More

    ವಿಶ್ವ ಭಾರತದತ್ತ ತಿರುಗಿ ನೋಡಲು ಕನಕದಾಸರು ಕಾರಣ

    ಶಿವಮೊಗ್ಗ: ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿರುವುದಕ್ಕೆ ಅಂದು ಭಕ್ತ ಕನಕದಾಸರು ಹಾಕಿಕೊಟ್ಟ ಮಾರ್ಗವೇ ಕಾರಣ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ಕುವೆಂಪು ರಂಗಮಂದಿರದಲ್ಲಿ ಭಾನುವಾರ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಕನಕದಾಸರ ಜಯಂತಿ, ರಾಜ್ಯಮಟ್ಟದ ಕನಕ ಕಥಾ ಕೀರ್ತನ ಮಹೋತ್ಸವ, ಕನಕ ಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತಂಜಲಿ ಪತ್ರಿಕ ವಿಶೇಷಾಂಕ ಹಾಗೂ ಕಾಗಿನೆಲೆಯ ಕನಕದಾಸರು ಸಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
    ಕುಲ ಕುಲವೆಂದು ಹೊಡೆದಾಡಬಾರದು. ಜಾತಿ, ಧರ್ಮಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಬಾಳುವಂತೆ ಕನಕದಾಸರು ಈ ಹಿಂದೆಯೇ ಹೇಳಿದ್ದರು. ಅದರ ಫಲವಾಗಿ ಭಾರತ ಇಂದು ಆಧ್ಯಾತ್ಮ ಶಕ್ತಿಯಾಗಿ ಬೆಳೆದಿದೆ. ಹಾಗಾಗಿ ವಿಶ್ವದ ಹಲವು ದೇಶಗಳು ಭಾರತವನ್ನು ಅನುಕರಣೆ ಮಾಡುವಂತಾಗಿದೆ. ಕೆಲ ದೇಶಗಳು ಆರ್ಥಿಕತೆಯಲ್ಲಿ ಮುಂದಿದ್ದರೂ ಮಾನಸಿಕವಾಗಿ ನೆಮ್ಮದಿ ಹೊಂದಿಲ್ಲ. ಅವರಿಗೆ ಆಧುನಿಕತೆ ಗೊತ್ತಿದೆಯೋ ವಿನಃ ಆಧ್ಯಾತ್ಮ ಗೊತ್ತಿಲ್ಲ ಎಂದರು.
    ಕೋಟಿ ಕೋಟಿ ಜನರು ಕನಕದಾಸರ ವಿಚಾರಗಳನನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಇನ್ನೂ ಹಲವರು ಅವರ ವಿಚಾರಗಳನ್ನು ಅನುಕರಣೆ ಮಾಡುವ ಮೂಲಕ ಒಟ್ಟಾಗಿ ಮುನ್ನೆಡೆಯಬೇಕಿದೆ. ಸಮಾಜ, ಧರ್ಮ ಉಳಿವಿಗಾಗಿ ಒಟ್ಟಾಗಿ ಬಾಳಬೇಕಿದೆ. ಆಗ ಕನಕದಾಸರು ಕಂಡ ಕನಸು ನನಸಾಗಲಿದೆ ಎಂದರು.
    ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜು ಪ್ರಸ್ತಾವಿಕ ಮಾತನಾಡಿದರು. ಕಾಗಿನೆಲೆ ಕನಕ ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪತಂಜಲಿ ಸಂಸ್ಥೆ ಅಧ್ಯಕ್ಷ ನವುಲೆ ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಶೋಧಕ ಲಿಂಗದಹಳ್ಳಿ ಹಾಲಪ್ಪ, ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ, ಮುಖಂಡರಾದ ವೈ.ಎಚ್.ನಾಗರಾಜ್, ಹಾಲಪ್ಪ, ಸುಶೀಲಾ ಭವಾನಿಶಂಕರ್, ಪತಂಜಲಿ ಸಂಸ್ಥಾಪಕ ಗೌರವಾಧ್ಯಕ್ಷ ಡಾ. ಎನ್.ಎಲ್.ನಾಯಕ್, ಕಾರ್ಯದರ್ಶಿ ಪತಂಜಲಿ ಜೆ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts