More

    ಗೋಕರ್ಣದಲ್ಲಿ ಮಹಾರಥಕ್ಕೆ ಪೂಜೆ

    ಗೋಕರ್ಣ: ರಥ ಸಪ್ತಮಿ ಪರ್ವದಿನವಾದ ಶುಕ್ರವಾರ ಮಹಾಶಿವರಾತ್ರಿಯಲ್ಲಿ ವಿಶೇಷವಾಗಿ ಎಳೆಯಲಾಗುವ ಶ್ರೀ ಮಹಾಬಲೇಶ್ವರ ಮಹಾರಥಕ್ಕೆ ಕ್ಷೇತ್ರ ಪದ್ಧತಿಯಂತೆ ಶಾಸ್ತ್ರೋಕ್ತ ಪೂಜೆ ಸಲ್ಲಿಸಲಾಯಿತು. ತರುವಾಯ ರಥ ಕಟ್ಟೋಣ ಕಾರ್ಯ ನಿಮಿತ್ತ ಭಕ್ತರು ಮಹಾರಥವನ್ನು ಸ್ವಸ್ಥಾನದಿಂದ ಎಳೆದು ಹೊರಕ್ಕೆ ತಂದರು. ಮಹಾರಥದ ಕಟ್ಟೋಣ ಕಾರ್ಯ ಮತ್ತು ನಿರ್ವಹಣೆ ಹೊಣೆಹೊತ್ತ ವಿವಿಧ ಸಮಾಜ ಪ್ರಮುಖರು ತಮ್ಮ ಪಾರಂಪರಿಕ ಕರ್ತವ್ಯ ನಿಭಾಯಿಸಿದರು. ಮಂದಿರ ಸಮಿತಿಯ ವೇ. ಮಹಾಬಲ ಉಪಾಧ್ಯ, ದತ್ತಾತ್ರೇಯ ಹಿರೇಗಂಗೆ, ತಹಸೀಲ್ದಾರ್ ಪ್ರವೀಣ ಕರಾಂಡೆ, ಹಾಲಕ್ಕಿ ಸಮಾಜ ಪ್ರಮುಖ ಸೋಮ ಗೌಡ ಅಂಗೈಯ್ಯನಮನೆ, ತಾಲೂಕು ಹಾಲಕ್ಕಿ ಒಕ್ಕಲಿಗ ಸಂಘದ ಅಧ್ಯಕ್ಷ ಗೋವಿಂದ ಗೌಡ, ಮಾರುತಿ ತಾಂಡೇಲ ಮತ್ತು ಕ್ಷೇತ್ರದ ಉಪಾಧಿವಂತ ವೈದಿಕರಿದ್ದರು.

    ಮಾ. 4 ರಿಂದ ಪ್ರಾರಂಭ: ವಾರ್ಷಿಕ ಶ್ರೀ ಮಹಾಬಲೇಶ್ವರ ಮಹಾಶಿವರಾತ್ರಿ ಜಾತ್ರೋತ್ಸವ ಮಾ. 4ರಿಂದ ಪ್ರಾರಂಭವಾಗಲಿದೆ. ಮಾ. 8ರಂದು ಶಿವಯೋಗ ಮತ್ತು ಮಹಾಶಿವರಾತ್ರಿ ಆಚರಣೆ ಹಾಗೂ ಮಾ. 11ರಂದು ಶ್ರೀ ಮಹಾಬಲೇಶ್ವರ ಮಹಾರಥೋತ್ಸವ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts