More

    ಕುಡಿವ ನೀರು ನಿರ್ವಹಣೆಯಲ್ಲಿ ನಿರ್ಲಕ್ಷ ಬೇಡ

    ತುರ್ತು ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಆಚಾರ್ ತಾಕೀತು

    ಯಲಬುರ್ಗಾ: ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿ ಕುಡಿವ ನೀರಿನ ಅಭಾವ ಉಂಟಾಗದಂತೆ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಅನುಸರಿಸಬೇಕು ಎಂದು ಶಾಸಕ ಹಾಲಪ್ಪ ಆಚಾರ್ ತಾಕೀತು ಮಾಡಿದರು.

    ಪಟ್ಟಣದ ತಹಸಿಲ್ ಕಚೇರಿಯ ಕಂದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕುಡಿವ ನೀರು ನಿರ್ವಹಣೆ ಹಾಗೂ ಕರೊನಾ ತಡೆಗಟ್ಟುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕುಕನೂರು ಹಾಗೂ ಯಲಬುರ್ಗಾ ತಾಲೂಕಿನ 144 ಗ್ರಾಮಗಳ ಪೈಕಿ ಈಗಾಗಲೇ ಹಲವು ಗ್ರಾಮಸ್ಥರು ಕುಡಿವ ನೀರು ಸಮಸ್ಯೆ ಎದುರಿಸುತ್ತಿದ್ದಾರೆ. 37 ಗ್ರಾಪಂ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಪಿಡಿಒ ಮತ್ತು ಕಾರ್ಯದರ್ಶಿಗಳು ಸಮರ್ಪಕ ಕುಡಿವ ನೀರು ನಿರ್ವಹಣೆಗೆ ಮುಂದಾಗಬೇಕು. ನೀರಿನ ಸಮಸ್ಯೆ ಮರೆತರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಈಗಾಗಲೇ ಕ್ಷೇತ್ರದಲ್ಲಿ ಕರೊನಾ ಜಾಗೃತಿ ನಿಮಿತ್ತ ಭೇಟಿ ನೀಡಿ ಸಾರ್ವಜನಿಕರಿಗೆ ವೈರಸ್‌ನಿಂದ ಎಚ್ಚರದಿಂದ ಇರಲು ಜನ ಜಾಗೃತಿ ಮೂಡಿಸಲಾಗಿದೆ. ಈ ವೇಳೆ ನನ್ನ ಬಳಿ ನೀರಿನ ಸಮಸ್ಯೆ ಬಗ್ಗೆ ಜನರು ಸಾಕಷ್ಟು ಮನವಿ ಮಾಡಿಕೊಂಡಿದ್ದಾರೆ. ನೀರಿನ ಸಮಸ್ಯೆ ಬಗೆಹರಿಯಬೇಕು. ಕೋವಿಡ್-19 ಬಗ್ಗೆ ಕೂಡ ಹೆಚ್ಚಿನ ಅರಿವು ಮೂಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಮಾಸ್ಕ್ ವಿತರಿಸಿ: ಕೋವಿಡ್-19 ತಡೆಗೆ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳನ್ನು ವಿತರಿಸಬೇಕೆಂದು ಟಿಎಚ್‌ಒ ಮಂಜುನಾಥಗೆ ತಿಳಿಸಿದರು. ತಹಸೀಲ್ದಾರರಾದ ಶ್ರೀಶೈಲ ತಳವಾರ್, ಕಿರಣಕುಮಾರ ಕುಲಕರ್ಣಿ, ತಾಪಂ ಇಒ ಡಾ.ಜಯರಾಮ ಚವಾಣ್, ಸಿಪಿಐ ಎಂ.ನಾಗರಡ್ಡಿ, ಜಿಪಂ ಎಇಇ ಶಿವಕುಮಾರ, ಕೆಇಬಿ ಎಇಇ ಗೋಪಾಲ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts