More

    ಜಾತಿ, ಲಿಂಗ ತಾರತಮ್ಯ ತೊಲಗಲಿ: ನ್ಯಾಯಾಧೀಶ ವಿಜಯಕುಮಾರ ಕನ್ನೂರು ಆಶಯ

    ಯಲಬುರ್ಗಾ: ಜಾತಿ, ಲಿಂಗ ತಾರತಮ್ಯ, ಅಸ್ಪಶ್ಯತೆ, ಮೇಲು ಕೀಳು ಎಂಬ ಮನೋಭಾವ ಧಿಕ್ಕರಿಸಿ ಪ್ರತಿಯೊಬ್ಬರಲ್ಲಿ ನಾವು ನಮ್ಮವರೆಂಬ ಭಾವನೆ ಮೂಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರು ಹೇಳಿದರು.

    ತರಲಕಟ್ಟಿ ಗ್ರಾಮದಲ್ಲಿ ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ, ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಎಲ್ಲರೂ ಶಾಂತಿ, ನೆಮ್ಮದಿ ಜೀವನ ನಡೆಸಲು ಅಸಮಾನತೆ ತೊಲಗಬೇಕು. ಜನಸಾಮಾನ್ಯರು ಕಾನೂನಿನ ಸಾಮಾನ್ಯ ಜ್ಞಾನ ಪಡೆಯಬೇಕು. ಎಲ್ಲರೂ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದರು.

    ಸಿವಿಲ್ ನ್ಯಾಯಧೀಶೆ ಆಯಿಷಾಬಿ ಮಜೀದ್, ತಹಸೀಲ್ದಾರ್ ವಿಠ್ಠಲ ಚೌಗಲೆ, ವಕೀಲ ಮಲ್ಲನಗೌಡ ಪಾಟೀಲ್, ಪಿಡಿಒ ಅಬ್ದುಲ್ ಗಫರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶರಣಮ್ಮ ಗೊಂದಿ, ಸದಸ್ಯರಾದ ಪ್ರಕಾಶ ಮಾಲಿಪಾಟೀಲ್, ಬಸಪ್ಪ ಕೋಳೂರು, ಹನುಮೇಶ ವಡ್ಡರ್, ಸಮಾಜ ಕಲ್ಯಾಣಾಧಿಕಾರಿ ವಿ.ಕೆ.ಬಡಿಗೇರ್, ಮುಖ್ಯಶಿಕ್ಷಕ ಸರಸ್ವತಿ ಅಬ್ಬಿಗೇರಿ, ಪ್ರಮುಖರಾದ ಪ್ರಭುಗೌಡ ಪೊ.ಪಾಟೀಲ್, ತೋಟಪ್ಪ ಬೇವೂರು, ಯಮನಪ್ಪ ಗೊಂದಿ, ವೀರೇಶ ನಾಯಕ, ಕರಿಯಪ್ಪ ಶಿಲ್ಪಿ, ವೀರನಗೌಡ ಪೊ.ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts