More

    ಎಂಟು ತಾಸಿನಲ್ಲಿ ಆರು ಎತ್ತಿನ ಕೃಷಿ ಸಾಮಾಗ್ರಿ ಸಿದ್ಧಪಡಿಸಿದ ಯುವ ಬಡಿಗ; ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿದ ಗ್ರಾಮಸ್ಥರು

    ಯಲಬುರ್ಗಾ: ತಾಲೂಕಿನ ಬೋದೂರು ಗ್ರಾಮದ ಬಡಿಗನೊಬ್ಬ ಎಂಟು ತಾಸಿನಲ್ಲಿ ಕೃಷಿ ಸಲಕರಣೆಗಳನ್ನು ತಯಾರಿಸುವ ಮೂಲಕ ಸಾಧನೆ ಮಾಡಿದ್ದಾನೆ.

    ಮಾನಪ್ಪ (ಮುತ್ತಣ್ಣ) ಕಾಳಪ್ಪ ಕಮ್ಮಾರ ಎಂಬ 26 ವಷರ್ದ ಯುವ ಬಡಿಗ, ಯಾವುದೇ ಯಂತ್ರೋಪಕರಣ ಬಳಸದೆ ಕೇವಲ ಎಂಟು ತಾಸಿನಲ್ಲಿ ಒಂದು ಕೂರಿಗೆ, ಎರಡು ಪಳಿ (ಡುಂಪಳಿ), ಮೂರು ನೊಗ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಅಲ್ಲದೇ ಒಂದು ಎಕರೆ ಹೊಲದಲ್ಲಿ ಸಜ್ಜೆ ಬೀಜ ಬಿತ್ತಿದ್ದಾರೆ. ಈ ಆರೆತ್ತಿನ ಜ್ವಾಣಿ (ಕೃಷಿ ಸಲಕರಣೆ) ಮಾಡಲು ಭಾನುವಾರ ಬೆಳಗ್ಗೆ 7ರಿಂದ ಸಂಜೆ ಮಧ್ಯಾಹ್ನ 3 ಗಂಟೆವರೆಗೆ ಸಮಯ ತೆಗೆದುಕೊಂಡಿದ್ದಾರೆ. ಯುವ ಬಡಿಗನ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ, ದೇಣಿಗೆ ಸಂಗ್ರಹಿಸಿ ಹೊಸಬಟ್ಟೆ, ಬೆಳ್ಳಿ ಕಡಗ ತೊಡಿಸಿ ಸನ್ಮಾನ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts