More

    ಅ.1ರಂದು ಅನಿಲಾನಲ ಸಂಯೋಗ ಯಕ್ಷಗಾನ, ಹೊಸ ಪ್ರಯೋಗ ಫೇಸ್‌ಬುಕ್‌ನಲ್ಲಿ ಪ್ರಸಾರ

    ಕುಂದಾಪುರ: ಯಕ್ಷಶ್ರೀ ಸಾಗರ ವಿಜಯ ಸೇವಾ ಟ್ರಸ್ಟ್ ಸಂಯೋಜನೆಯಲ್ಲಿ ಯಕ್ಷಗಾನದ ಹೊಸ ಪ್ರಯೋಗ ‘ಅನಿಲಾನಲ ಸಂಯೋಗ’ ಅ.1ರಂದು ಸಾಯಂಕಾಲ 6.30ರಿಂದ ಫೇಸ್‌ಬುಕ್ ಪೇಜ್‌ನಲ್ಲಿ ಹಾಗೂ ಅ.3ರಂದು ಸಾಯಂಕಾಲ ಧಾರೇಶ್ವರ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

    ಭೀಮ, ದ್ರೌಪದಿಯರ ಮಹಾಭಾರತ ಯಾನದ ಮೇಲೆ ಬೆಳಕು ಚೆಲ್ಲುವ ಹೊಸ ಪರಿಕಲ್ಪನೆಯಲ್ಲಿ ಪ್ರಸಂಗ ಮೂಡಿಬಂದಿದ್ದು, ಮೂರು ಭಾಗಗಳಲ್ಲಿ ಪ್ರಸಾರವಾಗಲಿದೆ. 1ನೇ ಭಾಗದಲ್ಲಿ ಭೀಮ, ದ್ರೌಪದಿ, ದೃಷ್ಟದ್ಯುಮ್ನ ಜನನ, ಮಯ ಮಂಟಪ(ರಾಜಸೂಯ ಯಾಗ), ದ್ಯೂತ ಪ್ರಕರಣ(ದ್ರೌಪದಿ ವಸ್ತ್ರಾಪಹಾರ), 2ನೇ ಭಾಗದಲ್ಲಿ ಕೀಚಕ ವಧೆ, ಶ್ರೀಕೃಷ್ಣ ಸಂಧಾನ, ದುಶ್ಶಾಸನ ವಧೆ, ಗದಾಯುದ್ಧ, ಸ್ವರ್ಗಾರೋಹಣ ಮೊದಲಾದ ಪ್ರಸಂಗಗಳು ಪ್ರಸಾರವಾಗಲಿವೆ.

    ಪರಿಕಲ್ಪನೆ ಡಾ.ಎಚ್.ಎಸ್.ಮೋಹನ್, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರದ್ದು. ಪ್ರಸಂಗ ಜೋಡಣೆ, ನಿರ್ವಹಣೆ ಮತ್ತು ನಿರ್ದೇಶನದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ ಪ್ರಧಾನ ಪಾತ್ರ. ಸಂಯೋಜನೆ ಕುಮಾರವ್ಯಾಸ, ಹೊಸ್ತೋಟ ಮಂಜುನಾಥ ಭಾಗವತರು, ವಿಷ್ಣು ಭಾಗವತರು, ಬ್ರಹ್ಮಾವರ ದೇವಿದಾಸ, ತಿಮ್ಮಣ್ಣ ಕವಿ ಅವರ ಪ್ರಸಂಗದ ಹಾಡುಗಳನ್ನು ಹಾಗೂ ಶ್ರೀಧರ ಡಿ.ಎಸ್. ಕಿನ್ನಿಗೋಳಿ, ಸ್ವತಃ ಧಾರೇಶ್ವರರೇ ಬರೆದ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಕಲಾವಿದ ಅಶೋಕ ಭಟ್ ಉಜಿರೆ ಪುರಾಣ ಪರಿಚಯ- ಸಹಕಾರ ನೀಡಿದ್ದು, ಉಮಾಕಾಂತ ಭಟ್ ಕೆರೆಕೈ ಸಿರ್ಸಿ ಸಲಹೆ ನೀಡಿದ್ದಾರೆ.

    ಕಲಾವಿದರಾಗಿ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಚಂದ್ರಕಾಂತ ಮೂಡುಬೆಳ್ಳೆ, ಶಂಕರ ಭಾಗವತರು, ಪ್ರಸನ್ನ ಹೆಗ್ಗಾರ್, ಮುಮ್ಮೇಳದಲ್ಲಿ ನೀಲ್ಕೋಡು ಶಂಕರ ಹೆಗಡೆ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಮಂಕಿ ಈಶ್ವರ ನಾಯ್ಕ, ಸಂಜಯ ಬೆಳೆಯೂರು, ಪ್ರಸನ್ನ ಶೆಟ್ಟಿಗಾರ್, ಗಣೇಶ ನಾಯ್ಕ ಮುಗ್ವಾ, ವಿನಯ ಭಟ್ ಬೇರೊಳ್ಳಿ, ಮಾರುತಿ ನಾಯ್ಕ ಬೈಲಗದ್ದೆ, ಗಣಪತಿ ಹೆಗಡೆ ತೋಟಿ, ನಾಗೇಶ ಕುಳಿಮನೆ, ಶ್ರೀಧರ ಭಟ್ ಕಾಸರಕೋಡು ಭಾಗವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts