More

    ಅಕ್ಕಮಹಾದೇವಿ ಆದರ್ಶ ಅಳವಡಿಸಿಕೊಳ್ಳಿ

    ಯಲಬುರ್ಗಾ: ಕನ್ನಡದ ಮೊದಲ ಕವಯಿತ್ರಿ, ಶರಣೆ ಅಕ್ಕಮಹಾದೇವಿ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಪಿಎಸ್‌ಐ ಬಸನಗೌಡ ಪಿ.ಪಾಟೀಲ್ ಹೇಳಿದರು.

    ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಗುರುವಾರ ಹಮ್ಮಿಕೊಂಡಿದ್ದ 77ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಮತ್ತು ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ವಿಭಕ್ತ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಮೂಲಕ ಮಾನವೀಯ ಸಂಬಂಧಗಳು ನಶಿಸುತ್ತಿವೆ. ಆದ್ದರಿಂದ ಮನೆಯಲ್ಲಿ ಮಕ್ಕಳಿಗೆ ಧಾರ್ಮಿಕ ಹಾಗೂ ನೈತಿಕ ಸಂಸ್ಕಾರ ನೀಡುವ ಅವಶ್ಯಕತೆ ಇದೆ ಎಂದರು.

    ಮುಖಂಡ ಅಮರೇಶಪ್ಪ ಗಡಿಹಳ್ಳಿ ಮಾತನಾಡಿದರು. ಗ್ರಾಮದಲ್ಲಿ ಕೈಗೊಂಡಿರುವ ಅನುಭವ ಮಂಟಪದ ಕಾಮಗಾರಿಗೆ 51 ಸಾವಿರ ರೂ.ದೇಣಿಗೆ ನೀಡಿದ ಚನ್ನಮ್ಮ ನಿಜಲಿಂಗಪ್ಪ ಮಂತ್ರಿ, ಯಮನೂರಪ್ಪ ಮೇಟಿ, ಫಕೀರಪ್ಪ ಮಂತ್ರಿಯನ್ನು ಸನ್ಮಾನಿಸಲಾಯಿತು.

    ಪ್ರಮುಖರಾದ ಶರಣಪ್ಪ ಹೊಸಳ್ಳಿ, ಯಮನಮ್ಮ ಗೌಡ್ರ, ರೇಣುಕಪ್ಪ ಮಂತ್ರಿ, ಬಸವರಾಜ ಹೂಗಾರ, ನಾಗನಗೌಡ ಜಾಲಿಹಾಳ, ಹನುಮಗೌಡ ಬಳ್ಳಾರಿ, ಗಿರಿಮಲ್ಲಪ್ಪ ಪರಂಗಿ, ಗುರುರಾಜ ಕೋರಿ, ಯಲ್ಲಪ್ಪ ವನಜಭಾವಿ, ಲಿಂಗನಗೌಡ ದಳಪತಿ, ಶಿವಪುತ್ರಪ್ಪ ಉಚ್ಚಲಕುಂಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts