More

    ನಾಲ್ಕೈದು ತಿಂಗಳಲ್ಲಿ ಕ್ಷೇತ್ರದ ಕೆರೆಗಳಿಗೆ ಕೃಷ್ಣೆ ನೀರು, ಸಚಿವ ಹಾಲಪ್ಪ ಆಚಾರ್ ಆಶಯ

    ಯಲಬುರ್ಗಾ: ಕ್ಷೇತ್ರದ ರೈತರ ಬಗ್ಗೆ ಕಾಳಜಿ ಇಲ್ಲದ ಈ ಹಿಂದಿನ ಕಾಂಗ್ರೆಸ್ ಸರ್ಕಾರ, ಕೊಪ್ಪಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒಂದು ರೂ. ಅನುದಾನ ನೀಡಲಿಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

    ತಾಲೂಕಿನ ಮಕಲಸಮುದ್ರ ಮತ್ತು ಮುರಡಿ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸಿ ಮಾತನಾಡಿ, ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮಳೆ ಆಗಿದ್ದು, ಕೆರೆಕಟ್ಟೆಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಬಂದಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಕೆರೆಗಳ ಸಂರಕ್ಷಣೆಗೆ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಎಂದರು.

    ಇನ್ನೂ ನಾಲ್ಕೈದು ತಿಂಗಳಲ್ಲಿ ಕ್ಷೇತ್ರದ ಕೆರೆಗಳಿಗೆ ಕೃಷ್ಣೆ ನೀರು ಹರಿಯಲಿದೆ. ಯೋಜನೆ ಬಗ್ಗೆ ಲಘುವಾಗಿ ಮಾತನಾಡಿದ ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡುವ ಕಾಲ ಸನ್ನಿಹಿತವಾಗಿದೆ. ಶಿಕ್ಷಣ, ನೀರಾವರಿ ಮೂಲಕ ರೈತರ ಬದುಕು ಹಸನಾಗುಸುವುದೇ ನನ್ನ ಸಂಕಲ್ಪ ಎಂದರು. ಮುರಡಿ ಕೆರೆ ಪಕ್ಕದ ರೈತರು ನಿತ್ಯ ಜಮೀನಲ್ಲಿ ಕೃಷಿ ಚಟುವಟಿಕೆಗೆ ತೆರಳಲು ಸಣ್ಣದೊಂದು ಸೇತುವೆ ನಿರ್ಮಿಸುವಂತೆ ಸಚಿವರಿಗೆ ಒತ್ತಾಯಿಸಿದರು. ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ಭರವಸೆ ನೀಡಿದರು.

    ಗ್ರಾಪಂ ಅಧ್ಯಕ್ಷರಾದ ಕೆಂಚವ್ವ ಹಿರೇಮನಿ, ಶರಣವ್ವ ಗೊಂದಿ, ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ, ತಾಪಂ ಇಒ ಸಂತೋಷ ಪಾಟೀಲ್, ಸಣ್ಣ ನೀರಾವರಿ ಇಂಜಿನೀಯರ್‌ಗಳಾದ ಪ್ರಕಾಶ ಪಾಟೀಲ್, ಮುರಳೀಧರ ಪಾಟೀಲ್, ಪ್ರಮುಖರಾದ ಬಸಲಿಂಗಪ್ಪ ಭೂತೆ, ಸುಧಾಕರ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಬಸನಗೌಡ ತೊಂಡಿಹಾಳ, ಶಿವನಗೌಡ ಬನ್ನಪ್ಪಗೌಡ್ರ, ಅಯ್ಯನಗೌಡ ಕೆಂಚಮ್ಮನವರ್, ಶಿವಾನಂದ ಬಣಕಾರ, ಶಂಕರಗೌಡ ಟಣಕನಕಲ್, ವೀರಭದ್ರಪ್ಪ ಆವಾರಿ, ಈರಪ್ಪ ದಸ್ತಾನಿ, ರವಿ ಕಲಬುರ್ಗಿ, ಕಲ್ಲಪ್ಪ ತೊಂಡಿಹಾಳ, ಉಮೇಶ ವೆಡ್ಡರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts