More

    ಹೋಂ ಐಸೋಲೇಷನ್‌ಗೆ ಹಠ ಬೇಡ; ಶಾಸಕ ಹಾಲಪ್ಪ ಆಚಾರ್ ಸಲಹೆ

    ಯಲಬುರ್ಗಾ: ಸೋಂಕಿತರು ಹೋಂ ಐಸೋಲೇಷನ್‌ಗೆ ಹಠ ಮಾಡದೆ, ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದು ಗುಣವಾಗಬೇಕೆಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

    ಪಟ್ಟಣದ ಸಂಗನಹಾಳ ರಸ್ತೆಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಶುದ್ಧ ಕುಡಿವ ನೀರು ಪೂರೈಕೆಗೆ ಚಾಲನೆ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿದರು. ಯಲಬುರ್ಗಾ, ಬೇವೂರು, ಹೊಸಳ್ಳಿ, ತಳಕಲ್, ಮಂಗಳೂರು ಹಾಗೂ ಕುಕನೂರಿನ ವಸತಿ ಶಾಲೆಗಳಲ್ಲಿ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಗ್ರಾಮ ಮಟ್ಟದ ಕಾರ್ಯಪಡೆಯವರು ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆತರುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದರು.

    ಬೇವೂರು ಕೋವಿಡ್ ಕೇರ್ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲ. ಕುಡಿವ ನೀರು ಹಾಗೂ ಫ್ಯಾನ್ ವ್ಯವಸ್ಥೆ ಇಲ್ಲ. ಸೊಳ್ಳೆ ಕಾಟ ಹೆಚ್ಚಾಗಿದೆ. ನೋಡಲ್ ಅಧಿಕಾರಿ ಹಾಗೂ ವೈದ್ಯರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸೋಂಕಿತರು ಹೇಳಿದರು. ಈ ಕುರಿತು ಶಾಸಕ ಹಾಲಪ್ಪ ಆಚಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇಂತಹ ದೂರುಗಳು ಮರುಕಳಿಸಿದರೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ತಹಸೀಲ್ದಾರ್ ಶ್ರೀಶೈಲ ತಳವಾರ್, ತಾಪಂ ಇಒ ಜಯರಾಮ್ ಚವ್ಹಾಣ್, ಟಿಎಚ್‌ಒ ಮಂಜುನಾಥ ಬ್ಯಾಲಹುಣಸಿ, ಸಣ್ಣ ನೀರಾವರಿ ಇಲಾಖೆಯ ಎಇಗಳಾದ ಪ್ರಕಾಶಗೌಡ ಪಾಟೀಲ್, ಕಿಶೋರ, ಸಿಪಿಐ ಎಂ.ನಾಗರಡ್ಡಿ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಸುಧಾಕರ ದೇಸಾಯಿ, ವೀರಭದ್ರಪ್ಪ ಅವಾರಿ, ಶರಣಪ್ಪ ಓಜನಹಳ್ಳಿ, ಶಂಕರಗೌಡ ಟಣಕನಕಲ್, ದೇವೇಂದ್ರಪ್ಪ ತಳವಾರ್, ಪಿಡಿಒ ಗೊಣೆಪ್ಪ ಜರ್ಲಿ, ಗ್ರಾಪಂ ಸದಸ್ಯರು ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts