More

    ಹಿರಿಯರಿಗೆ 5 ಸಾವಿರ ಊರುಗೋಲು ಶಿಘ್ರ

    ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಮಾಹಿತಿ

    ವೃದ್ಧರ ಆರೋಗ್ಯ ರಕ್ಷಣೆಗೆ ತಪಾಸಣಾ ಶಿಬಿರ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಜಿಲ್ಲೆಯ ಹಿರಿಯ ನಾಗರಿಕರಿಗೆ ಶೀಘ್ರದಲ್ಲೇ 5 ಸಾವಿರ ಊರುಗೋಲು ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಂಶಕರ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ದೇವನಹಳ್ಳಿಯ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದರು.
    ಪ್ರತಿ ತಾಲೂಕುಮಟ್ಟದಲ್ಲಿ ಹಿರಿಯ ನಾಗರಿಕರ ಕಾನೂನು ಅರಿವಿಗಾಗಿ ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯ ಕಾರ್ಯಾಗಾರ ಏರ್ಪಡಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದರು.
    ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿವಾರು ಹಾಗೂ ಗ್ರಾಮವಾರು ಹಿರಿಯ ನಾಗರಿಕರಿಗೆ ಅವಶ್ಯಕವಾದ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯಾ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
    ನಿರಾಶ್ರಿತ ಹಿರಿಯ ನಾಗರಿಕರ ರಕ್ಷಣೆ, ಇಲಾಖೆಯ ಸಂಗಮ ಯೋಜನೆ ಹಾಗೂ ಪ್ರತಿ ಶುಕ್ರವಾರ ಹಿರಿಯ ನಾಗರಿಕರ ಮನರಂಜನಾ ಕಾರ್ಯಕ್ರಮದ ಜತೆಗೆ ಹೊಸ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಅನುಷ್ಠಾನಗೊಳಿಸಿದ್ದಕ್ಕಾಗಿ ಇಲಾಖೆ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
    ಹಿರಿಯರಿಗೆ ಆದ್ಯತೆ ಮೇರೆಗೆ ನೆರವು:
    ಜಿಪಂನಿಂದಲೂ ಹಿರಿಯ ನಾಗರಿಕರಿಗೆ ಆದ್ಯತೆ ಮೇರೆಗೆ ಸೌಲಭ್ಯ ದೊರಕಿಸಿ ಕೊಡುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ಎನ್.ಅನುರಾಧಾ ತಿಳಿಸಿದರು.
    ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಂಡು ಸಂತೋಷದ ಜೀವನ ನಡೆಸಲು ಅನುವು ಮಾಡಿಕೊಡಬೇಕು. ತಲೆಮಾರುಗಳಿಂದ ಹಿರಿಯ ನಾಗರಿಕರಿಗಾಗಿ ಸಾರ್ವತ್ರಿಕವಾಗಿ ಘೋಷಿಸಲಾದ ಮಾನವ ಹಕ್ಕುಗಳ ಭರವಸೆಗಳನ್ನು ಈಡೇರಿಸುವುದು ನಮ್ಮೆರಲ್ಲರ ಕರ್ತವ್ಯಾಗಿದೆ. ಇದು 2023 ರ ವಿಶ್ವಸಂಸ್ಥೆಯ ಘೋಷ ವಾಕ್ಯವಾಗಿದೆ ಎಂದರು.
    ಗೌರವಿಸುವ ಪ್ರವೃತ್ತಿ ಹೆಚ್ಚಬೇಕು:
    ಪ್ರತಿ ಮನೆಯಲ್ಲಿಯೂ ಹಿರಿಯ ನಾಗರಿಕರನ್ನು ಗೌರವಿಸುವ ಪ್ರವೃತ್ತಿ ಹೆಚ್ಚಾಗಬೇಕು ಹಾಗೂ ಹಿರಿಯರ ಮತ್ತು ಕಿರಿಯರ ಬಾಂಧವ್ಯ ಹೆಚ್ಚಿಸಿಕೊಳ್ಳುವ ಕೌಟುಂಬಿಕ ವಾತಾವರಣ ನಿರ್ಮಾಣವಾಗಬೇಕು. ಇದಕ್ಕಾಗಿಯೇ ಇಲಾಖೆಯಿಂದ ಜಿಲ್ಲಾಮಟ್ಟದ ಸಂಗಮ, ಹಿರಿಯರು ಮತ್ತು ಕಿರಿಯರ ವಾತ್ಸಲ್ಯದ ವೇದಿಕೆ ಹಾಗೂ ಪ್ರತಿ ಶುಕ್ರವಾರ ಹಿರಿಯ ನಾಗರಿಕರ ಮನರಂಜನ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಎನ್.ಎಂ.ಜಗದೀಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts