More

    ಶಾರೀರಿಕ ಬದಲಾವಣೆ ಅರಿವಿರಲಿ

    ಯಲಬುರ್ಗಾ: ಹದಿಹರೆಯದವರು ದೈಹಿಕ ಬೆಳವಣಿಗೆಗಾಗಿ ಸಮತೋಲನ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಮಕ್ಕಳ ತಜ್ಞ ಡಾ.ಮಂಜುನಾಥ ಹೇಳಿದರು.

    ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಯೋಜನೆಯಡಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನೇಹಿ ಗುಂಪಿನ ಶಿಕ್ಷಕರ (ಮಕ್ಕಳ) ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹದಿಹರೆಯದಲ್ಲಿ ಶಾರೀರಿಕ ಬದಲಾವಣೆ, ಮನೋಸಾಮಾಜಿಕ ಗೊಂದಲಗಳ ಬಗ್ಗೆ ಆಪ್ತ ಸಮಾಲೋಚಕರಿಂದ ಮಾಹಿತಿ ಪಡೆಯಬೇಕು ಎಂದರು.
    ಆಪ್ತಸಮಾಲೋಚಕ ಅಮರೇಶ ಅಂಗಡಿ ಮಾತನಾಡಿ, ವೈದ್ಯಕೀಯ ಸೇವೆ, ಸಮಾಲೋಚನೆ, ಕಾಯಿಲೆ ಗುಣಪಡಿಸುವ ಸ್ನೇಹಾ ಕ್ಲಿನಿಕ್‌ಗಳು ಕೆಲಸ ಮಾಡುತ್ತಿವೆ. ಸ್ನೇಹ ಗುಂಪಿನ ಶಿಕ್ಷಕರು (ಮಕ್ಕಳು) ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಹದಿಹರೆಯದವರ ಜತೆ ಸೇತುವೆಯಾಗಿ ಸೇವೆ ಸಲ್ಲಿಸಬೇಕಿದೆ ಎಂದರು.

    ಗ್ರಾಪಂ ಅಧ್ಯಕ್ಷ ಶರಣಪ್ಪ ಕುರಿ, ಸದಸ್ಯೆ ಹುಚ್ಚಮ್ಮ ಉಪ್ಪಾರ, ದೈಹಿಕ ಶಿಕ್ಷಕ ಸುರೇಶ, ಸಿಎಚ್‌ಒ ಗಾಯತ್ರಿ, ಎಚ್‌ಐಒ ವೀರಭದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts