More

    ರಂಗರೂಪಕಕ್ಕೆ ಮೂಕ ಪ್ರೇಕ್ಷಕರಾದ ಶಾಲಾ ಮಕ್ಕಳು

    ಕಕ್ಕೇರಾ: ಶಾಲೆಯಲ್ಲಿ ಯಾವುದೋ ಒಂದು ಕಾರ್ಯಕ್ರಮವಿದ್ದಾಗ ಗುರು ಬಳಗದ ಮಾತನ್ನು ಮೀರಿ ಶಾಲಾ ಮಕ್ಕಳು ಸ್ವಲ್ಪ ಗದ್ದಲ, ಗುಸುಗುಸು-ಪಿಸುಪಿಸು ಮಾತು, ಅತ್ತ-ಇತ್ತ ನೋಡುವುದು ಸಾಮಾನ್ಯ. ಆದರೆ ಪಟ್ಟಣದ ವಿವಿಧ ಶಾಲಾ ಮಕ್ಕಳು ದೇಶದ ಗಾಂಧೀಜಿ ಕುರಿತು ರಂಗರೂಪಕವನ್ನು ನಾಲ್ಕುನೂರು ವಿದ್ಯಾರ್ಥಿಗಳು ತುಟಿ ಪಿಟಕ್ಕೆನ್ನದೇ ಶಾಂತಚಿತ್ತದಿಂದ ವೀಕ್ಷಿಸಿದರು.

    ಹೌದು….. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜೀಂ ಪ್ರೇಮಜಿ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗಾಯಣ ಧಾರವಾಡದಿಂದ ಶುಕ್ರವಾರ ಹಮ್ಮಿಕೊಂಡ ಪಾಪು ಗಾಂಧಿ, ಗಾಂಧಿ ಬಾಪು ಹೇಗಾದ ಎಂಬ ಜೀವನ ಚಿತ್ರಣ ಜೀವಂತ ರಂಗಮಾದ್ಯಮದ ಮೂಲಕ 1ರಿಂದ 10ನೇ ವರ್ಗದ ಶಾಲಾ ಮಕ್ಕಳಿಗೆ ಕಲಾ ತಂಡ ಹಾಸ್ಯ ಮತ್ತು ಗಂಭೀರತೆಯಿಂದ ಪ್ರದರ್ಶಿಸುವ ಮೂಲಕ ಮಕ್ಕಳಿಗೆ ಗಾಂಧೀಜಿ ಜೀವನ ಚರಿತ್ರೆ ಪರಿಚಯಿಸಿದರು.

    ಪ್ರದರ್ಶನದ ನಂತರ ಮಾತನಾಡಿದ ತಾಲೂಕು ಸಂಯೋಜಕ ಸುರೇಶಗೌಡ, ಗಾಂಧಿ ಜನಿಸಿ 150 ವರ್ಷಗಳಾಗುತ್ತಿದ್ದರಿಂದ ಇಂತಹ ಮಹಾತ್ಮರ ಬಗ್ಗೆ ನಮ್ಮ ಮಕ್ಕಳಿಗೆ, ಯುವಜನತೆಗೆ ಪರಿಚಯಿಸುವುದು ಇಂದಿನ ತುತರ್ು ಅಗತ್ಯವಾಗಿದೆ ಎಂದರು.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಬಸವರಾಜ ಗುತ್ತೇದಾರ ಮಾತನಾಡಿದರು. ವಿವಿಧ ಶಾಲಾ ಮಕ್ಕಳು ಭಾಗವಹಿಸಿದ್ದರು. ಶಿಕ್ಷಕ ಗುರುಮೂತರ್ಿ ನಿರೂಪಣೆ ಮಾಡಿದರು. ಎಪಿಎಫ್ನ ರಮೇಶ ಕುಲಕರ್ಣಿ ಸ್ವಾಗತಿಸಿದರು. ರಂಜಾನ್ ಲೋಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts