More

    ಅತ್ಯಂತ ಹಿರಿಯ ಪುರುಷನೆಂಬ ಗಿನ್ನೆಸ್​ ದಾಖಲೆ ಬರೆದ ಜಪಾನ್ ವ್ಯಕ್ತಿ: ಇವರ ದೀರ್ಘಾಯುಷ್ಯದ ಗುಟ್ಟೇನು ಗೊತ್ತಾ?

    ಟೋಕಿಯೊ: ತನ್ನ ನಗುವಿನ ಮೇಲೆ ಬಲವಾದ ನಂಬಿಕೆ ಇಟ್ಟಿರುವ ಜಪಾನ್​ ವ್ಯಕ್ತಿಯೊಬ್ಬ 112 ವರ್ಷ ಹಾಗೂ 344 ದಿನದೊಂದಿಗೆ ವಿಶ್ವದ ಅತ್ಯಂತ ಹಿರಿಯ ಪುರುಷನೆಂಬ ಗಿನ್ನೆಸ್​ ವಿಶ್ವದಾಖಲೆಯ ಭಾಜನಕ್ಕೆ ಪಾತ್ರರಾಗಿದ್ದಾರೆ.

    ಉತ್ತರ ಜಪಾನ್​ನ ನಿಗಾಟ ನಿವಾಸಿಯಾಗಿರುವ ಛಿತೆತ್ಸು ವಾಟನಬೆ 1907ರಲ್ಲಿ ಜನಿಸಿದರು. ದೀರ್ಘಾಯುಷಿ ಸಾಧನೆ ಮಾಡಿರುವ ಛಿತೆತ್ಸು ಬುಧವಾರ ತಮ್ಮ ಸಾಧನೆಯ ಅಂಗವಾಗಿ ಗಿನ್ನೆಸ್​ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ಪಡೆದುಕೊಂಡರು.

    ಇದೇ ವೇಳೆ ನಿಮ್ಮ ದೀರ್ಘಾಯುಷ್ಯದ ಗುಟ್ಟೇನು ಎಂದು ಛಿತೆತ್ಸುರನ್ನು ಪ್ರಶ್ನಿಸಿದಾಗ “ಕೋಪ ಮಾಡಿಕೊಳ್ಳಬೇಡಿ ಮತ್ತು ಯಾವಾಗಲೂ ನಗುತ್ತಿರಿ” ಎಂದು ಸಲಹೆ ನೀಡಿದರು.

    ಇದಕ್ಕೂ ಮುನ್ನ ಅತ್ಯಂತ ಹಿರಿಯ ಪುರುಷ ಎನಿಸಿಕೊಂಡಿದ್ದ ಜಪಾನ್​ ಮೂಲದವರೇ ಆದ ಮಸಾಜೊ ನೊನಕಾ ಕಳೆದ ತಿಂಗಳು ಮರಣ ಹೊಂದಿದರು. ವಿಶೇಷವೆಂದರೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಕೀರ್ತಿಗೆ ಕೇನ್​ ತನಕಾ ಪಾತ್ರರಾಗಿದ್ದಾರೆ. 117 ವರ್ಷ ವಯಸ್ಸಾಗಿದ್ದು, ಇವರು ಕೂಡ ಜಪಾನ್​ ಮೂಲದವರು. ವಿಶ್ವದ ಅತ್ಯಂತ ಹಿರಿಯ ಮಹಿಳೆಯು ಹೌದು.

    ಕೃಷಿ ಶಾಲೆಯಲ್ಲಿ ಪದವೀಧರರಾಗಿರುವ ಛಿತೆತ್ಸು, ತೈವಾನ್​ನ ದೈ ನಿಪ್ಪಾನ್ ಮೇಜಿ ಸುಗರ್​ನಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 18 ವರ್ಷಗಳ ಕಾಲ ತೈವಾನ್​ನಲ್ಲಿ ವಾಸವಿದ್ದರು. ಮಿತ್ಸೂ ಎಂಬಾಕೆಯನ್ನು ಛಿತೆತ್ಸು ಮದುವೆಯಾಗಿದ್ದು, ಇವರಿಗೆ ಐವರು ಮಕ್ಕಳಿದ್ದಾರೆ. ಎರಡನೇ ವಿಶ್ವಯುದ್ಧ ಮುಗಿದ ಬಳಿಕ ನಿಗಾಟಗೆ ಮರಳಿದ ಛಿತೆತ್ಸು ನಿವೃತ್ತಿಯವರೆಗೂ ಸರ್ಕಾರಿ ಸೇವೆ ಸಲ್ಲಿಸಿದ್ದಾರೆ ಎಂದು ಗಿನ್ನೆಸ್​ ರೆಕಾರ್ಡ್​ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts