More

    ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುಸಾರ್ವಭೌಮರ ಪೂರ್ವಾರಾಧನೆ ಅದ್ದೂರಿ

    ಗಂಗಾವತಿ: ನಗರದ ರಾಯರ ಓಣಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ಪೂರ್ವರಾಧನೆ ನಡೆಯಿತು.

    ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ, ಪಾದಪೂಜೆಯೊಂದಿಗೆ ಕನಕಾಭಿಷೇಕ, ಹಸ್ತೋದಕ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಜರುಗಿತು.

    ಶ್ರೀ ವಿಜಯವಿಠ್ಠಲ ಮಹಿಳಾ ಭಜನಾ ಮಂಡಳಿಯಿಂದ ಹರಿಕಥಾಮೃತಸಾರ ಪಾರಾಯಣ, ಸಂಕೀರ್ತನೆ ನೆರವೇರಿಸಲಾಯಿತು. ಮೃತ್ತಿಕಾ ವೃಂದಾವನವನ್ನು ಹೂವು, ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

    ಮೂರು ದಿನಗಳ ಆರಾಧನೆ ಕುರಿತು ಮಠದ ವ್ಯವಸ್ಥಾಪಕ ಸಾಮವೇದ ಗುರುರಾಜಾಚಾರ್ ಮಾಹಿತಿ ನೀಡಿದರು. ವಿಚಾರಣಕರ್ತ ರಾಮಕೃಷ್ಣ ಜಹಾಗೀರದಾರ್, ನಗರಸಭೆ ಸದಸ್ಯ ವಾಸುದೇವ ನವಲಿ, ವಿಪ್ರ ಸಮಾಜದ ಮುಖಂಡರಾದ ಅಪ್ಪಣ್ಣ, ನವಲಿ ಪ್ರಲ್ಹಾದರಾವ್, ಸತ್ಯನಾರಾಯಣರಾವ್ ದೇಶಪಾಂಡೆ, ಗೋಪಾಲಕೃಷ್ಣ ಹೇರೂರು, ವೆಂಕೋಬರಾವ್, ಹನುಮಂತರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts