More

    ನಗರದಲ್ಲಿ “ರಂಗನಾಯಕಿ’ ಯಕ್ಷಗಾನ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜು.20 ರಂದು ಸಂಜೆ 5ಕ್ಕೆ ಹೋಟೆಲ್​ ಮಾಲೀಕರ ಸಂ ಮತ್ತು ರೋಟರಿ ಕ್ಲಬ್​ ಗದಗ ಸೆಂಟ್ರಲ್​ ಸಂಯುಕ್ತ ಆಶ್ರಯದಲ್ಲಿ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮೇಳದಿಂದ “ರಂಗನಾಯಕಿ’ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ ಎಂದು ಹೋಟೆಲ್​ ಮಾಲೀಕರ ಅಧ್ಯಕ್ಷ ಎಚ್​. ವಿಶ್ವನಾಥ ಶೆಟ್ಟಿ ಹೇಳಿದರು.
    ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಯಕ್ಷಗಾನ ಹಮ್ಮಿಕೊಳ್ಳುತ್ತ ಬರಲಾಗಿದೆ. ಕಲಾಸೇವೆ, ಮನೋರಂಜನೆ, ಗ್ರಾಮೀಣ ಕಲೆಗಳು ಉಳಿಯಬೇಕು ಮತ್ತು ಬೆಳೆಯಬೇಕು. ಮುಂದಿನ ಪೀಳಿಗೆಗಾಗಿ ಇದು ಮುಂದುವರಿಯಬೇಕು ಎಂಬ ಉದ್ದೇಶದಿಂದ ಯಕ್ಷಗಾನ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಆಗಮಿಸಿ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
    ಪಿ.ವಿ. ಹೆಗಡೆ ಮಾತನಾಡಿ, ಸಾಮಾನ್ಯವಾಗಿ ಬೇಸಿಗೆ ಕಳೆದು ಮಳೆಗಾಲ ಆರಂಭವಾಗುತ್ತಿರುವ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರು ರಾಜ್ಯ ಸೇರಿ ಮಹಾರಾಷ್ಟ್ರದ ಮುಂಬಯಿ, ಪುಣೆ ಸೇರಿ ಅನೇಕ ಕಡೆಗಳಲ್ಲಿ ಪ್ರವಾಸ ಮಾಡುತ್ತ ಯಕ್ಷಗಾನ ಪ್ರದರ್ಶನ ನೀಡುತ್ತ ಯಕ್ಷಗಾನವನ್ನು ಪರಿಚಯಿಸುವುದರ ಜೊತೆಗೆ ಉಳಿಸಿ ಬೆಳೆಸುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಪ್ರಸಿದ್ಧ ಭಾಗವತರಾದ ರಾವೇಂದ್ರ ಮಯ್ಯ ಅವರ ಸಾರಥ್ಯದಲ್ಲಿ ರಂಗನಾಯಕಿ ಪ್ರಸಂಗದ ಯಕ್ಷಗಾನ ನಡೆಯಲಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ವಿ. ರಾಜೀವ್​ ಶೆಟ್ಟಿ, ಸುಧಾಕರ ಶೆಟ್ಟಿ, ಜಯಪಾಲ್​ ಶೆಟ್ಟಿ, ರೋಟರಿ ಗದಗ ಸೆಂಟ್ರಲ್​ ಅಧ್ಯಕ್ಷ ವಿಜಯಕುಮಾರ ಹಿರೇಮಠ, ಸಂತೋಷ ತೋಟಗಂಟಿಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts