More

    ಭಾರತ ತಂಡ ಮಣಿಸಿ ಟೆಸ್ಟ್ ವಿಶ್ವ ಚಾಂಪಿಯನ್ ಆದ ನ್ಯೂಜಿಲೆಂಡ್

    ಸೌಥಾಂಪ್ಟನ್: ಮಂದಬೆಳಕು, ಮಳೆಯಿಂದಾಗಿ ಮೂರು ದಿನಗಳ ಆಟ ನಷ್ಟವಾದರೂ ದಿಟ್ಟ ನಿರ್ವಹಣೆ ತೋರಿದ ನ್ಯೂಜಿಲೆಂಡ್ ತಂಡ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ಪಟ್ಟಕ್ಕೇರಿತು. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಭಾರತ ತಂಡಕ್ಕೆ ಕಡಿವಾಣ ಹಾಕಲು ಯಶಸ್ವಿಯಾದ ಕಿವೀಸ್ ಪಡೆ 8 ವಿಕೆಟ್‌ಗಳಿಂದ ಜಯ ದಾಖಲಿಸಿತು. ಇದರೊಂದಿಗೆ ಭಾರತೀಯ ಕ್ರಿಕೆಟ್‌ನ ಯಶಸ್ವಿ ನಾಯಕ ಎನಿಸಿಕೊಂಡಿರುವ ಕೊಹ್ಲಿ ನಾಯಕತ್ವದಲ್ಲಿ ಮೊದಲ ಐಸಿಸಿ ಟ್ರೋಫಿ ಜಯಿಸಲು ಭಾರತ ತಂಡ ವಿಫಲವಾಯಿತು.  ರೋಸ್‌ಬೌಲ್‌ನಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಭಾರತ ನೀಡಿದ 139 ರನ್ ಗೆಲುವಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ನಾಯಕ ಕೇನ್ ವಿಲಿಯಮ್ಸನ್ (52*ರನ್, 89 ಎಸೆತ, 8 ಬೌಂಡರಿ) ಹಾಗೂ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ (47*ರನ್, 100 ಎಸೆತ, 6 ಬೌಂಡರಿ) ಜೋಡಿಯ ಜವಾಬ್ದಾರಿಯುತ ನಿರ್ವಹಣೆ ಲವಾಗಿ 45.5 ಓವರ್‌ಗಳಲ್ಲಿ 2 ವಿಕೆಟ್‌ಗೆ 140 ರನ್‌ಗಳಿಸಿ ಜಯದ ನಗೆ ಬೀರಿತು. ಇದಕ್ಕೂ ಮೊದಲು 2 ವಿಕೆಟ್‌ಗೆ 64 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ, ಟಿಮ್ ಸೌಥಿ (48ಕ್ಕೆ 4) ಹಾಗೂ ಟ್ರೆಂಟ್ ಬೌಲ್ಟ್ (39ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿ 170 ರನ್‌ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ತಂಡದ ಮೊದಲ ಇನಿಂಗ್ಸ್ 32 ರನ್ ಚುಕ್ತಾಗೊಳಿಸಿ 138ರನ್ ಮುನ್ನಡೆ ಸಾಧಿಸಲಷ್ಟೇ ಶಕ್ತವಾಯಿತು. ಭಾರತ ಮೊದಲ ಇನಿಂಗ್ಸ್ 217 ರನ್‌ಗಳಿಸಿದರೆ, ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 249 ರನ್ ಪೇರಿಸಿತ್ತು.

    ಭಾರತ : 217 ಮತ್ತು 170 (ಪೂಜಾರ 15, ಕೊಹ್ಲಿ 13, ರಿಷಭ್ ಪಂತ್ 41, ಜಡೇಜಾ 16, ಟಿಮ್ ಸೌಥಿ 48ಕ್ಕೆ 4, ಟ್ರೆಂಟ್ ಬೌಲ್ಟ್ 39ಕ್ಕೆ 3, ಕೈಲ್ ಜೇಮಿಸನ್ 30ಕ್ಕೆ 2), ನ್ಯೂಜಿಲೆಂಡ್: 249 ಮತ್ತು 2 ವಿಕೆಟ್‌ಗೆ 140 (ಕೇನ್ ವಿಲಿಯಮ್ಸನ್ 52*, ರಾಸ್ ಟೇಲರ್ 47*, ಆರ್.ಅಶ್ವಿನ್ 17ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts