More

    ಯಕ್ಷಗಾನ ಪದ್ಯದಲ್ಲಿ ರಾಷ್ಟ್ರಪತಿ ಮುರ್ಮು ಹೆಸರು, ಜಾಲತಾಣದಲ್ಲಿ ಚಿಂತನಾ ಹಾಡುಗಾರಿಕೆ ವೈರಲ್

    ಕುಂದಾಪುರ: ರಾಷ್ಟ್ರಪತಿ ಸ್ಥಾನಕ್ಕೆ ದ್ರೌಪದಿ ಮುರ್ಮು ಆಯ್ಕೆ ಯಕ್ಷಗಾನ ಕ್ಷೇತ್ರದಲ್ಲೂ ಸಂಚಲನ ಮೂಡಿಸಿದೆ. ಮುರ್ಮು ಅವರನ್ನು ಸ್ವಾಗತಿಸುತ್ತ, ಅವರಿಗೆ ಬೆಂಬಲ ನೀಡುವ ಯಕ್ಷಗಾನ ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ. ದ್ರೌಪದಿ ಮರ್ಮ ಅವರ ಮಾರ್ಗದರ್ಶನದಲ್ಲಿ ಭಾರತ ಮಹಾಭಾರತವಾಗಲಿ ಎಂಬುದೇ ಈ ಹಾಡಿನ ತಾತ್ಪರ್ಯ.

    ಸಾಹಿತಿ ಅರವಿಂದ ಚಿಪ್ಲೂಣ್ಕರ್ ಸಾಹಿತ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಲ್ಕೋಡು ನಿವಾಸಿ, ಯಕ್ಷಗಾನ ಯುವ ಭಾಗವತರಾದ ಚಿಂತನಾ ಹೆಗಡೆ ರಾಗ ಸಂಯೋಜಿಸಿ ಯಕ್ಷಗಾನ ಶೈಲಿಯಲ್ಲಿ ಹಾಡಿರುವ ಪದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರ ಮುಚ್ಚುಗೆಗೂ ಈ ಹಾಡು ಪಾತ್ರವಾಗಿದೆ.

    ಯಕ್ಷಗಾನ ಪದ್ಯದಲ್ಲಿ ರಾಷ್ಟ್ರಪತಿ ಮುರ್ಮು ಹೆಸರು, ಜಾಲತಾಣದಲ್ಲಿ ಚಿಂತನಾ ಹಾಡುಗಾರಿಕೆ ವೈರಲ್

    ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಮಾಳ್ಕೋಡಿನ ಯಕ್ಷಗಾನ ಕಲಾವಿದ ಉದಯ ಹೆಗಡೆ ಅವರ ಇಬ್ಬರು ಮಕ್ಕಳ ಪೈಕಿ ಚಿಂತನಾ ಎರಡನೆಯವಳು. ಕವಲಕ್ಕಿ ಸುಬ್ರಹ್ಮಣ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ತಂದೆ ಬಯಲಾಟ ಮೇಳದಲ್ಲಿ ತಿರುಗಾಟ ಮಾಡಿದ್ದಾರೆ. ಅವರ ಸಾಂಗತ್ಯವೇ ಈಕೆ ಯಕ್ಷಗಾನಕ್ಕೆ ಕ್ಷೇತ್ರಕ್ಕೆ ಬರಲು ಪ್ರೇರಣೆ. ತಂದೆಯೇ ಈಕೆಯ ಗುರು. ಡೇರೆ ಮೇಳಗಳಲ್ಲಿ ಅತಿಥಿ ಕಲಾವಿದೆಯಾಗಿ ಪಾಲ್ಗೊಂಡಿರುವ ಚಿಂತನಾ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಿದ್ದಾರೆ.

    ಕೊಡಗಲ್ಲಿ 2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶದಲ್ಲೇ ಮತ್ತೆ ಭೂಕುಸಿತ-ಜಲಸ್ಫೋಟ; 18 ಮನೆಯವರ ತೆರವು…

    ಚಿಲ್ರೆ ವಿಷ್ಯಕ್ಕೆ ಕೆಎಸ್​ಆರ್​ಟಿಸಿ ಸಿಬ್ಬಂದಿ-ಪ್ರಯಾಣಿಕರ ಹೊಡೆದಾಟ: ಬಸ್​ ಸಂಚಾರವೇ ಸ್ಥಗಿತ, ಜನರ ಪರದಾಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts