More

    ಸಂಪೂರ್ಣ ದೆಹಲಿ ಕೊರೊನಾ ವೈರಸ್​ ಹಾಟ್​ಸ್ಪಾಟ್​ ಅಲ್ಲ: ಆರೋಗ್ಯ ಸಚಿವ ಸತ್ಯೇಂದರ್​ ಜೈನ್​​

    ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ನಗರದಲ್ಲಿ 92 ಕೊರೊನಾ ವೈರಸ್​ ಕಾಯಿಲೆ ಹಾಟ್​ಸ್ಪಾಟ್​ಗಳಿವೆಯೇ ಹೊರತು ಸಂಪೂರ್ಣ ನಗರ ಹಾಟ್​ಸ್ಪಾಟ್​ ಅಲ್ಲ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್​ ಜೈನ್​ ತಿಳಿಸಿದ್ದಾರೆ. ಲಾಕ್​ಡೌನ್​ ನಿಯಮಾವಳಿಗಳನ್ನು ಸರ್ಕಾರ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಈ ಕುರಿತು ಅವರು ಒತ್ತಿ ಹೇಳಿದರು.

    ರಾಷ್ಟ್ರ ರಾಜಧಾನಿಯಲ್ಲಿ ಎಂದಿನಂತೆ ಲಾಕ್​ಡೌನ್​ ಮುಂದುವರಿಯುತ್ತದೆ ಮತ್ತು ಏಪ್ರಿಲ್​ 27 ರಂದು ತಜ್ಞರ ಪರಿಶೀಲನಾ ಸಭೆಯ ಮೊದಲು ಯಾವುದೇ ನಿಷೇಧವನ್ನು ಸಡಿಸಲಾಗುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಈ ವಾರದ ಆರಂಭದಲ್ಲಿ ಹೇಳಿದ್ದರು.

    ಶುಕ್ರವಾರ ಮಧ್ಯರಾತ್ರಿಯ ಆದೇಶದಲ್ಲಿ ಕೇಂದ್ರ ಗೃಹ ಕಾರ್ಯದಶಿರ್ ಅಜಯ್​ ಭಲ್ಲಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂಬ ಷರತ್ತಿನ ಮೇಲೆ ನೆರೆಹೊರೆ ಅಂಗಡಿಗಳು, ಸ್ವತಂತ್ರ ಅಂಗಡಿಗಳು ಹಾಗೂ ವಸತಿ ಸಮುಚ್ಛಯದಲ್ಲಿರುವ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರು.

    ಕರೊನಾ ವೈರಸ್​ ಹರಡುವಿಕೆಯನ್ನು ನಿಯಂತ್ರಿಸಲು ಜಾರಿಗೆ ತಂದಿರುವ ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ದೆಹಲಿ ಸರ್ಕಾರ ಯೋಚಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೈನ್​, ದೆಹಲಿಯಲ್ಲಿ 92 ಕರೊನಾ ಹಾಟ್​ಸ್ಪಾಟ್​ಗಳಿವೆ. ಇಡೀ ಜಿಲ್ಲೆ ಅಥವಾ ಇಡೀ ನಗರ ಹಾಟ್​ಸ್ಪಾಟ್​ ಅಲ್ಲ ಎಂದರು.

    ದೆಹಲಿಯಲ್ಲಿ ಹಿಂದಿನ ರಾತ್ರಿಯವರೆಗೆ 2514 ಕೋವಿಡ್​ & 19 ಪ್ರಕರಣಗಳು ವರಿದಯಾಗಿವೆ. ಅವುಗಳಲ್ಲಿ 128 ಪ್ರಕರಣಗಳು ಹಿಂದಿನ 24 ತಾಸುಗಳ ಅವಧಿಯಲ್ಲಿ ಕಂಡುಬಂದವುಗಳಾಗಿವೆ.

    ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಈ ವಾರದ ಆರಂಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಎಂದಿನಂತೆ ಲಾಕ್​ಡೌನ್​ ಮುಂದುವರಿಯುತ್ತದೆ ಮತ್ತು ಏಪ್ರಿಲ್​ 27 ರಂದು ತಜ್ಞರ ಪರಿಶೀಲನಾ ಸಭೆಯ ಮೊದಲು ಯಾವುದೇ ನಿಷೇಧವನ್ನು ಸಡಿಲಿಸಲು ಅನುಮತಿಸುವುದಿಲ್ಲ ಎಂದಿದ್ದರು.

    ಯಲ್ಲಿ ಕರೊನಾ ವೈರಸ್​ ಪ್ರಕರಣಗಳು ದ್ವಿಗುಣಗೊಳ್ಳುತ್ತಿರುವ ದರ ಈಗ 13 ದಿನಗಳಿಗೆ ಇಳಿದಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

    ಎಲ್ಲ ಪ್ರಕರಣಗಳ ಪೈಕಿ 857 ಜನರು ಸಂಪೂರ್ಣ ಚೇತರಿಸಿಕೊಂಡಿದ್ದರೆ 53 ಜನ ಸಾವನ್ನಪ್ಪಿದ್ದಾರೆ. 29 ಜನ ತುರ್ತು ನಿಗಾ ಟಕದಲ್ಲಿದ್ದಾರೆ ಎಂದು ಸಚಿವರು ತಿಳಿಸಿದರು. ಪ್ಲಾಸ್ಮಾ ಥೆರಪಿ ಕುರಿತು ಮಾತನಾಡಿದ ಅವರು, ಆರು ರೋಗಿಗಳ ಮೇಲೆ ಈ ಚಿಕಿತ್ಸೆಯನ್ನು ಪ್ರಯೋಗಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಇಬ್ಬರು ರೋಗಿಗಳಿಗೆ ಇದನ್ನು ಬಳಸಲಾಗಿದೆ. ಗುರುವಾರ ಹಾಗೂ ಶುಕ್ರವಾರ ಇಬ್ಬಿಬ್ಬರಿಗೆ ಈ ಚಿಕಿತ್ಸೆ ನೀಡಲಾಗಿದೆ. ನಾಲ್ಕು ದಿನಗಳ ಹಿಂದೆ ಈ ಚಿಕಿತ್ಸೆ ಪಡೆದವರು ಭಾಗಶಃ ಗುಣಮುಖರಾಗಿದ್ದು, ಫಲಿತಾಂಶ ಆಶಾದಾಯಕವಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts