಂಕವನ್ನು ಪರಿಶೀಲಿಸಿ ತಡೆಗಟ್ಟಬೇಕು ಎಂದು ತಾಪಂ ಅಧ್ಯಕ್ಷೆ ಲಕ್ಷ್ಮ್ಮೀ ದ್ಯಾಮಪ್ಪ ಗೌಡ್ರ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ ಬ್ಯಾಲಹುಣಸಿಗೆ ಸೂಚಿಸಿದರು.

    ಎಚ್ಚರಿಕೆಗೆ ಸೂಚನೆ: ಕರೊನಾ ವೈರಸ್ ಹರಡದಂತೆ ಆರೋಗ್ಯ ಇಲಾಖೆ ಕ್ರಿಯಾಶೀಲತೆ ಮೈಗೂಡಿಸಿಕೊಂಡು ಮುಂಜಾಗ್ರತೆ ಕ್ರಮ ಅನುಸರಿಸಬೇಕು ಎಂದು ತಾಪಂ ಅಧ್ಯಕ್ಷೆ ಲಕ್ಷ್ಮ್ಮೀ ದ್ಯಾಮಪ್ಪ ಗೌಡ್ರ, ಸಭೆಯಲ್ಲಿದ್ದ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ ಬ್ಯಾಲಹುಣಸಿಗೆ ಸೂಚಿಸಿದರು. ಆರೋಗ್ಯಾಧಿಕಾರಿ ಪ್ರತಿಕ್ರಿಯಿಸಿ, ವಿಯೆಟ್ನಾಂ ದೇಶಕ್ಕೆ ಪ್ರವಾಸಕ್ಕೆ ಹೋಗಿ ವಾಪಾಸು ಬಂದ ತಾಲೂಕಿನ ಹೊಸೂರು-ಸೋಂಪುರ ಗ್ರಾಮದ ಕನಕನಗೌಡ, ವೀರೇಶ ಹಾಗೂ ವೀರಯ್ಯ ಎಂಬುವರನ್ನು ತಪಾಸಣೆಗೊಳಪಡಿಸಿಲಾಗಿದೆ. ಜತೆಗೆ ಕರೊನಾ ಆರೋಗ್ಯ ಇಲಾಖೆಯಿಂದ ಪ್ರತಿ ಗ್ರಾಮದಲ್ಲಿ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ವಿದೇಶದಿಂದ ಬಂದವರು ಹಾಗೂ ಹೋದವರ ಮೇಲೆ ನಿಗಾ ಇರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

    ಕುಕನೂರು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ್, ಅಧಿಕಾರಿಗಳಾದ ಗುಂಗಾಡಿ ಶರಣಪ್ಪ, ಎಫ್.ಎಂ.ಕಳ್ಳಿ, ಹೇಮಂತರಾಜ್, ಶರಣಮ್ಮ ಕಾರನೂರು, ಮಲ್ಲಿಕಾರ್ಜುನ ಬೆಲೇರಿ, ರಮೇಶ ಚಿಣಿಗಿ, ಮೌಲಾಸಾಬ್, ಅಂದಪ್ಪ ಕುರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts