More

    ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಶೈಲಿ ಸಿಂಗ್

    ನೈರೋಬಿ: ಭಾರತದ ಉದಯೋನ್ಮುಖ ಅಥ್ಲೀಟ್ ಶೈಲಿ ಸಿಂಗ್, 20 ವಯೋಮಿತಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ರಜತ ಪದಕ ಜಯಿಸಿದ್ದಾರೆ. ಇದರೊಂದಿಗೆ ಕೂಟದಲ್ಲಿ ಭಾರತ ಜಯಿಸಿದ ಪದಕಗಳ ಸಂಖ್ಯೆ 3ಕ್ಕೇರಿತು. ಕೂಟದ ಕಡೇ ದಿನವಾದ ಭಾನುವಾರ ನಡೆದ ಸ್ಪರ್ಧೆಯಲ್ಲಿ ಶೈಲಿ ಸಿಂಗ್ ಕೇವಲ 1 ಸೆಂಟಿ ಮೀಟರ್‌ನಿಂದ ಸ್ವರ್ಣ ಪದಕಕ್ಕೆ ಮುತ್ತಿಕ್ಕುವ ಅವಕಾಶ ತಪ್ಪಿಸಿಕೊಂಡರು.

    ಇದನ್ನೂ ಓದಿ: ಫುಟ್‌ಬಾಲ್ ದಿಗ್ಗಜ ಎಸ್‌ಎಸ್ ಹಕೀಂ ನಿಧನ

    ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದ ಶೈಲಿ ಸಿಂಗ್ ಅವರಿಂದ ಸ್ವರ್ಣ ಪದಕ ನಿರೀಕ್ಷಿಸಲಾಗಿತ್ತು. ಸ್ವೀಡನ್ ಸ್ಪರ್ಧಿಯಿಂದ ಪ್ರಬಲ ಪೈಪೋಟಿ ಎದುರಿಸಿದ ಶೈಲಿ ಸಿಂಗ್ 6.59 ಮೀಟರ್ ಹಾರುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸ್ವೀಡನ್‌ನ ಮಾಜಾ ಅಸ್ಕಾಂಗ್ (6.60ಮೀ) ಕೂದಲೆಳೆ ಅಂತರದಲ್ಲಿ ಭಾರತೀಯ ಸ್ಪರ್ಧಿಯನ್ನು ಹಿಂದಿಕ್ಕಿ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೊಂದಿಗೆ ಸ್ವರ್ಣ ಗೆದ್ದುಕೊಂಡರು. ಉಕ್ರೇನ್‌ನ ಮಾರಿಯಾ ಹೊರಿಲೊವಾ (6.50ಮೀ) ಕಂಚಿನ ಪದಕ ಪಡೆದರು.

    ಇದನ್ನೂ ಓದಿ: ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿ ಮೈಕ್ ಹೆಸ್ಸನ್,

    ಬೆಂಗಳೂರಿನ ಕಂಗೇರಿಯಲ್ಲಿರುವ ಅಂಜು ಬಾಬಿ ಜಾರ್ಜ್ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 18 ವರ್ಷದ ಶೈಲಿ ಸಿಂಗ್, ಮೊದಲ ಎರಡು ಯತ್ನಗಳಲ್ಲಿ ತಲಾ 6.34 ಮೀಟರ್ ಹಾರುವ ಮೂಲಕ ಉತ್ತಮ ಆರಂಭ ಪಡೆದರು. 3ನೇ ಯತ್ನದಲ್ಲಿ 6.59 ಮೀಟರ್ ಹಾರಿ ಮೊದಲ ಸ್ಥಾನಕ್ಕೇರಿದರು. ಆದರೆ, ಮರು ಯತ್ನದಲ್ಲೇ ಸ್ವೀಡನ್ ಅಥ್ಲೀಟ್ 6.60 ಮೀಟರ್ ಹಾರಿ ಅಗ್ರಸ್ಥಾನ ಕಾಯ್ದುಕೊಂಡರು. ಕಡೇ ಮೂರು ಯತ್ನಗಳ ಪೈಕಿ ಎರಡಲ್ಲಿ ಫೌಲ್ ಆದ ಶೈಲಿ ಸಿಂಗ್, 6ನೇ ಹಾಗೂ ಕಡೇ ಯತ್ನದಲ್ಲಿ 6.37 ಮೀಟರ್ ಹಾರಲಷ್ಟೇ ಶಕ್ತರಾದರು. ಇದರೊಂದಿಗೆ ಸ್ವರ್ಣ ಪದಕ ಜಯಿಸುವ ಅಪರೂಪದ ಅವಕಾಶದಿಂದ ಶೈಲಿ ಸಿಂಗ್ ವಂಚಿತಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts