More

    ಚೀನಾದೊಂದಿಗೆ ವ್ಯವಹಾರ ನಡೆಸಲು ಬಯಸುತ್ತಿಲ್ಲ ವಿಶ್ವದ ಉಳಿದ ದೇಶಗಳು..ಭಾರತಕ್ಕೆ ಇದು ವರದಾನ: ಸಚಿವ ನಿತಿನ್​ ಗಡ್ಕರಿ

    ನವದೆಹಲಿ: ಜಗತ್ತು ಚೀನಾದಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತಿದೆ. ಉಳಿದ ವಿಶ್ವದ ಎಲ್ಲ ದೇಶಗಳೂ ಚೀನಾದೊಂದಿಗೆ ಯಾವುದೇ ವ್ಯವಹಾರ ಇಟ್ಟುಕೊಳ್ಳಲು ಇಷ್ಟಪಡುತ್ತಿಲ್ಲ. ಇದು ಭಾರತಕ್ಕೆ ವರದಾನವಾಗಿದೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.

    ಕರೊನಾ ಲಾಕ್​ಡೌನ್​ನಿಂದ ನಷ್ಟದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ (MSMEs) ಉದ್ಯಮಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡಲಿರುವ ಸಹಕಾರ, ಆರ್ಥಿಕ ಉತ್ತೇಜನಕ್ಕೆ ತೆಗೆದುಕೊಳ್ಳುವ ಕ್ರಮಗಳ ಕುರಿತು ಮಾಧ್ಯಮವೊಂದರ ಜತೆ ಮಾತನಾಡುತ್ತ ಗಡ್ಕರಿ ಹೀಗೆ ಹೇಳಿದ್ದಾರೆ.

    ಕರೊನಾ ಕಾರಣದಿಂದ ಸದ್ಯ ವಿಶ್ವದ ಎಲ್ಲ ದೇಶಗಳ ಆರ್ಥಿಕತೆ ಸಂಕಷ್ಟದಲ್ಲಿದೆ. ಅಷ್ಟಾದರೂ ಸೂಪರ್​ ಎಕಾನಾಮಿಕ್​ ಪವರ್​ ಹೊಂದಿರುವ ಚೀನಾ ದೇಶದ ಜತೆ ಯಾರೂ ವ್ಯವಹಾರ ಮಾಡಲು ಮುಂದೆ ಬರುತ್ತಿಲ್ಲ. ಇದು ಭಾರತಕ್ಕೆ ಸಿಕ್ಕ ಒಂದು ವರದಾನ.

    ಅಲ್ಲದೆ, 2025ರ ಹೊತ್ತಿಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್​​ ಡಾಲರ್​ಗೆ ಏರಿಸುವ ಮಹತ್ವಾಕಾಂಕ್ಷೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಂದಿದ್ದಾರೆ. ಈ ಕನಸನ್ನು ಈಡೇರಿಸಿಕೊಳ್ಳಲು ಸಿಕ್ಕ ಸದಾವಕಾಶ ಎಂದಿದ್ದಾರೆ.

    ಭಾರತದ ಆರ್ಥಿಕತೆ ಅಭಿವೃದ್ಧಿಗಾಗಿ. ಹೊಸ ತಂತ್ರಜ್ಞಾನಗಳನ್ನು ಹೂಡಿಕೆಯನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ಜಂಟಿ ಕಾರ್ಯದರ್ಶಿಯನ್ನು ನಿಯೋಜಿಸಲಾಗುವುದು ಎಂದು ನಿತಿನ್​ ಗಡ್ಕರಿ ತಿಳಿಸಿದ್ದಾರೆ.

    ಭಾರತ ಮತ್ತು ಚೀನಾ ಎರಡೂ ದೇಶಗಳ ಆರ್ಥಿಕತೆ ಕರೊನಾ ವೈರಸ್​ನಿಂದ ತೀವ್ರ ಹೊಡೆತಕ್ಕೆ ಒಳಗಾಗಿವೆ. (ಏಜೆನ್ಸೀಸ್)

    ಸಂಪೂರ್ಣ ದೆಹಲಿ ಕೊರೊನಾ ವೈರಸ್​ ಹಾಟ್​ಸ್ಪಾಟ್​ ಅಲ್ಲ: ಆರೋಗ್ಯ ಸಚಿವ ಸತ್ಯೇಂದರ್​ ಜೈನ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts