More

    ನಿಸ್ವಾರ್ಥ ಸೇವೆಯಿಂದ ಯಕ್ಷಗಾನ ಕಲೆ ಉಳಿವು: ಕೃತಿ ಬಿಡುಗಡೆ ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್ ಹೆಗಡೆ ಕುಮಟಾ ಹೇಳಿಕೆ

    ಸುರತ್ಕಲ್: ಹಿರಿಯ ಕಲಾವಿದರ ನಿಸ್ವಾರ್ಥ ಸೇವೆಯಿಂದ ಬೆಳೆಯುತ್ತಿರುವ ಯಕ್ಷಗಾನವನ್ನು ಪೋಷಿಸುವ ಅಗತ್ಯವಿದ್ದು, ಯಕ್ಷಗಾನ ಸಮ್ಮೇಳನ, ಯಕ್ಷಗಾನ ವಿಶ್ವಕೋಶ, ಯಕ್ಷಗಾನ ವಸ್ತು ಸಂಗ್ರಹಾಲಯದಂತಹ ಯೋಜನೆಯನ್ನು ಯಕ್ಷಗಾನ ಅಕಾಡೆಮಿ ರೂಪಿಸಿದೆ. ಇದಕ್ಕೆ ಕಲಾಭಿಮಾನಿಗಳ ಸಹಕಾರ ಅಗತ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್ ಹೆಗಡೆ ಕುಮಟಾ ಹೇಳಿದರು.

    ಸುರತ್ಕಲ್ ಗೋವಿಂದದಾಸ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಅಕಾಡೆಮಿ ಪ್ರಕಟಿಸಿದ ಮೂರು ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಯಕ್ಷಗಾನ ಮಾತನ್ನು ಕಲಿಸುತ್ತದೆ. ಅಕ್ಷರ ಜ್ಞಾನ ಇಲ್ಲದವರು ನಿರರ್ಗಳವಾಗಿ ಅರ್ಥಗಾರಿಕೆ ಹೇಳುವಾಗ ಯಕ್ಷಗಾನ ಎಂತಹ ಮಾತುಗಾರರನ್ನು ಸೃಷ್ಟಿಸುತ್ತಾ ಬರುತ್ತಿದೆ ಎಂಬುದು ತಿಳಿದರೆ ಸೋಜಿಗವಾಗುತ್ತದೆ ಎಂದರು.

    ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಕೃತಿ ಬಿಡುಗಡೆಗೊಳಿಸಿ, ಯಕ್ಷಗಾನದ ಬೆಳವಣಿಗೆಗೆ ಮಂಗಳೂರು ವಿವಿ ಹೆಚ್ಚು ಮಹತ್ವ ನೀಡಿದೆ ಎಂದರು.
    ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಲಿಕೆಯ ಜತೆಜತೆಗೆ ಯಕ್ಷಗಾನದ ಬಗ್ಗೆಯೂ ಆಸಕ್ತಿ ತಳೆದು ಹವ್ಯಾಸವಾಗಿ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದರು.

    ಕಲಾವಿದ ಪೊಳಲಿ ನಿತ್ಯಾನಂದ ಕಾರಂತ, ಡಾ.ಸುಧಾರಾಣಿ, ಅರ್ಥದಾರಿ ಸದಾಶಿವ ಆಳ್ವ ತಲಪಾಡಿ ಕ್ರಮವಾಗಿ ತುಳು ಪ್ರಸಂಗ, ಪಾರ್ತಿಸುಬ್ಬ-ಬದುಕು ಬರಹ, ಯಕ್ಷಗಾನ ಸಂವಾದ ಭೂಮಿಕೆ ಕುರಿತಾಗಿ ಕೃತಿ ಪರಿಚಯ ಮಾಡಿಸಿಕೊಟ್ಟರು.

    ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊ.ಕೃಷ್ಣ್ಣಮೂರ್ತಿ ಪಿ., ಮಾಧವ ಭಂಡಾರಿ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು. ಸದಸ್ಯ ಸಂಚಾಲಕ ಯೋಗೀಶ್ ರಾವ್ ಚಿಗುರುಪಾದೆ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ದಾಮೋದರ ಶೆಟ್ಟಿ ವಂದಿಸಿದರು.
    ಕದ್ರಿ ನವನೀತ ಶೆಟ್ಟಿ ಸಂಪಾದಕತ್ವದ ‘ತುಳು ಯಕ್ಷಗಾನ ಪ್ರಸಂಗ ಸಂಪುಟ-7’, ಡಾ.ರಮಾನಂದ ಬನಾರಿ ಅವರ ‘ಯಕ್ಷಗಾನ ಸಂವಾದ ಭೂಮಿಕೆ’, ಪ್ರೊ.ಎಂ ಎ ಹೆಗಡೆ, ಯೋಗೀಶ್ ರಾವ್ ಚಿಗುರುಪಾದೆ ಅವರ ‘ಪಾರ್ತಿಸುಬ್ಬ ಬದುಕು ಬರಹ’ ಕೃತಿಗಳು ಅನಾವರಣಗೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts